ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ramayana Movie: ರಣ್​​ಬೀರ್ ಕಪೂರ್ ಧರಿಸಿದ್ದ ಅಪರೂಪದ ವಾಚ್ ಬೆಲೆ ಎಷ್ಟು?

Ramayana Movie: ದೀಪಾವಳಿ ಹಬ್ಬಕ್ಕೆ ರಾಮಾಯಣ ಸಿನಿಮಾ (Ramayana Movie) ಬಿಡುಗಡೆಯ ಮುನ್ನ, ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ , ಯಶ್, ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ರವಿ ದುಬೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸಿದ್ದರು.

ರಣ್​​ಬೀರ್ ಕಪೂರ್ ಧರಿಸಿದ್ದ ಅಪರೂಪದ ವಾಚ್ ಬೆಲೆ ಎಷ್ಟು?

ರಣಬೀರ್‌ ಕಪೂರ್‌ -

Yashaswi Devadiga
Yashaswi Devadiga Oct 22, 2026 7:49 PM

ದೀಪಾವಳಿ ಹಬ್ಬಕ್ಕೆ ರಾಮಾಯಣ ಸಿನಿಮಾ (Ramayana Movie) ಬಿಡುಗಡೆಯ ಮುನ್ನ, ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ (Rabir Kapoor), ಯಶ್, ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ರವಿ ದುಬೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸಿದ್ದರು.

ರಾಮನ ಪಾತ್ರಧಾರಿ ರಣಬೀರ್ ಕಪೂರ್, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರೊಂದಿಗೆ ಸಹನಟರಾದ ಯಶ್ , ಸಾಯಿ ಪಲ್ಲವಿ, ರಾಕುಲ್ ಪ್ರೀತ್ ಸಿಂಗ್ ಮತ್ತು ರವಿ ದುಬೆ ಕೂಡ ಇದ್ದರು.

ಗಡಿಯಾರದ ವಿಶೇಷತೆ ಇದು

ರಣಬೀರ್ ಕಪೂರ್ ನೇವಿ ಬ್ಲೂ ಬಂಧಗಾಲಾ ಜಾಕೆಟ್, ಬಿಳಿ ಶರ್ಟ್ ಮತ್ತು ಚಿನ್ನದ ಗರುಡ ಆಕಾರದ ಬ್ರೋಚ್ ಧರಿಸಿದ್ದರು. ಆದರೆ ಅವರ ಕೈಗಡಿಯಾರವೇ ಹೆಚ್ಚು ಗಮನ ಸೆಳೆಯಿತು. ಅವರು ರಾಯಲ್ ಬ್ಲೂ ಬಣ್ಣದ ಜೇಕಬ್ ಅಂಡ್ ಕೋ. ಎಪಿಕ್ ಎಕ್ಸ್ ಶೇರ್-ಎ-ಪಂಜಾಬ್ 9 (Jacob & Co. Epic X Sher-e-Punjab Edition) ಎಡಿಷನ್ ಗಡಿಯಾರವನ್ನು ಧರಿಸಿದ್ದರು.

ಇದನ್ನೂ ಓದಿ: Bigg Boss Kannada 13: ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ!

ಇದು ಸಿಖ್ ಧರ್ಮದಿಂದ ಪ್ರೇರಿತವಾದ ಚಿಹ್ನೆಗಳು ಮತ್ತು ಆಕರ್ಷಕ ನೀಲಿ ಪಟ್ಟಿ ಹೊಂದಿರುವ ಟೈಟಾನಿಯಂ ವಾಚು ಇದಾಗಿದ್ದು ಇದರ ಬೆಲೆ 35.88 ಲಕ್ಷ ರೂಪಾಯಿಗಳು. ವಿಶ್ವಾದ್ಯಂತ ಕೇವಲ 50 ವಾಚುಗಳನ್ನು ಮಾತ್ರವೇ ತಯಾರಿಸಲಾಗಿದೆ, ಹಾಗಾಗಿ ಇದು ಬಲು ಅಪರೂಪದ ವಾಚ್ ಆಗಿದೆ. ಟೈಟಾನಿಯಂದಿಂದ ತಯಾರಿಸಲಾಗಿರುವ ಈ ವಾಚಿನ ಪ್ರಮುಖ ವಿಶೇಷತೆಯೆಂದರೆ ಸಿಂಹ, ಖಂಡ ಮತ್ತು ಏಕ್ ಓಂಕಾರದ ಚಿಹ್ನೆಗಳು. ಗುರು ಗೋಬಿಂದ್ ಸಿಂಗ್ ಮತ್ತು ಖಾಲ್ಸಾದ ಸ್ಥಾಪನೆಗೆ ಗೌರವ ಸಲ್ಲಿಸುವ ಕಾರಣಕ್ಕೆ ಈ ವಾಚನ್ನು ವಿಶೇಷವಾಗಿ ತಯಾರಿಸಲಾಗಿದೆ.

ಅವರ ಸಂಗ್ರಹದಲ್ಲಿ ಕೋಟಿಗಳ ಮೌಲ್ಯದ ವಾಚುಗಳು ಸಹ ಇವೆ. ಬಾಲಿವುಡ್​​ನ ಹಲವು ನಟರು ವಾಚುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ್ದಾರೆ

ರಣ್​​ಬೀರ್ ಕಪೂರ್ ಅವರ ‘ರಾಮಾಯಣ’ ವಿಷಯಕ್ಕೆ ಮರಳುವುದಾದರೆ ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ!

ಬಹುತೇಕರಿಗೆ ತಿಳಿದಿರುವಂತೆ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಈ ನವೆಂಬರ್ 5ಕ್ಕೆ ಮೊದಲ ಭಾಗವಷ್ಟೆ ರಿಲೀಸ್ ಆಗಲಿದೆ. ಮೊದಲ ಭಾಗದಲ್ಲಿರಾಮ ಹಾಗೂ ರಾವಣನ ಪಾತ್ರ ಪರಿಚಯ, ರಾಮ ಮತ್ತು ಸೀತೆಯ ವಿವಾಹ, ರಾವಣನ ತಪಸ್ಸು ಮತ್ತು ಪಡೆವ ಶಕ್ತಿ. ರಾಮನ ವನವಾಹ ಮತ್ತು ಸೀತಾ ಮಾತೆಯ ಅಪಹರಣದ ಕತೆಯನ್ನು ಮಾತ್ರವೇ ಒಳಗೊಂಡಿರಲಿದೆ.