Yash: ʻಟಾಕ್ಸಿಕ್ʼ ಸಿನಿಮಾಕ್ಕಾಗಿ ಕೋಟಿ ಕೋಟಿ ಚಾರ್ಜ್ ಮಾಡಿದ ರುಕ್ಮಿಣಿ ವಸಂತ್; ರುಕ್ಕು ಸಂಭಾವನೆ ಕೇಳಿದ ಸ್ಯಾಂಡಲ್‌ವುಡ್ ಶಾಕ್!
'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಟ್ರೇಲರ್‌ನಲ್ಲಿ ರುಕ್ಮಿಣಿ ವಸಂತ್ 'ಮೆಲಿಸ್ಸಾ' ಎಂಬ ಪವರ್‌ಫುಲ್ ಪಾತ್ರದ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ಕಾಂತಾರ: ಚಾಪ್ಟರ್ 1' ಹಿಟ್ ನಂತರ ಅವರ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದು, ಟಾಕ್ಸಿಕ್ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
-
'ರಾಕಿಂಗ್ ಸ್ಟಾರ್' ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದ ಟ್ರೇಲರ್ ಆಗಸ್ಟ್ 8ರಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ಬಹುಭಾಷಾ ತಾರೆಯರ ದಂಡೇ ಇದ್ದು, ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ 'ಮೆಲಿಸ್ಸಾ' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ಗ್ಲಿಂಪ್ಸ್‌ನಲ್ಲಿ ರುಕ್ಮಿಣಿ ಅವರ ಲುಕ್ ಅಪಾರ ಗಮನ ಸೆಳೆದಿದ್ದು, ಅವರ ಅಭಿನಯಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಮೂಲಕ ರುಕ್ಮಿಣಿ ಅವರ ವೃತ್ತಿಜೀವನ ಹೊಸ ಹಾಗೂ ಮಹತ್ವದ ಹಂತ ತಲುಪಲಿದೆ.
ದುಬಾರಿ ಸಂಭಾವನೆ ಪಡೆದ ರುಕ್ಮಿಣಿ ವಸಂತ್
'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ಕಾಂತಾರ: ಚಾಪ್ಟರ್ 1' ಸಿನಿಮಾಗಳ ಯಶಸ್ಸಿನ ನಂತರ ರುಕ್ಮಿಣಿ ಅವರ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ವರದಿಗಳ ಪ್ರಕಾರ, 'ಟಾಕ್ಸಿಕ್' ಸಿನಿಮಾಗಾಗಿ ಅವರು ಸುಮಾರು ₹3 ರಿಂದ ₹5 ಕೋಟಿ ರೂಪಾಯಿಗಳಷ್ಟು ಭಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಾಲು ಸಾಲು ಹಿಟ್ ನೀಡುತ್ತಿರುವ ಅವರಿಗೆ ಈಗ ದಕ್ಷಿಣ ಭಾರತದ ವಿವಿಧ ಭಾಷೆಗಳಿಂದ ಅವಕಾಶಗಳು ಹರಿದುಬರುತ್ತಿದ್ದು, ಖ್ಯಾತ ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ರುಕ್ಮಿಣಿ ಅವರನ್ನೇ ಆಯ್ಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ಎಲ್ಲರ ಕಣ್ಣು ಕೋರೈಸಿದ ರುಕ್ಮಿಣಿ ವಸಂತ್ ಲುಕ್
ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರುಕ್ಮಿಣಿ ವಸಂತ್ ಅವರ ಲುಕ್ ಎಲ್ಲರ ಕಣ್ಣು ಕೋರೈಸಿದೆ. ಕ್ರೀಮ್ ಬಣ್ಣದ 'ಮಾಂಟ್‌ಸೆಂಡ್ ಲೇಸ್ ಮಿಡಿ ಡ್ರೆಸ್' ಧರಿಸಿ, ಸರಳ ಹಾಗೂ ಎಲಿಗಂಟ್ ಲುಕ್‌ನಲ್ಲಿ ಅವರು ಮಿಂಚಿದರು. ಈ ಡ್ರೆಸ್ ಬೆಲೆ ಸುಮಾರು ₹54,269 ಎಂದು ಹೇಳಲಾಗಿದೆ. ಕಾಲಿಗೆ ಧರಿಸಿದ್ದ ಹೀಲ್ಸ್ ಬೆಲೆ ಸುಮಾರು ₹4,350 ಆಗಿದೆ. ಸರಳವಾದ ಇಯರ್‌ರಿಂಗ್ಸ್, ಚೈನ್, ಲೈಟ್ ಮೇಕಪ್ ಹಾಗೂ ಹೆವಿ ಆಭರಣಗಳಿಲ್ಲದ ಸಿಂಪಲ್ ಹೇರ್‌ಸ್ಟೈಲ್ ಮೂಲಕ ರುಕ್ಮಿಣಿ ಗಮನಸೆಳೆದಿದ್ದಾರೆ. ದುಬಾರಿ ಔಟ್‌ಫಿಟ್‌ನಲ್ಲೂ ಸಿಂಪಲ್ ಸ್ಟೈಲಿಂಗ್ ಮೂಲಕ ಕವರ್ ಆದ ನಟಿಯ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Nivin Pauly: ಮಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್
'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಹಾಗೂ ರುಕ್ಮಿಣಿ ವಸಂತ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಯನತಾರಾ ಹಾಗೂ ಕಿಯಾರಾ ಅವರಂತಹ ಸೂಪರ್‌ಸ್ಟಾರ್‌ಗಳ ನಡುವೆಯೂ ರುಕ್ಮಿಣಿ ವಸಂತ್ ತಮ್ಮದೇ ಆದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದು, ಸಿನಿಪ್ರಿಯರು 'ಮೆಲಿಸ್ಸಾ' ಪಾತ್ರವನ್ನು ಬೆಳ್ಳಿಪರದೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.