ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟಿಸಿದ ಸಿನಿಮಾಗಳೆಲ್ಲಾ ಫ್ಲಾಪ್, ಆದರೂ ನೂರಾರು ಕೋಟಿ ಸಂಭಾವನೆ ಜೇಬಿಗಿಳಿಸಿದ ಸಲ್ಮಾನ್‌ ಖಾನ್!‌ ತೆಲುಗು ನಿರ್ಮಾಪಕ ಇಷ್ಟೊಂದು ದುಡ್ಡು ಕೊಟ್ಟಿದ್ದೇಕೆ?

Salman Khan Dil Raju Film: ಸಲ್ಮಾನ್‌ ಖಾನ್‌ ಅವರ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಸಲ್ಮಾನ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದರೂ ಈ ಚಿತ್ರಕ್ಕಾಗಿ ನಿರ್ಮಾಪಕ ದಿಲ್ ರಾಜು ದುಬಾರಿ ಸಂಭಾವನೆ ನೀಡಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ದ್ವಿಭಾಷಾ ಆ್ಯಕ್ಷನ್ ಚಿತ್ರವು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ.

‌ಫ್ಲಾಪ್ ಸಿನಿಮಾಗಳ ನಡುವೆಯೂ ದುಬಾರಿ ಸಂಭಾವನೆ ಪಡೆದ ಸಲ್ಮಾನ್ ಖಾನ್!

-

Avinash GR
Avinash GR Mar 31, 2026 3:29 PM

ಸಲ್ಮಾನ್‌ ಖಾನ್‌ ಅಭಿನಯದ ಹೊಸ ಸಿನಿಮಾವನ್ನು ತೆಲುಗು ನಿರ್ಮಾಪಕರು ನಿರ್ಮಾಣ ಮಾಡುವುದು ಖಚಿತವಾಗಿದೆ. ಹೌದು, ತೆಲುಗಿನ ದಿಲ್‌ ರಾಜು ಅವರು ಸಲ್ಮಾನ್‌ ಖಾನ್‌ ಕಾಲ್‌ಶೀಟ್‌ ಪಡೆಯುವಲ್ಲಿ ಸಕ್ಸಸ್‌ ಆಗಿದ್ದಾರೆ. ಅದು ಕೂಡ ದುಬಾರಿ ಸಂಭಾವನೆಯನ್ನು ಪಡೆಯುವ ಮೂಲಕ ಸಲ್ಮಾನ್‌ ಖಾನ್‌ ಸದ್ದು ಮಾಡಿದ್ದಾರೆ.

ಸಿನಿಮಾ ಸೋತರು ತಗ್ಗಲಿಲ್ಲ ಸಂಭಾವನೆ

ಹೌದು, ಸಲ್ಮಾನ್‌ ಖಾನ್‌ ಅವರ ಇತ್ತೀಚಿನ ಸಿನಿಮಾಗಳು ಅಷ್ಟೇನೂ ಕಮಾಯಿ ಮಾಡಿಲ್ಲ. ಆದರೂ ಸಂಭಾವನೆಯಲ್ಲಿ ಅವರು ಯಾವುದೇ ಇಳಿಕೆ ಮಾಡಿಕೊಂಡಿಲ್ಲ. ದುಬಾರಿ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸದ್ಯ ದಿಲ್‌ ರಾಜು ನಿರ್ಮಾಣ ಮಾಡಲಿರುವ ಹೊಸ ಸಿನಿಮಾಕ್ಕಾಗಿ ಸಲ್ಮಾನ್‌ ಖಾನ್‌ ಅವರಿಗೆ 120 ಕೋಟಿ ರೂ. ಸಂಭಾವನೆಯನ್ನು ನೀಡಲಾಗುತ್ತಿದೆಯಂತೆ. ಇದೊಂದು ಹಿಂದಿ-ತೆಲುಗು ದ್ವಿಭಾಷಾ ಆ್ಯಕ್ಷನ್ ಚಿತ್ರವಾಗಿದ್ದು, ಇದರ ಬಜೆಟ್‌ 500 ಕೋಟಿ ರೂ. ದಾಟಲಿದೆ ಎಂಬ ಟಾಕ್‌ ಇದೆ.

ಆಸ್ಪತ್ರೆಗೆ ದಾಖಲಾದ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ, ಆರೋಗ್ಯ ಸಮಸ್ಯೆ ಏನು?

ಇನ್ನು, ಸಲ್ಮಾನ್‌ ಖಾನ್‌ 120 ಕೋಟಿ ರೂ. ಡಿಮ್ಯಾಂಡ್‌ ಮಾಡಿದರೂ, ನಿರ್ಮಾಪಕ ದಿಲ್‌ ರಾಜು ಅದನ್ನು ಕೊಡಲು ಒಪ್ಪಿದ್ದಾರೆ. ಅವರ ಕಡೆಯಿಂದ ಯಾವುದೇ ತಕರಾರು ಇಲ್ಲ ಎನ್ನಲಾಗಿದೆ. ಅಸಲಿಗೆ ಸಲ್ಮಾನ್‌ ಖಾನ್‌ ಸಿನಿಮಾಗಳು ಒಂದರ ಹಿಂದೊಂದು ನೆಲಕಚ್ಚುತ್ತಿದ್ದರಿಂದ ಇಷ್ಟೊಂದು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ನೀಡಲು ಬಾಲಿವುಡ್‌ನ ಕೆಲ ನಿರ್ಮಾಪಕರು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಆದರೆ ದಿಲ್‌ ರಾಜು ಮಾತ್ರ ಸಂಭಾವನೆ ಜೊತೆಗೆ ಚಿತ್ರದ ಸ್ಯಾಟಲೈಟ್ ಹಕ್ಕುಗಳು, ಮ್ಯೂಸಿಕ್ ಮತ್ತು ಇತರ ಹಕ್ಕುಗಳ ಲಾಭದಲ್ಲೂ ಸಲ್ಮಾನ್‌ಗೆ ಪಾಲನ್ನು ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಸಂಭಾವನೆ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಸಲ್ಮಾನ್‌ ಜೊತೆ ಒಂದೊಳ್ಳೆ ಸಿನಿಮಾ ಮಾಡುವುದು ದಿಲ್‌ ರಾಜು ಅವರ ಕನಸಾಗಿದೆಯಂತೆ.

ಹೊಸ ಸಿನಿಮಾ ಬಗ್ಗೆ ಸಲ್ಮಾನ್‌ ಖಾನ್‌ ಪೋಸ್ಟ್‌



ವಂಶಿ ಪೈಡಿಪಲ್ಲಿ ನಿರ್ದೇಶಕ

ಈ ಹಿಂದೆ ಯೆವಡು, ಊಪಿರಿ, ವಾರಿಸು, ಮಹರ್ಷಿ ಥರದ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ಈಗ ಸಲ್ಮಾನ್‌ ಖಾನ್‌ಗೆ ನಿರ್ದೇಶನ ಮಾಡಲಿದ್ದು, ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ತಮ್ಮ ಎಕ್ಸ್ (X) ಖಾತೆಯಲ್ಲಿ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ ಇರುವ ಫೋಟೋ ಹಂಚಿಕೊಳ್ಳುವ ಮೂಲಕ ಈ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. "ಈ ಏಪ್ರಿಲ್‌ನಿಂದ ದಿಲ್, ದಿಮಾಗ್, ಜಿಗರ್ ಸೆ ಮೂಲಕ ಬರುತ್ತಿದ್ದೇವೆ" ಎಂದು ಅವರು ಬರೆದುಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ದಿಲ್, ದಿಮಾಗ್, ಜಿಗರ್ ಸೆ' ಇರಬಹುದಾ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಏಪ್ರಿಲ್‌ನಿಂದಲೇ ಶೂಟಿಂಗ್ ಆರಂಭವಾಗಲಿದ್ದು, 2027ರ ಈದ್‌ ಹಬ್ಬಕ್ಕೆ ಕೊಡುಗೆಯಾಗಿ ಈ ಚಿತ್ರ ರಿಲೀಸ್‌ ಆಗುವ ಸಾಧ್ಯತೆ ಇದೆ.