ಪತ್ನಿ ರಶ್ಮಿಕಾರನ್ನು ಮೊದಲ ಬಾರಿಗೆ ಹುಟ್ಟೂರಿಗೆ ಕರೆತಂದ ವಿಜಯ್ ದೇವರಕೊಂಡ; ಹೊಸ ಫಾರ್ಮ್‌ಹೌಸ್‌ನಲ್ಲಿ ನಡೆಯಿತು ಸತ್ಯನಾರಾಯಣ ಪೂಜೆ
Virosh Village Visit: ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ ಇಂದು (ಮಾ.2) ವಿಜಯ್ ಅವರ ಹುಟ್ಟೂರಾದ ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ತುಮ್ಮನಪೇಟೆಗೆ ಭೇಟಿ ನೀಡಿದ್ದಾರೆ. ಅಲ್ಲಿರುವ ಹೊಸ ಫಾರ್ಮ್‌ಹೌಸ್‌ನಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ಈ ಜೋಡಿಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
-
ಉದಯಪುರದಲ್ಲಿ ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ದಾಂಪತ್ಯ ಬದುಕಿಗೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಸದ್ಯ ದೇಶಾದ್ಯಂತ ಅಭಿಮಾನಿಗಳಿಗೆ ಸಿಹಿ ತಲುಪುವಂತೆ ಮಾಡಿದ್ದಾರೆ. ದೇಶದ ವಿವಿಧ ದೇವಾಲಯಗಳಲ್ಲಿ ಅನ್ನದಾನವನ್ನು ನೆರವೇರಿಸಿದ್ದಾರೆ. ಸದ್ಯ ತಮ್ಮ ಹುಟ್ಟೂರು ತುಮ್ಮನಪೇಟೆಗೆ ರಶ್ಮಿಕಾ ಅವರನ್ನು ವಿಜಯ್ ಕರೆತಂದಿದ್ದಾರೆ. ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿರುವ ಹುಟ್ಟೂರು ತುಮ್ಮನಪೇಟೆಯಲ್ಲಿ ವಿಜಯ್ ಕುಟುಂಬದ ಹೊಸದಾಗಿ ಫಾರ್ಮ್‌ಹೌಸ್ ನಿರ್ಮಾಣ ಮಾಡಿದ್ದು, ಅಲ್ಲಿ ಇಂದು (ಮಾ.2) ಸತ್ಯನಾರಾಯಣ ಪೂಜೆಯನ್ನು ಮಾಡಲಾಗಿದೆ.
ಮದುವೆಯಾದ ಮೇಲೆ ಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಪತ್ನಿಯನ್ನು ವಿಜಯ್ ದೇವರಕೊಂಡ ಅವರನ್ನು ಊರಿನ ಗ್ರಾಮಸ್ಥರು ಅದ್ದೂರಿಯಾಗಿ ವೆಲ್‌ಕಮ್ ಮಾಡಿದ್ದಾರೆ. ಪ್ರಸ್ತುತ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಗ್ರಾಮದ ಹಿರಿಯ ಮಹಿಳೆಯೊಬ್ಬರು ಈ ದಂಪತಿಗೆ ಆರತಿ ಬೆಳಗಿ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ, ನವದಂಪತಿಗಳು ಆಗಮಿಸುತ್ತಿದ್ದಂತೆ ಮನೆಯ ಹೊರಗೆ ನೃತ್ಯಗಾರರು ಪ್ರದರ್ಶನ ನೀಡಿದ್ದಾರೆ. ಹೊಸ ಮನೆಯನ್ನು ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು.
Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!
ಅತ್ತ ನೆಚ್ಚಿನ ಜೋಡಿಯನ್ನು ನೋಡಲು ಅಭಿಮಾನಿಗಳು ಮನೆಯ ಹೊರಗೆ ಕಾದು ಕುಳಿತಿದ್ದರು. ಇನ್ನು, ಈ ಸಂದರ್ಭದಲ್ಲಿ ಸಹೋದರ ಆನಂದ್ ದೇವರಕೊಂಡ ಮತ್ತು ಕುಟುಂಬದ ಇತರ ಸದಸ್ಯರು ನವ ಜೋಡಿಯ ಜೊತೆಗಿದ್ದರು. ಪೂಜೆಯ ನಂತರ ದಂಪತಿಗಳು 2 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಹುಟ್ಟೂರಿಗೆ ವಿಜಯ್ ದೇವರಕೊಂಡ ದಂಪತಿ ಭೇಟಿ
ನಿನ್ನೆ ಅಲ್ಲು ಅರ್ಜುನ್ ಮನೆಗೆ ಭೇಟಿ
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭಾನುವಾರ (ಮಾ.1) ಭೇಟಿ ನೀಡಿದ್ದ ವಿಜಯ್ ಮತ್ತು ರಶ್ಮಿಕಾ, ಅಭಿಮಾನಿಗಳಿಗೆ ಸಿಹಿ ಹಂಚಿದ್ದರು. ನಂತರ ಅಲ್ಲು ಸ್ಟುಡಿಯೋದಲ್ಲಿ ಆಯೋಜಿಸಿದ್ದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರ ವರಪೂಜೆಗೆ ಈ ಜೋಡಿ ಹೋಗಿತ್ತು. ಅಲ್ಲಿ ಕೆಲ ಹೊತ್ತು ಅಲ್ಲು ಕುಟುಂಬದ ಜೊತೆಗೆ ಸಮಯ ಕಳೆದಿತ್ತು. ಇದೀಗ ತುಮ್ಮನಪೇಟೆಯಲ್ಲಿ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದೆ.
Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್ ದೇವರಕೊಂಡ ಜೋಡಿ!
ಮಾ.4ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ ಆರತಕ್ಷತೆ
ವಿಜಯ್ ಮತ್ತು ರಶ್ಮಿಕಾ ಅವರು ಫೆಬ್ರವರಿ 26ರಂದು ಉದಯಪುರದಲ್ಲಿ ತೆಲುಗು ಮತ್ತು ಕೊಡವ ಎರಡೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅವರ ವಿವಾಹದ ಆರತಕ್ಷತೆ ನಡೆಯಲಿದ್ದು, ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ ಎಂದು ತಿಳಿಸಲಾಗಿದೆ.