Rashmika Vijay Wedding: ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರಲಿರುವ ರಶ್ಮಿಕಾ ಮಂದಣ್ಣ; ಅಧಿಕೃತ ಘೋಷಣೆ
Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೊನೆಗೂ ಅಧಿಕೃತವಾಗಿ ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ. ಸಾಕಷ್ಟು ವದಂತಿಗಳು ಮತ್ತು ಉಹಾಪೋಹಗಳ ನಡುವೆ ರಶ್ಮಿಕಾ ಪೋಸ್ಟ್ ಮುಖಾಂತರ ಎಲ್ಲ ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದೀಗ ಜೋಡಿಯ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹವನ್ನು ಅಧಿಕೃತವಾಗಿ "ದಿ ವೆಡ್ಡಿಂಗ್ ಆಫ್ ವಿರೋಶ್" ಎಂದು ಕರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ -
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ( Vijay Deverakonda) ಕೊನೆಗೂ ಅಧಿಕೃತವಾಗಿ ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ. ಸಾಕಷ್ಟು ವದಂತಿಗಳು ಮತ್ತು ಉಹಾಪೋಹಗಳ ನಡುವೆ ರಶ್ಮಿಕಾ ಪೋಸ್ಟ್ ಮುಖಾಂತರ ಎಲ್ಲ ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಜೋಡಿ ತಮ್ಮ ಶಾಶ್ವತವಾಗಿ ಒಟ್ಟಿಗೆ ಜೀವನ ನಡೆಸಲು ನಿರ್ಧಾರ ಮಾಡಿದೆ. ಇದೀಗ ಜೋಡಿಯ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹವನ್ನು ಅಧಿಕೃತವಾಗಿ "ದಿ ವೆಡ್ಡಿಂಗ್ ಆಫ್ ವಿರೋಶ್" ಎಂದು (‘Virosh’ ) ಕರೆದುಕೊಂಡಿದ್ದಾರೆ.
ಯಾವುದೇ ವಿವಾಹ ಯೋಜನೆಗಳನ್ನು ರೂಪಿಸುವ ಮೊದಲೇ ಅಭಿಮಾನಿಗಳು ತಮ್ಮ ಬಂಧಕ್ಕೆ ಒಂದು ಅರ್ಥವನ್ನು ನೀಡಿದ್ದರು. ಅಭಿಮಾನಿಗಳು ಸೃಷ್ಟಿಸಿದ ಈ ನಿಕ್ ನೇಮ್ ವಿರೋಶ್ ಹೆಸರನ್ನು ತಮ್ಮ ಮದುವೆಗೆ ಇಡುವ ಮೂಲಕ, ವಿಜಯ್ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ರಶ್ಮಿಕಾ ಪೋಸ್ಟ್
ರಶ್ಮಿಕಾ ಪೋಸ್ಟ್‌ನಲ್ಲಿ, "ನಮ್ಮ ಪ್ರೀತಿಯ ಫ್ಯಾನ್ಸ್, ನಾವು ಯಾವುದೇ ಯೋಜನೆಗಳನ್ನು ಮಾಡುವ ಮೊದಲು,ನಾವು ನಮಗಾಗಿ ಏನನ್ನಾದರೂ ಆಯ್ಕೆ ಮಾಡಿಕೊಳ್ಳುವ ಮೊದಲು, ನೀವು ಈಗಾಗಲೇ ನಮಗೆ ಒಂದು ಹೆಸರನ್ನು ಕೊಟ್ಟಿದ್ದೀರಿ.
ನೀವು ನಮ್ಮನ್ನು 'ವಿರೋಶ್' ಎಂದು ಕರೆದಿದ್ದೀರಿ. ಹಾಗಾಗಿ ಇಂದು - ಪೂರ್ಣ ಹೃದಯದಿಂದ, ನಿಮ್ಮ ಗೌರವಾರ್ಥವಾಗಿ ನಾವು ನಮ್ಮ ಮದುವೆಗೆ ಆಹ್ವಾನಿಸುತ್ತಿದ್ದೇವೆ. 'ವಿರೋಶ್ ವಿವಾಹ' ಎಂದು, ನಮ್ಮನ್ನು ಇಷ್ಟೊಂದು ಪ್ರೀತಿಯಿಂದ ಇಲ್ಲಿಯವರೆಗೆ ಸಾಥ್ ಕೊಟ್ಟಿದ್ದಕ್ಕೆ ಧನ್ಯವಾದ. ನೀವು ನಮ್ಮ ಜೀವನದಲ್ಲಿ ಒಂದು ಭಾಗ - ಯಾವಾಗಲೂ. ನಿಮಗೆ ನನ್ನ ಪ್ರೀತಿಗೆ ಅಪ್ಪುಗೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Maryaade Ramanna serial: ಅಖಾಡದಲ್ಲಿ ಪಂದ್ಯ ಗೆಲ್ಲೋ ರಾಮಣ್ಣ, ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ?
VIROSH FINALLY 🥹❤️
— EᑎTEᖇ10 (@Enter10ON) February 22, 2026
Rashmika aur Vijay ne apni relationship aur shaadi ko officially announce kiya hai Instagram pe, aur poori wedding ko fans ke diye naam "VIROSH" ke honour mein dedicate kar rahe hain. Yeh ek bahut emotional aur sweet tareeka hai fans ko thank you bolne ka aur… pic.twitter.com/upzFAt8epZ
ಮೊಬೈಲ್ ಫೋನ್ ಬ್ಯಾನ್
ಇನ್ನು, ಈ ಮದುವೆಯಲ್ಲಿ ಮೊಬೈಲ್ ಫೋನ್ ಬ್ಯಾನ್ ಮಾಡಲಾಗಿದೆ. ಮದುವೆಗೆ ಆಗಮಿಸುವವರು ಮೊಬೈಲ್ ತರುವಂತಿಲ್ಲ. ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. "ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' (ಮೊಬೈಲ್ ನಿಷೇಧ) ಜಾರಿಯಲ್ಲಿರುತ್ತದೆ. ಫೋಟೋಗ್ರಫಿ ತಂಡದವರಿಂದಲೂ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಅವರು ರಶ್ಮಿಕಾ ಮತ್ತು ವಿಜಯ್ ಮದುವೆ ಫೋಟೋಗಳನ್ನು ಎಲ್ಲಿಯೂ ಶೇರ್ ಮಾಡುವಂತಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: Maa Inti Bangaram: ಸಮಂತಾ- ದೂದ್ ಪೇಡಾ ದಿಗಂತ್ ನಟನೆಯ 'ಮಾ ಇಂಟಿ ಬಂಗಾರಂ' ; ರಿಲೀಸ್ ಡೇಟ್ ಅನೌನ್ಸ್
ಫೆಬ್ರವರಿ 24 ರಿಂದಲೇ ಮದುವೆ ಶಾಸ್ತ್ರಗಳು ಶುರುವಾಗಲಿದ್ದು, ಫೆಬ್ರವರಿ 26 ರಂದು ಮುಹೂರ್ತ ನಡೆಯಲಿದೆ. ಇನ್ನು, ಮದುವೆಯ ಮುಖ್ಯ ಸಮಾರಂಭಕ್ಕೆ ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಸಹನಟರಿಗೆ ಆಹ್ವಾನ ನೀಡಿಲ್ಲವಂತೆ. ಆದರೆ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯುವ ನಿರೀಕ್ಷೆಯಿದೆ.