ಬ್ಲಾಕ್ ಬಸ್ಟರ್ ʻಧುರಂಧರ್ʼ ಬಳಿಕ ಹೊಸ ಸಿನಿಮಾ ಆರಂಭಿಸಿದ ರಣವೀರ್ ಸಿಂಗ್; ಈ ಚಿತ್ರಕ್ಕೆ ಮಲಯಾಳಂನ ಸ್ಟಾರ್ ಡೈರೆಕ್ಟರ್ ಪುತ್ರಿ ನಾಯಕಿ!
ಬ್ಲಾಕ್‌ಬಸ್ಟರ್ 'ಧುರಂಧರ್' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ನಟ ರಣ್‌ವೀರ್ ಸಿಂಗ್ ಅಭಿನಯದ 'ಪ್ರಳಯ್' ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ ಚಿತ್ರೀಕರಣ ಮುಂಬೈನಲ್ಲಿ ಆರಂಭವಾಗಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
-
ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಭಿನಯದ ಮುಂಬರುವ ಭರ್ಜರಿ ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ 'ಪ್ರಳಯ್' ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಅಧಿಕೃತವಾಗಿ ಆರಂಭವಾಗಿದೆ. ದಾಖಲೆಯ ಗಳಿಕೆ ಕಂಡ 'ಧುರಂಧರ್' ಹಾಗೂ 'ಧುರಂಧರ್: ದಿ ರಿವೆಂಜ್' ಸಿನಿಮಾಗಳ ನಂತರ ರಣ್‌ವೀರ್ ಸಿಂಗ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಇದಾಗಿದೆ. ರಣ್‌ವೀರ್ ಸಿಂಗ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಸಹ-ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ.
ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಕಲ್ಯಾಣಿ ಪ್ರಿಯದರ್ಶನ್
ಬಹುಭಾಷೆಗಳಲ್ಲಿ ಖ್ಯಾತಿ ಪಡೆದಿರುವ ಸ್ಟಾರ್ ನಿರ್ದೇಶಕ ಪ್ರಿಯದರ್ಶನ್ ಅವರ ಪುತ್ರಿ, ದಕ್ಷಿಣ ಭಾರತದ ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಅವರು ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ರಣ್‌ವೀರ್ ಸಿಂಗ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದು, ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಪ್ರೇಕ್ಷಕರಲ್ಲಿ ಈಗಾಗಲೇ ಭಾರೀ ಕುತೂಹಲ ಮೂಡಿದೆ.
ನಿರ್ದೇಶಕ ಹನ್ಸಲ್ ಮೆಹ್ತಾ ಪುತ್ರ ಜೈ ಮೆಹ್ತಾ ಸಾರಥ್ಯ
ಸಂಕಷ್ಟದ ಸಂದರ್ಭಗಳಲ್ಲಿ ಪ್ರೀತಿಪಾತ್ರರಿಗಾಗಿ ಹೋರಾಡುವ ಪಾತ್ರಗಳ ಕಥಾಹಂದರವನ್ನು ಈ ಸರ್ವೈವಲ್ ಥ್ರಿಲ್ಲರ್ ಒಳಗೊಂಡಿದೆ. ಭರ್ಜರಿ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿವೆ. ಹನ್ಸಲ್ ಮೆಹ್ತಾ ಮತ್ತು ಸಾಹಿಲ್ ಸೈಗಲ್ ಅವರ 'ಟ್ರೂ ಸ್ಟೋರಿ ಫಿಲ್ಮ್ಸ್' ಸಂಸ್ಥೆಯು ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದು, ಹನ್ಸಲ್ ಮೆಹ್ತಾ ಅವರ ಪುತ್ರ ಜೈ ಮೆಹ್ತಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
Ranveer Singh: ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ‘ಧುರಂಧರ್’ ಸಿನಿಮಾ; ಯಾವಾಗ?
ಆಸ್ಟ್ರೇಲಿಯಾದಿಂದ ಮುಂಬೈಗೆ ಬದಲಾದ ಲೊಕೇಶನ್!
ಈ ಚಿತ್ರಕ್ಕೆ ನೈಜ ಸ್ಪರ್ಶ ನೀಡುವ ಸಲುವಾಗಿ ಮುಂಬೈ ಹಾಗೂ ಸುತ್ತಮುತ್ತಲಿನ ನೈಜ ತಾಣಗಳಲ್ಲೇ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂಬೈನಲ್ಲಿ ಆರಂಭವಾಗಿರುವ ಈ ಮೊದಲ ಹಂತದ ಚಿತ್ರೀಕರಣವನ್ನು ದೀಪಾವಳಿಗೆ ಮುನ್ನ ಪೂರ್ಣಗೊಳಿಸಲು ಚಿತ್ರತಂಡ ಯೋಜಿಸಿದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ನಡೆಸಲು ಯೋಜಿಸಲಾಗಿತ್ತು. ಆದರೆ, ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಪತ್ನಿಯ ಜೊತೆಗಿರಲು ರಣ್‌ವೀರ್ ಬಯಸಿದ ಕಾರಣ ಚಿತ್ರೀಕರಣದ ಸ್ಥಳವನ್ನು ಮುಂಬೈಗೆ ಬದಲಾಯಿಸಲಾಗಿದೆ. ದೀಪಾವಳಿಯ ವೇಳೆಗೆ ಚಿತ್ರೀಕರಣ ಮುಗಿಸಿ ರಣ್‌ವೀರ್ ಸಿಂಗ್ ಕೆಲಕಾಲ ಬಿಡುವು ಪಡೆಯಲಿದ್ದಾರೆ.
ರಣವೀರ್ ಸಿಂಗ್ ಹೊಸ ಸಿನಿಮಾ ಘೋಷಣೆ
BIG ANNOUNCEMENT: One of the most anticipated action spectacles of the year is officially rolling!
— Always Bollywood (@AlwaysBollywood) August 16, 2026
The world as you know it will end in #Pralay, starring @RanveerOfficial in a race against time for survival! Helmed by Jai Mehta, the film also stars Lokah star… pic.twitter.com/ZqvCpqHAx6
'ಧುರಂಧರ್' ಸರಣಿಗಿಂತ ಸಂಪೂರ್ಣ ಭಿನ್ನವಾದ, ವಿಶಿಷ್ಟ ಸರ್ವೈವಲ್ ಥ್ರಿಲ್ಲರ್ ಜಾನರ್‌ನಲ್ಲಿ 'ಪ್ರಳಯ್' ಮೂಡಿಬರುತ್ತಿದ್ದು, ಇದು ರಣ್‌ವೀರ್ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬುದು ಚಿತ್ರತಂಡದ ವಿಶ್ವಾಸ.