Amruthadhare Serial: ಕಳಚಿಬಿತ್ತು ಶಕುಂತಲಾ ಮುಖವಾಡ: ಪ್ರೀತಿ ಹುಡುಕಿ ಹೊರಟ ಗೌತಮ್
‘ಮತ್ತೊಂದು ಮಗುವಿನ ಬಗ್ಗೆ ನಿಜ ಹೇಳದ ಕಾರಣ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಭೂಮಿಕಾ ಹೆಸರಲ್ಲಿ ಶಕುಂತುಲಾಳೇ ಪತ್ರ ಬರೆದಿದ್ದಾಳೆ. ಈ ವಿಚಾರವನ್ನು ನಿಜವಾದ ತಾಯಿಯು ಗೌತಮ್ಗೆ ಮನವರಿಕೆ ಮಾಡಿಸಿದ್ದಾಳೆ. ಈ ವಿಚಾರ ತಿಳಿಯತ್ತಿದ್ದಂತೆ ಗೌತಮ್ ಓಡೋಡಿ ಮನೆಗೆ ಬಂದಿದ್ದಾನೆ.

Amruthadare Serial -

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದ ಎಪಿಸೋಡ್ ಬಂದೇ ಬಿಟ್ಟಿದೆ. ಈ ಧಾರಾವಾಹಿಯಲ್ಲಿ ಕಥಾ ನಾಯಕ ಗೌತಮ್ ಮಲತಾಯಿ ಶಕುಂತಲ ಕೆಟ್ಟವಳು. ಆದರೆ, ಆಕೆ ಒಳ್ಳೆಯವಳು ಎಂಬ ಮುಖವಾಡ ತೊಟ್ಟಿದ್ದಳು. ಎಲ್ಲರೂ ಅದನ್ನು ನಂಬಿದ್ದಾರೆ ಕೂಡ. ಬಳಿಕ ಹಂತ ಹಂತವಾಗಿ ಶಕುಂತಲಾಳ ನೈಜ್ಯ ಮುಖ ಬಯಲಾಗುತ್ತ ಬಂತು. ಮೊದಲನೆಯದಾಗಿ ಭೂಮಿಕಾಗೆ ಈ ವಿಷಯ ಗೊತ್ತಾಯಿತು. ಈಗ ಇದು ಗೌತಮ್ಗು ತಿಳಿದು ಹೋಗಿದೆ. ತನ್ನೆಲ್ಲ ಆಸ್ತಿಯನ್ನು ಶಕುಂತಲಾಗೆ ಕೊಟ್ಟು ಗೌತಮ್ ಈಗ ಮನೆಬಿಟ್ಟು ಹೋಗಿದ್ದಾನೆ.
ತನಗೆ ಎರಡು ಮಕ್ಕಳಿದ್ದ ವಿಚಾರ ಭೂಮಿಕಾಗೆ ಗೊತ್ತಾಗಿದೆ. ಒಂದು ಮಗುವನ್ನು ಶಕುಂತಲಾ ಕಿಡ್ನಾಪ್ ಮಾಡಿರುವ ಕಹಿ ಸತ್ಯ ಕೂಡ ಗೊತ್ತಾಗಿದೆ. ಈ ಕಾರಣದಿಂದಲೇ ಗೌತಮ್ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟಿದ್ದ. ಆದರೆ, ಶಕುಂತಲಾ ಪತಿ ಹಾಗೂ ಪತ್ನಿ ಮಧ್ಯೆ ಕಲಹ ತರಬೇಕು ಎಂಬ ಕಾರಣಕ್ಕೆ ಭೂಮಿಕಾಗೆ ಈ ವಿಚಾರವನ್ನು ಹೇಳಿದಳು.. ಆದರೆ ಭೂಮಿಕಾ ಇದನ್ನು ನಂಬಲಿಲ್ಲ. ಆ ಬಳಿಕ ಸಾಕಷ್ಟು ಸಾಕ್ಷಿ ಕೊಟ್ಟ ಬಳಿಕ ಭೂಮಿಕಾ ವಿಚಾರವನ್ನು ನಂಬಿದ್ದಾಳೆ.
ಬಳಿಕ ಶಕುಂತಲಾನ ಎದುರಿಸಲಾಗದೇ ಸೋಲು ಒಪ್ಪಿಕೊಂಡು ಮನೆಯಿಂದ ಹೊರ ನಡೆದಿದ್ದಾಳೆ ಭೂಮಿಕಾ. ಇನ್ನೊಂದು ಮಗುವನ್ನು ನಿನ್ನ ಕಣ್ಮುಂದೆಯೇ ಸಾಯಿಸಬೇಕೆಂದುಕೊಂಡಿದ್ದೇನೆ, ನಿನಗೆ ಈ ಮಗು ಮೇಲೆ ಆಸೆ ಇದ್ದರೆ ಮನೆ ಬಿಟ್ಟು ತೊಲಗು ಎಂದು ಶಕುಂತಲಾ ಹೇಳಿದ್ದು, ಭೂಮಿಕಾ ಕಣ್ಣೀರು ಹಾಕುತ್ತಾ ಮನೆಯ ಹೊಸಿಲು ದಾಟಿದ್ದಾಳೆ. ಆದರೆ, ಗೌತಮ್ ಎದುರು ಶಕುಂತಲ ಬೇರೆಯದೆ ಕಥೆ ಕಟ್ಟಿದ್ದಾಳೆ.
‘ಮತ್ತೊಂದು ಮಗುವಿನ ಬಗ್ಗೆ ನಿಜ ಹೇಳದ ಕಾರಣ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಭೂಮಿಕಾ ಹೆಸರಲ್ಲಿ ಶಕುಂತುಲಾಳೇ ಪತ್ರ ಬರೆದಿದ್ದಾಳೆ. ಈ ವಿಚಾರವನ್ನು ನಿಜವಾದ ತಾಯಿಯು ಗೌತಮ್ಗೆ ಮನವರಿಕೆ ಮಾಡಿಸಿದ್ದಾಳೆ. ಈ ವಿಚಾರ ತಿಳಿಯತ್ತಿದ್ದಂತೆ ಗೌತಮ್ ಓಡೋಡಿ ಮನೆಗೆ ಬಂದಿದ್ದಾನೆ. ಆದರೆ, ಗೌತಮ್ ಮನೆಗೆ ಬರುವ ಹೊತ್ತಿಗೆ ಅಲ್ಲಿ ಶಕುಂತಲಾ ಹಾಗೂ ಅವಳ ಮಗ ಜಯದೇವ್ ತಮ್ಮ ಪ್ಲ್ಯಾನ್ ಬಗ್ಗೆ ಮಾತನಾಡುತ್ತ ಇರುತ್ತಾರೆ. ಇದು ಗೌತಮ್ ಕಿವಿಗೂ ಬೀಳುತ್ತದೆ.
ಯಾಕಮ್ಮ ಹೀಗೆ ಮಾಡಿದ್ರೀ, ನಾನು ನಿಮಗೇನು ಅನ್ಯಾಯ ಮಾಡಿದ್ದೇ.. ಒಂದು ವೇಳೆ ನನ್ನ ಮನಸಿನಲ್ಲಿ ಹಾಗೇನಾದರೂ ಇದ್ದಿದ್ದರೆ ನನ್ನ ಅಪ್ಪ ಯಾವತ್ತು ಈ ಐವರ ಜವಾಬ್ಧಾರಿ ನಿಂದು ಎಂದು ಕೈಗೆ ಒಪ್ಪಿಸಿ ಹೋದ್ರಲ್ಲ ಅವತ್ತೇ ನಾನು ನಿಮ್ಮನ್ನು ಬೀದಿ ಪಾಲು ಮಾಡಬಹುದಿತ್ತು ಎಂದು ಹೇಳುತ್ತಾನೆ. ಮನೆಯ ಸದಸ್ಯರಾದ ಪಾರ್ಥ, ಅಪೇಕ್ಷಾ, ಸುಧಾ, ಸೃಜನ್, ಮತ್ತು ಗೆಳೆಯನ ಆನಂದನ ಮುಂದೆ ಗೌತಮ್ ಈ ಮಾತುಗಳನ್ನು ಹೇಳಿದ್ದು, ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು.. ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಮನೆಯಾಚೆ ಹೊರಡುತ್ತಾನೆ.
ಬಹುಶಃ ಇಲ್ಲಿಂದ ಐದು ವರ್ಷಗಳ ಮುಂದಿನ ಕಥೆ ತೆರೆದುಕೊಳ್ಳಲಿದೆ. ಐದು ವರ್ಷಗಳ ನಂತರದ ಕಥೆಯಲ್ಲಿ ಗೌತಮ್ ದೀವಾನ್ ಕ್ಯಾಬ್ ಡ್ರೈವರ್ ಆಗಿದ್ದಾನೆ. ಇಲ್ಲಿ ಗೌತಮ್- ಭೂಮಿಕಾ ಮತ್ತೆ ಒಂದಾಗುತ್ತರ ಎಂಬುದು ನೋಡಬೇಕಿದೆ.
Bhagya Lakshmi Serial: ಆಫೀಸ್ನಲ್ಲಿ ಭಾಗ್ಯಾಗೆ ಸನ್ಮಾನ ಮಾಡಲು ಮುಂದಾದ ಆದೀ: ತಾಂಡವ್ಗೆ ಶಾಕ್