ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಅಂದು ರಿಷಬ್‌ ಶೆಟ್ಟಿ ತಲೆಗೆ ಹೊಡೆದಿದ್ರಂತೆ ಆ ನಿರ್ದೇಶಕ!

Divine star Rishab Shetty: ಸಿನಿಮಾ ರಂಗ ಎಲ್ಲರಿಗೂ ಹೂವಿನ ಹಾಸಿಗೆಯಲ್ಲ ಬಹುತೇಕರಿಗೆ ಜೀವನ ಪಾಠವನ್ನೆ ತಿಳಿಸಿಕೊಟ್ಟಿದೆ. ಅಂತೆಯೆ ನಟ ರಿಷಬ್‌ ಶೆಟ್ಟಿ ಅವರು ಕೂಡ ಸಾವಿರಾರು ಕನಸ್ಸು ಹೊತ್ತು ಜೀವನದಲ್ಲಿ ಏನಾದರೂ ಸಾಧಿಸಬೇಕು, ಸಿನಿಮಾರಂಗದಲ್ಲಿ ಗುರುತಿಸುವಂತೆ ಬೆಳೆಯಬೇಕು ಎಂದೆಲ್ಲ ಅಂದು ಕೊಂಡಿದ್ದರು. ಆದರೆ ಕೆಲವು ನಿಂದನೆಗೆ ಅವರು ಒಳಗಾದ ಬಳಿಕ ಈ ಕನಸ್ಸಿಂದಲೇ ದೂರ ಉಳಿದು ಸ್ವಂತ ಉದ್ದಿಮೆ ಮಾಡಬೇಕಿಂದಿದ್ದರು. ಅಷ್ಟಕ್ಕೂ ಅವರಿಗಾದ ಅವಮಾನ ಏನು?

ಅಂದು ರಿಷಬ್‌ ಶೆಟ್ಟಿ ತಲೆಗೆ ಹೊಡೆದಿದ್ರಂತೆ ಆ ನಿರ್ದೇಶಕ!

-

Profile Pushpa Kumari Oct 12, 2025 3:02 PM

ನವದೆಹಲಿ: ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ ಕಾಂತಾರಾ ಚಾಪ್ಟರ್ 1 (Kantara Chapter 1)ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ರಿಲೀಸ್ ಆಗಿದ್ದು ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸ್ಯಾಂಡಲ್ ವುಡ್, ಮಾಲಿವುಡ್, ಟಾಲಿವುಡ್, ಬಾಲಿ ವುಡ್ ಎಲ್ಲಿ ನೋಡಿದರು ಈ ಸಿನಿಮಾದ್ದೆ ಹವಾ. ದೈವಾರಾಧನೆ, ಪ್ರಕೃತಿ ರಕ್ಷಣೆ, ಹಳೆ ಕಾಲದ ಸಂಪ್ರದಾಯ ಪರಂಪರೆ ಮೇಲೆ ಬೆಳಕು ಚೆಲ್ಲುವ ಈ ಸಿನಿಮಾಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ರಿಷಬ್‌ ಶೆಟ್ಟಿ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಅಕ್ಟೋಬರ್ 2 ರಂದು ತೆರೆಕಂಡ ಈ ಸಿನಿಮಾ ಬಹುತೇಕ ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಸಿನಿಮಾ ತಂಡದ ಜೊತೆಗೆ ನಟ ರಿಷಬ್‌ ಶೆಟ್ಟಿ ಕೂಡ ಚಿತ್ರಮಂದಿರಗಳಿಗೆ ತೆರಳಿ ಮತ್ತಷ್ಟು ಪ್ರಚಾರ ನೀಡುತ್ತಿದ್ದಾರೆ. ಈ ಸಿನಿಮಾ 500 ಕೋಟಿ ಕಲೆಕ್ಷನ್ ದಾಟಿದ್ದು ಇನ್ನು 1000ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಸಿನಿಮಾ ಯಶಸ್ವಿಯಾದಂತೆ ರಿಷಭ್ ಅವರ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಆದರೆ ಒಂದು ಕಾಲದಲ್ಲಿ ಇವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸೋಲು, ಅವಮಾನ, ನಿಂದನೆಗಳನ್ನು ಎದುರಿಸಿದ್ದರು ಎಂಬ ಮಾಹಿತಿಯೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನಿಮಾ ರಂಗ ಎಲ್ಲರಿಗೂ ಹೂವಿನ ಹಾಸಿಗೆಯಲ್ಲ ಬಹುತೇಕರಿಗೆ ಜೀವನ ಪಾಠವನ್ನೆ ತಿಳಿಸಿ ಕೊಟ್ಟಿದೆ. ಅಂತೆಯೆ ನಟ ರಿಷಬ್‌ ಶೆಟ್ಟಿ ಅವರು ಕೂಡ ಸಾವಿರಾರು ಕನಸ್ಸು ಹೊತ್ತು ಜೀವನದಲ್ಲಿ ಏನಾದರೂ ಸಾಧಿಸಬೇಕು, ಸಿನಿಮಾ ರಂಗದಲ್ಲಿ ಗುರುತಿಸುವಂತೆ ಬೆಳೆಯಬೇಕು ಎಂದೆಲ್ಲ ಅಂದುಕೊಂಡಿದ್ದರು ಆದರೆ ಕೆಲವು ನಿಂದನೆಗೆ ಅವರು ಒಳಗಾದ ಬಳಿಕ ಈ ಕನಸ್ಸಿಂದಲೇ ದೂರ ಉಳಿದು ಸ್ವಂತ ಉದ್ದಿಮೆ ಮಾಡಬೇಕಿಂದಿದ್ದರು. ಅಷ್ಟಕ್ಕು ಅವರಿಗಾದ ಅವಮಾನ ಏನು?

ನಟ ರಿಷಭ್ ಅವರು ನಿರ್ದೇಶಕರಾಗುವ ಮೊದಲು ಸಣ್ಣ ಪುಟ್ಟ ಪಾತ್ರದಲ್ಲಿ ಕೆಲ ಸಿನಿಮಾದಲ್ಲಿ ಅಭಿನಯಿಸಿದ್ದರು. ಸಹ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದರು. ಇದೇ ಸಂದರ್ಭದಲ್ಲಿ ಅವರು ಅವಮಾನ ಕೂಡ ಎದುರಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿ ಕೊಂಡಿದ್ದರು. ರವಿ ಶ್ರೀವತ್ಸ ನಿರ್ದೇಶನದ ಗಂಡ- ಹೆಂಡತಿ ಚಿತ್ರದಲ್ಲಿ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಂದು ದಿನ ಶೂಟಿಂಗ್ ಸೆಟ್‌ನಲ್ಲಿ ಯಾರೋ ಮಾಡಿದ ತಪ್ಪಿಗೆ ನಾನು ಅವಮಾನ ಎದುರಿಸಿದ್ದೆ. ಆಗ ನನಗೆ ಏನು ಮಾಡಬೇಕೆಂದು ಕೂಡ ಗೊತ್ತಾಗದೇ ನಿಸ್ಸಾಹಯಕ ನಾಗಿದ್ದೆ. ನಿರ್ದೇಶಕರು ನನ್ನ ತಲೆಗೆ ಹೊಡೆದಿದ್ದರು. ಆಗ ನನಗೆ ಬೇಸರವಾಯ್ತು. ಈ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಪಯಣ ಸಾಧ್ಯವಿಲ್ಲ ಎನಿಸಿತ್ತು. ಬಳಿಕ ನನಗೆ ಅವರು ಬೇಕು ಅಂತ ಹೊಡೆಯಲಿಲ್ಲ ಎಂಬ ಅರಿವಾಯಿತು. ಆ ಕೆಲಸದ ಒತ್ತಡ ಹೇಗಿರುತ್ತೆ ಎಂಬುದನ್ನು ನಾನು ನಿರ್ದೇಶಕನಾದ ಬಳಿಕ ಅರ್ಥ ಆಯಿತು ಎಂದು ಹೇಳಿದ್ದಾರೆ.

ಇದನ್ನು ಓದಿ:Rishab Shetty: ಡಿವೈನ್‌ ಸ್ಟಾರ್‌ ಮೀಟ್ಸ್‌ ಬಿಗ್‌ ಬಿ; ʼಕೌನ್ ಬನೇಗಾ ಕರೋಡ್‌ಪತಿ' ಶೋನಲ್ಲಿ ರಿಷಬ್‌ ಶೆಟ್ಟಿ

ಆ ಸಮಯದಲ್ಲಿ ಸಿನಿಮಾಕ್ಕೆ ವಿರಾಮ ಹೇಳಿ ಹೋಟೆಲ್ ಆರಂಭಿಸಿದೆ. ಆದರೆ ಅದು ನಷ್ಟ ಅನುಭವಿಸುವಂತಾಯ್ತು. ಸಾಲ ಮಾಡಿ ಹಣ ಹಾಕಿ ಕಳೆದುಕೊಂಡಿದ್ದೆ. ಅದೇ ಸಮಯದಲ್ಲಿ ನನ್ನ ಹೆಸರನ್ನು ಪ್ರಶಾಂತ್ ಶೆಟ್ಟಿ ಅಂತಿದ್ದದ್ದನ್ನು ರಿಷಬ್‌ ಶೆಟ್ಟಿ ಎಂದು ಬದಲಿಸಿಕೊಂಡೆ. ಅಗ ನನಗೆ ರಕ್ಷಿತ್ ಶೆಟ್ಟಿ ಅಭಿನಯದ 'ತುಘಲಕ್' ಚಿತ್ರದಲ್ಲಿ ಸಣ್ಣ ಪಾತ್ರ ಅಭಿನಯಿಸಲು ಅವಕಾಶ ಸಿಕ್ಕಿತ್ತು. ಹೀಗೆ ಸಾಲು ಸಾಲು ಹಂತ ದಾಟಿ ಕಿರಿಕ್ ಪಾರ್ಟಿ ಮೂಲಕ ಸಕ್ಸಸ್ ಜರ್ನಿ ಆರಂಭವಾಯ್ತು ಎಂದು ಸಂದರ್ಶನದಲ್ಲಿ ರಿಷಬ್‌ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅವರು ಸಿನಿಮಾ ಯಶಸ್ಸನ್ನು ಸೆಲಬ್ರೇಟ್ ಮಾಡಲು ಮುಂಬೈಗೆ ತೆರಳಿದ್ದು ಅಲ್ಲಿನ ಕೆಲವು ದೇಗುಲಕ್ಕೆ ಮತ್ತು ಸಿನಿಮಾ ಮಂದಿರಕ್ಕೂ ಭೇಟಿ ನೀಡಿದ್ದರು. ಮುಂಬೈನ ಗೈಟಿ ಗೆಲಕ್ಸಿ ಥಿಯೇಟರ್‌ನಲ್ಲಿ ಪ್ರೇಕ್ಷಕರ ಜೊತೆ ರಿಷಭ್ ಶೆಟ್ಟಿ ಅವರು ಸಿನಿಮಾ ವೀಕ್ಷಿಸಿದರು. ಆಗ ಅವ ರಿಗೆ ಥಿಯೇಟರ್ ಮುಂಭಾಗದಲ್ಲಿ ಹೂಮಳೆಯನ್ನು ಸುರಿಸಲಾಗಿದೆ. ಒಂದು ಕಾಲದಲ್ಲಿ ನಿರ್ದೇಶಕ ರಿಂದಲೇ ಅವಮಾನಕ್ಕೊಳಗಾದ ಇವರು ಈಗ ದೇಶವೇ ಮೆಚ್ಚಿಕೊಂಡಾಡುವ ಯಶಸ್ವಿ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.