ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Don 3 Movie: ʻಧುರಂಧರ್‌ʼ ಹೀರೋ ರಣವೀರ್ ಸಿಂಗ್‌ಗೆ ಬಿಗ್‌ ಶಾಕ್! ಚಿತ್ರರಂಗದಿಂದಲೇ ನಿಷೇಧ, ಯಾಕಿಂಥ ನಿರ್ಧಾರ?

'ಡಾನ್ 3' ಚಿತ್ರದಿಂದ ಕೊನೆ ಕ್ಷಣದಲ್ಲಿ ಹೊರನಡೆದ ಕಾರಣಕ್ಕೆ ನಟ ರಣವೀರ್ ಸಿಂಗ್ ಅವರನ್ನು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಚಿತ್ರರಂಗದಿಂದ ಅಧಿಕೃತವಾಗಿ ನಿಷೇಧಿಸಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಆಗಿರುವ 45 ಕೋಟಿ ರೂಪಾಯಿಗಳ ಭಾರಿ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಒತ್ತಾಯಿಸಿದ್ದಾರೆ.

ಚಿತ್ರರಂಗದಿಂದ ನಟ ರಣವೀರ್ ಸಿಂಗ್‌ ಬ್ಯಾನ್‌! ಇಂಥ ನಿರ್ಧಾರಕ್ಕೆ ಕಾರಣವೇನು?

-

Avinash GR
Avinash GR May 25, 2026 6:26 PM

ಫರ್ಹಾನ್ ಅಖ್ತರ್ ನಿರ್ದೇಶನದ 'ಡಾನ್ 3' ಚಿತ್ರದಿಂದ ಹಠಾತ್ತನೆ ಹೊರನಡೆದ ವಿವಾದಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಅವರನ್ನು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಅಧಿಕೃತವಾಗಿ ನಿಷೇಧಿಸಿದೆ. ಕಳೆದ ವಾರ ಈ ವಿಷಯವನ್ನು ಕೈಗೆತ್ತಿಕೊಂಡಿದ್ದ ಫೆಡರೇಶನ್, ಸೋಮವಾರ (ಮೇ 25) ನಡೆದ ಪತ್ರಿಕಾಗೋಷ್ಠಿಯಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ವಿವಾದ ಬಗೆಹರಿಯುವ ತನಕ ಬ್ಯಾನ್!

ರಣವೀರ್ ಸಿಂಗ್ ವಿರುದ್ಧ ಕಠಿಣವಾದ ನಾನ್‌ ಕೋಆಪರೇಶನ್ ಡೈರೆಕ್ಟಿವ್ ಹೊರಡಿಸಿರುವ FWICE, ನಿರ್ಮಾಪಕರು ಕೇಳಿರುವ 45 ಕೋಟಿ ರೂಪಾಯಿಗಳ ನಷ್ಟ ಪರಿಹಾರದ ವಿವಾದವನ್ನು ಬಗೆಹರಿಸುವವರೆಗೂ ಅವರೊಂದಿಗೆ ಯಾರೂ ಕೆಲಸ ಮಾಡಬಾರದು ಎಂದು ಚಿತ್ರರಂಗಕ್ಕೆ ಸೂಚನೆ ನೀಡುವ ಮೂಲಕ ರಣವೀರ್ ಸಿಂಗ್ ಅವರನ್ನು ನಿಷೇಧಿಸಿದೆ. ನಟ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಚಿತ್ರದಿಂದ ಹೊರನಡೆದಿರುವುದನ್ನು ಫೆಡರೇಶನ್ ತೀವ್ರವಾಗಿ ಖಂಡಿಸಿದೆ.

Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌

"ಚಿತ್ರರಂಗವು ಒಂದು ದೊಡ್ಡ ಕುಟುಂಬದಂತೆ ಕೆಲಸ ಮಾಡುತ್ತದೆ ಎಂದು FWICE ದೃಢವಾಗಿ ನಂಬುತ್ತದೆ. ಇಲ್ಲಿ ವಿವಿಧ ವಿಭಾಗಗಳು ಮತ್ತು ಕಲೆಗಳಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪ್ರಾಜೆಕ್ಟ್ ಯಶಸ್ವಿಯಾಗಲು ಒಟ್ಟಾಗಿ ಕೊಡುಗೆ ನೀಡುತ್ತಾರೆ" ಎಂದು ಭಾರತ ಚಲನಚಿತ್ರ ನೌಕರರ ಒಕ್ಕೂಟ ಹೇಳಿದೆ.

"ಎಲ್ಲಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು, ನಿರ್ಮಾಪಕರು, ನಿರ್ದೇಶಕರು ಮತ್ತು ಪ್ರತಿಯೊಂದು ವಿಭಾಗದ ಸದಸ್ಯರನ್ನು ಫೆಡರೇಶನ್ ಪರಸ್ಪರ ನಂಬಿಕೆ, ವೃತ್ತಿಪರ ಬದ್ಧತೆ, ಗೌರವ ಮತ್ತು ಸಾಮೂಹಿಕ ಜವಾಬ್ದಾರಿಯಿಂದ ಒಟ್ಟಿಗೆ ಬಂಧಿಸಲ್ಪಟ್ಟ ಒಂದೇ ಕುಟುಂಬದ ಭಾಗವೆಂದು ಪರಿಗಣಿಸುತ್ತದೆ. ನಟರು ಹೀಗೆ ಪ್ರಮುಖ ಹಂತಗಳಲ್ಲಿ ಪ್ರಾಜೆಕ್ಟ್‌ಗಳಿಂದ ಹಠಾತ್ತನೆ ಹೊರನಡೆಯುವುದು ಇಡೀ ಮನೋರಂಜನಾ ಉದ್ಯಮದ ಸ್ಥಿರತೆ ಮತ್ತು ಕೆಲಸದ ವಾತಾವರಣಕ್ಕೆ ಗಂಭೀರ ಭೀತಿಯನ್ನು ಒಡ್ಡುತ್ತದೆ" ಎಂದು ಚಲನಚಿತ್ರ ನೌಕರರ ಒಕ್ಕೂಟ ಹೇಳಿದೆ.‌

ʻಧುರಂಧರ್‌ʼ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದ ನಟ ರಣವೀರ್‌ ಸಿಂಗ್‌ಗೆ ಶಾಕ್‌ ನೀಡಿದ ಬಾಲಿವುಡ್‌ ಡೈರೆಕ್ಟರ್!‌ ಅಷ್ಟಕ್ಕೂ ಏನಿದು ವಿವಾದ?

ನಷ್ಟವನ್ನು ರಣವೀರ್‌ ಭರಿಸಬೇಕು

ಕಳೆದ ಏಪ್ರಿಲ್‌ನಲ್ಲಿ 'ಎಕ್ಸೆಲ್ ಎಂಟರ್ಟೈನ್‌ಮೆಂಟ್' ಈ ಸಂಬಂಧ ದೂರು ನೀಡಿತ್ತು. ಈ ದೂರಿನ ಪ್ರಕಾರ, ರಣವೀರ್ ಸಿಂಗ್ ಅವರು ಸಂಸ್ಥೆಯೊಂದಿಗೆ ಮೂರು ಸಿನಿಮಾಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಆಗಿರುವ ಎಲ್ಲಾ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಒತ್ತಾಯಿಸಿದ್ದಾರೆ.

'ಡಾನ್ 3' ವಿವಾದದಲ್ಲಿ ಚಲನಚಿತ್ರ ಮಂಡಳಿ ಎಂಟ್ರಿ

ಈ ಚಿತ್ರದ ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಹೊರನಡೆದಿದ್ದಾರೆ ಎಂದು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಆರೋಪಿಸಿದ್ದಾರೆ. ಚಲನಚಿತ್ರ ಮಂಡಳಿಯ ಮುಖ್ಯ ಸಲಹೆಗಾರರಾದ ಅಶೋಕ್ ಪಂಡಿತ್ ಅವರು ಇದು ಗಂಭೀರ ವಿಷಯ, ಚಿತ್ರೀಕರಣದ ಹತ್ತಿರವಿರುವಾಗ ನಟರು ಹೀಗೆ ಚಿತ್ರಗಳನ್ನು ಬಿಟ್ಟು ಹೋಗುವ ಈ ಪ್ರವೃತ್ತಿಯನ್ನು ಟೀಕಿಸಿದ್ದಾರೆ. ಆಂತರಿಕ ಸಭೆಯ ನಂತರ ಫೆಡರೇಶನ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಈ ಹಿಂದೆ ಹೇಳಿದ್ದರು.

‌ಚಿತ್ರರಂಗದಿಂದ ರಣವೀರ್‌ ಸಿಂಗ್‌ ಬ್ಯಾನ್



ಪ್ರೊಡ್ಯೂಸರ್ಸ್ ಗಿಲ್ಡ್ ಮಧ್ಯಸ್ಥಿಕೆ

ಭಾರತ ಚಲನಚಿತ್ರ ನೌಕರರ ಒಕ್ಕೂಟಕ್ಕೆ ದೂರು ನೀಡುವುದಕ್ಕೂ ಮುನ್ನ 'ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ'ದಲ್ಲೂ ದೂರು ದಾಖಲಾಗಿತ್ತು. ಅಲ್ಲಿ ಹಿರಿಯ ನಿರ್ಮಾಪಕರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದರು. ಆದರೆ ಅಲ್ಲಿ ಸಂಧಾನದ ಮಾತುಕತೆಗಳು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ನಿರ್ದೇಶಕ ಫರ್ಹಾನ್ ಅಖ್ತರ್ ಈಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ, "ಕಳೆದ ಒಂದೆರಡು ವರ್ಷಗಳಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ನೀವು ನಿರೀಕ್ಷಿಸದ ಘಟನೆಗಳನ್ನು ಎದುರಿಸಲು ಸಿದ್ಧರಿರಬೇಕಾಗುತ್ತದೆ" ಎಂದಿದ್ದರು.