ʻಧುರಂಧರ್ʼ ಚಿತ್ರದ ಕಲೆಕ್ಷನ್ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು; 17 ದಿನಗಳಿಗೆ ಆದ ಗಳಿಕೆ ಇಷ್ಟೊಂದಾ?
Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ 17 ದಿನಗಳಲ್ಲಿ ವಿಶ್ವಾದ್ಯಂತ 870.36 ಕೋಟಿ ರೂ. ಗಳಿಸುವ ಮೂಲಕ 2025ರ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರತಂಡ ನೀಡಿದ ಅಧಿಕೃತ ಮಾಹಿತಿಯಂತೆ, ಭಾರತದಲ್ಲಿ ಈ ಚಿತ್ರವು 683.46 ಕೋಟಿ ರೂ. (ಗ್ರಾಸ್) ಹಾಗೂ ವಿದೇಶದಲ್ಲಿ 186.90 ಕೋಟಿ ರೂ. ಗಳಿಸಿದೆ.
-
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಧುರಂಧರ್ ಸಿನಿಮಾವು ದಿನ ಕಳೆದಂತೆ ಗಳಿಕೆಯಲ್ಲಿ ಹೊಸ ದಾಖಲೆಯನ್ನ ಬರೆಯುತ್ತಿದೆ. ರಣವೀರ್ ಸಿಂಗ್ ಕರಿಯರ್‌ನಲ್ಲೇ ದೊಡ್ಡ ದಾಖಲೆಯನ್ನು ಬರೆಯುವಲ್ಲಿ ಧುರಂಧರ್ ಸಿನಿಮಾ ಯಶಸ್ವಿಯಾಗಿದೆ. 2025ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗುವುದಕ್ಕೆ ಇನ್ನೂ ಕೆಲವೇ ಕೆಲವು ಕೋಟಿಗಳು ಬಾಕಿ ಇವೆ. ಈ ಮಧ್ಯೆ ನಿರ್ಮಾಪಕರು 17 ದಿನಗಳಲ್ಲಿ ಆದ ಒಟ್ಟಾರೆ ಗಳಿಕೆಯನ್ನು ಹಂಚಿಕೊಂಡಿದ್ದಾರೆ.
ಇಂಚಿಂಚೂ ಮಾಹಿತಿ ನೀಡಿದ ನಿರ್ಮಾಪಕರು
ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್ ನಟನೆಯ ʻಧುರಂಧರ್ʼ ಚಿತ್ರದ ಕಲೆಕ್ಷನ್ ಬಗ್ಗೆ ಇಂಚಿಂಚೂ ಮಾಹಿತಿಯನ್ನು ನಿರ್ಮಾಪಕರು ತಿಳಿಸಿದ್ದಾರೆ. ಹೌದು, 17 ದಿನಗಳಿಗೆ ʻಧುರಂಧರ್ʼ ಚಿತ್ರವು ವಿಶ್ವಾದ್ಯಂತ 870.36 ಕೋಟಿ ರೂ. ಗಳನ್ನು ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೂಲಕ ಈ ವರ್ಷ ಬಾಲಿವುಡ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಧುರಂಧರ್ ಸಿನಿಮಾವು ಪಾತ್ರವಾಗಿದೆ. ಭಾರತದಲ್ಲಿ ಗ್ರಾಸ್ ಕಲೆಕ್ಷನ್ 683.46 ಕೋಟಿ ರೂ.ಗಳಾಗಿದ್ದು, ವಿದೇಶದಲ್ಲಿ 186.90 ಕೋಟಿ ರೂ. ಹಣವು ಗಳಿಕೆ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
16 & 17ನೇ ದಿನ ದಾಖಲೆ ಗಳಿಕೆ
ಧುರಂಧರ್ ಸಿನಿಮಾವು ಮೊದಲ ದಿನ 28 ಕೋಟಿ ರೂ. ಗಳಿಸಿತ್ತು. ನಂತರ ದಿನಗಳಲ್ಲಿ ಇದರ ಗಳಿಕೆ ದಿನವೊಂದಕ್ಕೆ 60 ಕೋಟಿ ರೂ. ವರೆಗೂ ಹೋಗಿತ್ತು. ಸದ್ಯ 17ನೇ ದಿನ ದಾಖಲೆಯ ಗಳಿಕೆ ಆಗಿರುವುದು ಅಚ್ಚರಿ ಮೂಡಿಸಿದೆ. ಹೌದು, ನಿನ್ನೆ ಭಾನುವಾರ (ಡಿ.21) ಧುರಂಧರ್ ಸಿನಿಮಾವು 40.30 ಕೋಟಿ ರೂ. ಬಾಚಿಕೊಂಡಿದೆ. ಅದಕ್ಕೂ ಹಿಂದಿನ ದಿನ (ಡಿ.20) 35.70 ಕೋಟಿ ರೂ. ಗಳಿಸಿತ್ತು.
ಧುರಂಧರ್ ಸಿನಿಮಾ ಗಳಿಕೆಯ ಅಧಿಕೃತ ವರದಿ
Dhu...Ran...Dhar Revolution! 🔥
— Jio Studios (@jiostudios) December 22, 2025
Book your tickets.
🔗 - https://t.co/cXj3M5DFbc#Dhurandhar Ruling Cinemas Worldwide.@RanveerOfficial #AkshayeKhanna @duttsanjay @ActorMadhavan @rampalarjun #SaraArjun @bolbedibol @AdityaDharFilms #JyotiDeshpande @LokeshDharB62 #JioStudios… pic.twitter.com/J1pzTqQDTy
ಧುರಂಧರ್' ಬಾಕ್ಸ್ ಆಫೀಸ್ ವರದಿ
ಮೊದಲ ವಾರ - 218 ಕೋಟಿ ರೂ.
ಎರಡನೇ ವಾರ - 261.50 ಕೋಟಿ ರೂ.
ಮೂರನೇ ವಾರಾಂತ್ಯ - 99.70 ಕೋಟಿ ರೂ.
ಒಟ್ಟು ಗಳಿಕೆ - 579.20 ಕೋಟಿ ರೂ. (ಭಾರತದ ನಿವ್ವಳ ಗಳಿಕೆ)
ಸೂಪರ್ ಹಿಟ್ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರವನ್ನು ನಿರ್ದೇಶಿಸಿದ್ದ ಆದಿತ್ಯ ಧರ್ ಅವರು ಧುರಂಧರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸ್ಪೈ ಥ್ರಿಲ್ಲರ್ / ಆಕ್ಷನ್ ಕಥೆ ಇರುವ ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಆರ್. ಮಾಧವನ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮುಂತಾದವರು ನಟಿಸಿದ್ದಾರೆ.