ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijay - Rashmika Wedding: ಸತಿ ಪತಿಯಾದ ಅಭಿಮಾನಿಗಳ 'ವಿರೋಷ್'! ತೆಲುಗು ಸಂಪ್ರದಾಯದಂತೆ ಮದುವೆ

Rashmika Vijay Tie The Knot: ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಿದೆ. ಇದೀಗ ಮೆಚ್ಚಿನ ಜೋಡಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ.

Rashmika Wedding: ಸತಿ ಪತಿಯಾದ ಅಭಿಮಾನಿಗಳ 'ವಿರೋಷ್'!

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Feb 26, 2026 12:38 PM

ತಾರಾ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್‌ ದೇವರಕೊಂಡ (Vijay Devarkonda) ಇಂದು ( Feb 26) ದಾಂಪತ್ಯ ಜೀವನಕ್ಕೆ (Couple Tie The Knot) ಕಾಲಿಟ್ಟಿದೆ. ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ (Udayapura) ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಿದೆ. ಇದೀಗ ಮೆಚ್ಚಿನ ಜೋಡಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ.

ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ. ಇಬ್ಬರೂ ಮದುವೆ ನಡೆದಿದೆಯಾದರೂ ಮದುವೆಯ ಅಧಿಕೃತ ಫೋಟೊವನ್ನು ಇನ್ನೂ ಈ ಜೋಡಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Rishab Shetty: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

ಸಂಜೆ ಕೊಡವ ಸಂಪ್ರದಾಯದಲ್ಲಿ ವಿವಾಹ

ತೆಲುಗು ಮತ್ತು ಕೊಡವ ಸಂಪ್ರದಾಯಗಳನ್ನು ಗೌರವಿಸಲು ಎರಡು ವಿಭಿನ್ನ ಸಮಾರಂಭಗಳಲ್ಲಿ ವಿವಾಹವಾಗಲಿದ್ದಾರೆ. ಮೊದಲ ವಿವಾಹ ಸಮಾರಂಭವು ವಿಜಯ್ ದೇವರಕೊಂಡ ಅವರ ಪರಂಪರೆಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ತೆಲುಗು ಹಿಂದೂ ಆಚರಣೆಗಳನ್ನು ಅನುಸರಿಸಿದೆ. ಸಂಜೆ ರಶ್ಮಿಕಾ ಮಂದಣ್ಣ ಅವರು ಕೊಡವ ಸಂಪ್ರದಾಯದಲ್ಲಿ ವಿವಾಹ ಆಗಲಿದ್ದಾರೆ.

ಮತ್ತೊಂದು ಆರತಕ್ಷತೆಯನ್ನು ಮಾಡುವ ಪ್ಲ್ಯಾನ್‌

ರಶ್ಮಿಕಾ ಅವರು ಕೊಡಗು ಜಿಲ್ಲೆ ವಿರಾಜಪೇಟೆಯ ಕದಲೂರು ಗ್ರಾಮದವರು. ರಶ್ಮಿಕಾ ಕುಟುಂಬಕ್ಕೆ ವಿರಾಜಪೇಟೆಯ ಸುತ್ತ-ಮುತ್ತ ಸಾಕಷ್ಟು ಸಂಬಂಧಿಕರಿದ್ದಾರೆ. ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಆ ಭಾಗದ ಪ್ರಭಾವಿ ಉದ್ಯಮಿಯು ಹೌದು. ಅಲ್ಲದೆ, ವಿರಾಜಪೇಟೆಯಲ್ಲಿ ಅವರ ಒಡೆತನದ ಐಷಾರಾಮಿ ಕಲ್ಯಾಣ ಮಂಟಪವಿದೆ. ಹಾಗಾಗಿ, ಇದೇ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ರಶ್ಮಿಕಾ ಮತ್ತು ವಿಜಯ್‌ ಅವರಿಗೆ ಮತ್ತೊಂದು ಆರತಕ್ಷತೆಯನ್ನು ಮಾಡುವ ಪ್ಲ್ಯಾನ್‌ ಇದೆಯಂತೆ.

ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ, ಅಂದು ಸಂಬಂಧಿಕರು ಮತ್ತು ಕೊಡಗು ಭಾಗದ ಅವರ ಗೆಳೆಯರು, ಹಿತೈಷಿಗಳಿಗಾಗಿ ಎಂದೇ ಈ ಆರತಕ್ಷತೆ ಅಥವಾ ಔತಣಕೂಟವನ್ನು ಆಯೋಜಿಸಲು ಮದನ್ ಮಂದಣ್ಣ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಶ್ಮಿಕಾಗೆ ಉಡುಗೊರೆ ಕೊಟ್ಟ ವಿಜಯ್ ತಾಯಿ

ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದಲ್ಲಿ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rashmika-Vijay Wedding: ಇಂದು ರಶ್ಮಿಕಾ-ವಿಜಯ್‌ ಅದ್ಧೂರಿ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ

ಕೆಲ ವರ್ಷಗಳಿಂದಲೂ ಎಲ್ಲ ಹಬ್ಬಗಳನ್ನು ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ಆಚರಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ರಶ್ಮಿಕಾಗೆ ಆಹ್ವಾನ ಇದ್ದೇ ಇರುತ್ತಿತ್ತು.