ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sigma Movie: ತಮಿಳುನಾಡು ಸಿಎಂ ವಿಜಯ್‌ ಪುತ್ರನ ಮೊದಲ ಸಿನಿಮಾದ ಹಾಡಿಗೆ ‌ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ ಧ್ವನಿ; ಈ ಸಾಂಗ್‌ ಹೇಗಿದೆ ಗೊತ್ತಾ?

Saanvi Sudeep: ತಮಿಳುನಾಡು ಸಿಎಂ ವಿಜಯ್‌ ಪುತ್ರ ಜೇಸನ್‌ ಸಂಜಯ್‌ ನಿರ್ದೇಶನದ ʻಸಿಗ್ಮಾʼ ಸಿನಿಮಾದ ‘ಸುಲೋಚನ’ ಹಾಡಿಗೆ ಸಾನ್ವಿ ಸುದೀಪ್ ಧ್ವನಿ ನೀಡಿದ್ದಾರೆ. ಸಂದೀಪ್ ಕಿಶನ್ ನಟನೆಯ ಈ ಚಿತ್ರಕ್ಕೆ ಎಸ್. ಥಮನ್ ಸಂಗೀತ ನೀಡಿದ್ದು, ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.

ತಮಿಳುನಾಡು CM ವಿಜಯ್‌ ಪುತ್ರನ ʻಸಿಗ್ಮಾʼ ಸಿನಿಮಾಗೆ ಹಾಡಿದ ಸಾನ್ವಿ ಸುದೀಪ್‌

-

Avinash GR
Avinash GR Sep 23, 2026 3:49 PM

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮ ಮಧುರ ಗಾಯನದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈ ಹಿಂದೆ ತಮ್ಮ ತಂದೆಯ ‘ಮಾರ್ಕ್‌’ ಸಿನಿಮಾದಲ್ಲಿ ‘ಮಸ್ತ್ ಮಲೈಕಾ’ ಎಂಬ ಸೂಪರ್ ಹಿಟ್ ಹಾಡನ್ನು ಹಾಡಿ ಅಪಾರ ಪ್ರೇಕ್ಷಕರ ಮನಗೆದ್ದಿದ್ದ ಸಾನ್ವಿ, ಇದೀಗ ಮತ್ತೊಂದು ಬಿಗ್‌ ಪ್ರಾಜೆಕ್ಟ್‌ನ ಮಾಸ್‌ ಹಾಡಿಗೆ ಧ್ವನಿಯಾಗುವ ಮೂಲಕ ಇಡೀ ಸೌತ್ ಸಿನಿ ದುನಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

ಸಿಎಂ ಪುತ್ರನ ಮೊದಲ ಸಿನಿಮಾ

ಟಿವಿಕೆ ಪಕ್ಷದ ಸಂಸ್ಥಾಪಕ, ತಮಿಳುನಾಡಿನ ಮುಖ್ಯಮಂತ್ರಿ 'ದಳಪತಿ' ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ ‘ಸಿಗ್ಮಾ’ದಲ್ಲಿ ಈ ಹಾಡು ಮೂಡಿಬಂದಿದೆ. ನಿರ್ದೇಶಕ ಜೇಸನ್ ಸಂಜಯ್ ಈ ಮೆಗಾ ಪ್ರಾಜೆಕ್ಟ್ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ಈ ಚಿತ್ರದಲ್ಲಿ ಪ್ರತಿಭಾವಂತ ನಟ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್‌ನ ಪ್ರತಿಷ್ಠಿತ ಬ್ಯಾನರ್ ‘ಲೈಕಾ ಪ್ರೊಡಕ್ಷನ್ಸ್’ ಈ ಬಿಗ್ ಬಜೆಟ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ.

ಥಮನ್ ಸಂಗೀತ ಸಂಯೋಜನೆ

ʻಸಿಗ್ಮಾʼ ಚಿತ್ರದಲ್ಲಿನ ‘ಸುಲೋಚನ’ ಎಂಬ ರೋಮ್ಯಾಂಟಿಕ್ ಗೀತೆಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಅತ್ಯದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಸೂಪರ್ ಸುಬು ಅವರ ಆಕರ್ಷಕ ಸಾಹಿತ್ಯವಿರುವ ಈ ಗೀತೆಗೆ ಸಾನ್ವಿ ಸುದೀಪ್ ತಮ್ಮ ವಿಶಿಷ್ಟ ಕಂಠಸಿರಿಯಿಂದ ಜೀವ ತುಂಬಿದ್ದಾರೆ. ಎಸ್. ಥಮನ್ ಅವರ ಕ್ಯಾಚಿ ಟ್ಯೂನ್ ಜೊತೆಗೆ ಸಾನ್ವಿ ಅವರ ಕಂಠಸಿರಿ ಕೇಳುಗರನ್ನು ಮೋಡಿ ಮಾಡುತ್ತಿದೆ.

Sanvi Sudeep: ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

ಕಿಚ್ಚನ ಫ್ಯಾನ್ಸ್ ಖುಷ್‌

‘ಸುಲೋಚನ’ ಹಾಡು ಸಾಮಾಜಿಕ ಜಾಲತಾಣಗಳು ಹಾಗೂ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಧೂಳೆಬ್ಬಿಸಿದ್ದು, ಅಪಾರ ಮೆಚ್ಚುಗೆ ಗಳಿಸಿ ಹಿಟ್ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಇಷ್ಟೊಂದು ಕ್ರೇಜ್ ಹುಟ್ಟುಹಾಕಿರುವುದು ಇಡೀ ‘ಸಿಗ್ಮಾ’ ಚಿತ್ರತಂಡಕ್ಕೆ ಭಾರಿ ಮೈಲೇಜ್ ತಂದುಕೊಟ್ಟಿದೆ. ಇದರೊಂದಿಗೆ ಕನ್ನಡದ ಸಾನ್ವಿ ಸುದೀಪ್ ಗಾಯಕಿಯಾಗಿ ಬಹುಭಾಷೆಗಳಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದು ಅವರ ಅಭಿಮಾನಿಗಳಿಗೂ ಹೆಮ್ಮೆ ತಂದಿದೆ.