ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pramod Shetty: ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

Rashmika : ಪ್ರಮೋದ್ ಶೆಟ್ಟಿ ‘ಶೇಷ 2016’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಇದೀಗ ಸಿನಿಮಾ ವಿಚಾರವಾಗಿ ಪ್ರಚಾರ ಕಾರ್ಯಗಳು ಆರಂಭವಾಗಿವೆ. ರಶ್ಮಿಕಾ ಮಂದಣ್ಣ ಮತ್ತು ಶೆಟ್ಟಿ ಆಂಡ್ ಕಂಪನಿ ನಡುವೆ ಆಗಾಗ ಕಿರಿಕ್ ನಡೆಯುತ್ತೆ.

ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Feb 18, 2026 8:39 PM

ಪ್ರಮೋದ್ ಶೆಟ್ಟಿ (pramod shetty) ‘ಶೇಷ 2016’ (Shesha 2016) ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಇದೀಗ ಸಿನಿಮಾ ವಿಚಾರವಾಗಿ ಪ್ರಚಾರ ಕಾರ್ಯಗಳು ಆರಂಭವಾಗಿವೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಶೆಟ್ಟಿ ಆಂಡ್ ಕಂಪನಿ ನಡುವೆ ಆಗಾಗ ಕಿರಿಕ್ ನಡೆಯುತ್ತೆ. ರಶ್ಮಿಕಾ ಮಂದಣ್ಣ ಸದ್ಯ ಮದುವೆಯ ತಯಾರಿಯಲ್ಲಿದ್ದಾರೆ. ಇದೇ ಫೆಬ್ರವರಿ 26ರಂದು ವಿಜಯ್ ದೇವರಕೊಂಡ (Vijay Devarakonda) ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.

ಆಮಂತ್ರಣ ಪತ್ರಿಕೆ ನಮಗಿನ್ನೂ ಬಂದಿಲ್ಲ

ರಶ್ಮಿಕಾ ಮಂದಣ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ ನಮಗಿನ್ನೂ ಬಂದಿಲ್ಲ, ಬಂದರೆ ಹೋಗ್ತೀನಿ ಎಂದು ಹೇಳಿದ್ದಾರೆ. ಅವರು ಮದುವೆಗೆ ಕರೆಯಲ್ಲ ಎನ್ನುವುದು ಕೂಡ ಗೊತ್ತು, ಅದು ಎಲ್ಲರಿಗೆ ಗೊತ್ತಿರುವ ವಿಚಾರವೇ, ಅದರಲ್ಲಿ ಹೊಸತೇನಿದೆ ಎಂದು ಕೂಡ ಹೇಳಿದ್ಧಾರೆ. ರಶ್ಮಿಕಾ ಮಂದಣ್ಣ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆಯಾ ಎನ್ನುವ ಪ್ರಶ್ನೆಯನ್ನು ಕೂಡ ಪ್ರಮೋದ್ ಶೆಟ್ಟಿ ಅವರಿಗೆ ಕೇಳಲಾಗಿದೆ.

ಇದನ್ನೂ ಓದಿ: Sidharth Malhotra: ಸಿದ್ಧಾರ್ಥ್ ಮಲ್ಹೋತ್ರಾ ತಂದೆ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟ

ಈ ಪ್ರಶ್ನೆಗೆ ಪ್ರಮೋದ್ ಶೆಟ್ಟಿ ಅದೆಲ್ಲಾ ಯಾವ ಕಾಲದಲ್ಲೋ ಹೋಯಿತು. ಅವನೇನು ಏನು ಚಿಕ್ಕ ಮಗುನಾ, ಅದರಲ್ಲೇ ಕೊರಗುತ್ತಾ ಕೂರೋಕೆ ಎಂದು ಹೇಳಿದ್ದಾರೆ. ಚಾಕ್ಲೆಟ್ ತಿನ್ನೋವ್ರಾ? ಎಂದು ಪ್ರಶ್ನೆ ಮಾಡಿ ಅದೆಲ್ಲಾ ಮುಗಿದು ಹೋದ ಅಧ್ಯಾಯ ಎಂದಿದ್ಧಾರೆ.

ಇನ್ನು ರಕ್ಷಿತ್‌ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿ, ಸಿನಿಮಾ ಸಮಯದಲ್ಲಿ ಸ್ವಲ್ಪ ಕಳೆದು ಹೋಗ್ತಾನೆ ಎಂದು ಹೇಳಿದ್ದಾರೆ. ಅವನಿಗೆ ನಮಷ್ಟೆಲ್ಲ ಅರ್ಜೆಂಟ್ ಇಲ್ಲ, ನಿಧಾನವಾಗಿ ವಾಪಸ್ ಬಂದು ಆರಾಮಾಗಿ ಅವನು ಸಿನಿಮಾ ಮಾಡ್ತಾನೇ ಎಂದಿದ್ದಾರೆ.

ಇನ್ನು ಶೇಷ ಸಿನಿಮಾ ಬಗ್ಗೆ ಮಾತನಾಡೋದಾದರೆ ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್’ ಮೂಲಕ ಉಮೇಶ್ ಗೌಡ , ಮಂಜುವಾಣಿ ವಿ.ಎಸ್. ಮತ್ತು ವೀಣಾ ಎಸ್. ಅವರು ‘ಶೇಷ 2016’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಅರಸೀಕೆರೆ ಅವರು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು

ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಜಾನ್ ಕೈಪ್ಪಲ್ಲಿ, ಸಿದ್ಲಿಂಗು ಶ್ರೀಧರ್, ದೇವರಾಜ್, ಸಾಯಿ ಭೈರವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ಎಸ್. ಆನಂದ್ ಕುಮಾರ್ ಅವರ ಛಾಯಾಗ್ರಹಣವಿದೆ.