ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sreeleela: ಮತ್ತೊಂದು ಬಾಲಿವುಡ್‌ ಚಿತ್ರ ಒಪ್ಪಿಕೊಂಡ ಶ್ರೀಲೀಲಾ; ರಣವೀರ್ ಸಿಂಗ್‌ ಜತೆ ಕಿಸ್‌ ಬೆಡಗಿ ರೊಮ್ಯಾನ್ಸ್‌

ಟಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿ, ಕನ್ನಡತಿ ಶ್ರೀಲೀಲಾ ಇದೀಗ ಬಾಲಿವುಡ್‌ನಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಕಿರೀಟಿ ಜತೆಗಿನ ʼಜೂನಿಯರ್ʼ ಸಿ‌ನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾದಲ್ಲಿ ಶ್ರೀಲೀಲಾ ಅವರಿಗೆ ಅವಕಾಶ ಸಿಕ್ಕಿದೆ.

ನಟಿ ಶ್ರೀಲೀಲಾಗೆ ಬಾಲಿವುಡ್‌ನಲ್ಲಿ ಸಿಕ್ತು ಮತ್ತೊಂದು ಭರ್ಜರಿ ಆಫರ್

Sreeleela

Profile Pushpa Kumari Jul 24, 2025 9:16 PM

ಮುಂಬೈ: ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ (Sreeleela) ಈಗ ಕನ್ನಡಕ್ಕಿಂತಲೂ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ ಜತೆಗೆ ಬಾಲಿವುಡ್‌ನಲ್ಲಿಯೂ ಬ್ಯಾಕ್‌ ಟು ಬ್ಯಾಕ್‌ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ತೆರೆಕಂಡ ಕಿರೀಟಿ ರೆಡ್ಡಿ-ಶ್ರೀಲೀಲಾ ಅಭಿನಯದ ʼಜೂನಿಯರ್ʼ ಸಿ‌ನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇದರ ಜತೆಗೆ ಇದೀಗ ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾದಲ್ಲಿ ಅಭಿನಯಿಸಲು ಶ್ರೀಲೀಲಾ ಅವರಿಗೆ ಆಫರ್ ಸಿಕ್ಕಿದೆ. ಆ ಮೂಲಕ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಈಗಾಗಲೇ ಕಾರ್ತಿಕ್ ಆರ್ಯನ್ ಅವರೊಂದಿಗೆ ಚೊಚ್ಚಲ ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀಲೀಲಾ ಅವರನ್ನು ಮತ್ತೊಂದು ಬಂಪರ್‌ ಅವಕಾಶ ಅರಸಿಕೊಂಡು ಬಂದಿದೆ. ಈ ಚಿತ್ರದಲ್ಲಿ ನಟ ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮೆಗಾ ಪ್ರಾಜೆಕ್ಟ್ ಆಗಿದ್ದು ಮೂವರನ್ನು ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಬರುವುದನ್ನು ನೋಡಲು ಪ್ರೇಕ್ಷಕರು ಕೂಡ ಥ್ರಿಲ್ ಆಗಿದ್ದಾರೆ.

ಹೊಸ ಸಿನಿಮಾದ ಹೆಸರು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ರಣವೀರ್ ಸಿಂಗ್, ಶ್ರೀಲೀಲಾ ಮತ್ತು ಬಾಬಿ ಡಿಯೋಲ್ ಅಭಿನಯದ ಈ ಹೊಸ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಮುಂದಿನ ವಾರ ರಿವೀಲ್‌ ಆಗುವ ಸಾಧ್ಯತೆ ಇದೆ. ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಗುಟ್ಟನ್ನು ಕೂಡ ಚಿತ್ರತಂಡ ಶೀಘ್ರದಲ್ಲೇ ರಟ್ಟು ಮಾಡಲಿದೆ.

ಇದನ್ನು ಓದಿ:Bollywood Movie: ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಕಂಡ ಬಾಲಿವುಡ್ ಸಿನಿಮಾಗಳಿವು!

ಸದ್ಯ ಬಾಬಿ ಡಿಯೋಲ್ ನಟನೆಯ ʼಹರಿ ಹರ ವೀರ ಮಲ್ಲುʼ ರಿಲೀಸ್‌ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಪವನ್ ಕಲ್ಯಾಣ್ ಅಭಿನಯದ ಈ ಸಿನಿಮಾದಲ್ಲಿನ ಬಾಬಿ ಡಿಯೋಲ್‌ ಪಾತ್ರವೂ ಗಮನ ಸೆಳೆದಿದೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಅವರು ಬಹುನಿರೀಕ್ಷಿತ ʼರಾಮಾಯಣʼ ಸಿನಿಮಾದಲ್ಲಿ ಅವರು ಅಬಿನಯಿಸಲಿದ್ದಾರೆ. ಇದರ ಜತೆಗೆ ʼಬಾರ್ಡರ್ 2ʼ ಹಿಂದಿ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಶ್ರೀಲೀಲಾ- ರಣವೀರ್ ಸಿಂಗ್ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇನ್ನು ನಟ ರಣವೀರ್ ಸಿಂಗ್ ʼಧುರಂದರ್ʼ, ʼಡಾನ್ 3ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಶ್ರೀಲೀಲಾ ʼಲೆನಿನ್ʼ, ʼಆಶಿಕ್ 3ʼ, ʼಮಾಸ್ ಜಾತ್ರಾʼ, ʼಉಸ್ತಾದ್‌ ಭಗತ್ ಸಿಂಗ್ʼ ಸೇರಿದಂತೆ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.