UPSC: ಯುಪಿಎಸ್ಸಿ : ಯಾದಗಿರಿ ಗರಿಮೆ ಹೆಚ್ಚಿಸಿದ ಸಾಧಕರು
ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಶನ್) ನ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ (ಸಿವಿಲ್ ಸರ್ವೀಸ್) ಪರೀಕ್ಷೆಯ ಅಂತಿಮ ಫಲಿತಾಂಶ ಯಾದಗಿರಿ ಜಿಲ್ಲೆಯ ಗೌರವ ಹೆಚ್ಚಳಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯ ನಾಲ್ವರು ತೇರ್ಗಡೆಯಾಗಿ, ಹೆಮ್ಮೆಗೆ ಪಾತ್ರರಾಗಿದ್ದಾರೆ.
-
Ashok Nayak
Mar 7, 2026 11:54 AM
ಯುಪಿಎಸ್ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ನಾಲ್ವರು ತೇರ್ಗಡೆ
ಯಾದಗಿರಿ: ಶುಕ್ರವಾರ ಪ್ರಕಟಗೊಂಡ ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಶನ್) ನ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ (ಸಿವಿಲ್ ಸರ್ವೀಸ್) ಪರೀಕ್ಷೆಯ ಅಂತಿಮ ಫಲಿತಾಂಶ ಯಾದಗಿರಿ ಜಿಲ್ಲೆಯ ಗೌರವ ಹೆಚ್ಚಳಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯ ನಾಲ್ವರು ತೇರ್ಗಡೆಯಾಗಿ, ಹೆಮ್ಮೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: UPSC result: ಕೇಂದ್ರ ಲೋಕಸೇವಾ ಆಯೋಗ ಅಂತಿಮ ಫಲಿತಾಂಶ ಪ್ರಕಟ; ಶಕ್ತಿ ದುಬೆಗೆ ಫಸ್ಟ್ ರ‍್ಯಾಂಕ್
ಯಾದಗಿರಿಯ ಸಂದೀಪ್ ಬಾಡದ್ ರಾಜ್ಯದಲ್ಲಿ 2ನೇ ಹಾಗೂ ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್, ವೈದ್ಯೆ ಡಾ. ನಿವೇದಿತಾ ಭಾವಿಮನಿ 469ನೇ ರ್ಯಾಂಕ್, ಬಸವರಾಜ್ ಜವಳಿ 664ನೇ ಹಾಗೂ ಚಂದ್ರಶೇಖರ 880ನೇ ರ್ಯಾಂಕ್ ಪಡೆಯುವ ಮೂಲಕ ಯಾದಗಿರಿ ಜಿಲ್ಲೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.