ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಮ್ಯೂಟಂಟ್ ರಘು ಜೊತೆ ಕಿತ್ತಾಡಲು ಬಂದ ಅಶ್ವಿನಿ-ಜಾನ್ವಿ: ಮೈಚಳಿ ಬಿಡಿಸಿದ ವೈಲ್ಡ್-ಕಾರ್ಡ್ ಸ್ಪರ್ಧಿ

ಬಿಗ್ ಬಾಸ್ ಮನೆಗೆ ಬೆಳ್ಳಂಬೆಳಗ್ಗೆ ಮೈಕ್ ಹಿಡಿದುಕೊಂಡ ಬಂದ ರಘು, ವೇಕ್-ಅಪ್ ಟೈಮ್ ರೆಸಾರ್ಟ್ಗೆ ಬಂದಿಲ್ಲ ನೀವು.. ಬಿಗ್ ಬಾಸ್ ಮನೆಗೆ ಬಂದಿರೋದು ನೀವು ಎಂದು ಹೇಳಿದ್ದಾರೆ. ಬಳಿಕ ಮನೆಯಲ್ಲಿರುವ ಸ್ಪರ್ಧಿಗಳ ಕುರಿತು ನಿಮ್ಮ ಅಭಿಪ್ರಾಯ ಹೇಳಿ ಎಂದು ಬಿಗ್ ಬಾಸ್ ಒಂದು ಟಾಸ್ಕ್ ನೀಡಿರುವಂತೆ ಕಾಣುತ್ತಿದೆ.

ಮ್ಯೂಟಂಟ್ ರಘು ಜೊತೆ ಕಿತ್ತಾಡಲು ಬಂದ ಅಶ್ವಿನಿ-ಜಾನ್ವಿ

Mutent Raghu and Ashwini Gowda -

Profile Vinay Bhat Oct 20, 2025 8:32 AM

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) 2.0 ಮುಂದಿನ ವರ್ಷನ್ ಪ್ರಾರಂಭವಾಗಿದೆ. ಮೂರನೇ ವಾರದಲ್ಲಿ ನಡೆದ ಮೊದಲ ಫಿನಾಲೆ ಬಳಿಕ ಮನೆಯ ವಾತಾವರಣ ಇದೀಗ ಸಂಪೂರ್ಣ ಬದಲಾಗಿದೆ. ತಮ್ಮದೇ ರಾಜ್ಯಭಾರ ಎಂದು ಮೆರೆದಾಡುತ್ತಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ವೈಲ್ಡ್ ಕಾರ್ಡ್ ಮೂಲಕ ಮೂವರು ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪೈಕಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ತಕ್ಷಣವೇ ಮ್ಯೂಟಂಟ್ ರಘು ಆರ್ಭಟಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬೆಳ್ಳಂಬೆಳಗ್ಗೆ ಮೈಕ್ ಹಿಡಿದುಕೊಂಡ ಬಂದ ರಘು, ವೇಕ್-ಅಪ್ ಟೈಮ್ ರೆಸಾರ್ಟ್​ಗೆ ಬಂದಿಲ್ಲ ನೀವು.. ಬಿಗ್ ಬಾಸ್ ಮನೆಗೆ ಬಂದಿರೋದು ನೀವು ಎಂದು ಹೇಳಿದ್ದಾರೆ. ಬಳಿಕ ಮನೆಯಲ್ಲಿರುವ ಸ್ಪರ್ಧಿಗಳ ಕುರಿತು ನಿಮ್ಮ ಅಭಿಪ್ರಾಯ ಹೇಳಿ ಎಂದು ಬಿಗ್ ಬಾಸ್ ಒಂದು ಟಾಸ್ಕ್ ನೀಡಿರುವಂತೆ ಕಾಣುತ್ತಿದೆ. ಅದರಂತೆ ಇವರು ಇದರಲ್ಲಿ ಖುರ್ಚಿಯಲ್ಲಿ ಕೂರಿಸಿ ಧ್ರುವ್ ಹಾಗೂ ಕಾಕ್ರೋಚ್ ಸುಧಿ ಅವರು ಸಂಪೂರ್ಣ ಒದ್ದೆ ಆಗುವಂತೆ ನೀರು ಹಾಕಿದ್ದಾರೆ.

ಬಳಿಕ ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡ ರಘು, ಔಟ್ ಸೈಡ್​ನಲ್ಲಿ ಹೆಣ್ಣಿಗೆ ಫೈಟ್ ಮಾಡ್ತಾರೆ ಅದೇ ಹೆಣ್ಣಿಗೆ ಅವರ ಪೊಸಿಷನ್ ತೋರಿಸಿಕೊಡೋಕೆ ಟ್ರೈ ಮಾಡ್ತಾರೆ ಎಂದಿದ್ದಾರೆ. ರಘು ಮಾತಿನಿಂದ ರೊಚ್ಚಿಗೆದ್ದ ಅಶ್ವಿನಿ, ನೀವು ಹೇಳಿದ್ದನ್ನ ಕೇಳೋಕೆ ನಾವೇನು ಪಪ್ಪೆಟ್​ಗಳಲ್ಲ ನಾವಿಲ್ಲಿ ಎಂದಿದ್ದಾರೆ. ಇದರಿಂದ ಕೋಪಗೊಂಡ ರಘು, ಏನು ಪಪ್ಪೆಟ್ ನೀನು ಪಪ್ಪೆಟ್ ಮಾಡಿಕೊಂಡಿರುವುದು ಇಲ್ಲಿ ಎಂದು ಹೇಳಿದ್ದಾರೆ. ತನ್ನನ್ನು ‘ನೀನು’ ಎಂದು ಏಕವಚನದಲ್ಲಿ ಮಾತನಾಡಿಸಿದ್ದು ಅಶ್ವಿನಿ ಅವರಿಗೆ ಮತ್ತಷ್ಟು ಸಿಟ್ಟು ತರಿಸಿದೆ.

ಏಕವಚನದಲ್ಲಿ ಮಾತನಾಡಬೇಡಿ ಎಂದಿ ಅಶ್ವಿನಿ ಅವರು ಕೈ ತೋರಿಸಿ ರಘುಗೆ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ರಘು, ನಾನು ಮಾತಾಡ್ತೀನಿ.. ಕೈಯಲ್ಲಿ ತೋರಿಸ್ಕೋ ಬೇಡ ನನ್ನ ಹತ್ರ ಎಂದಿದ್ದಾರೆ. ಈ ಸಂದರ್ಭ ಮಧ್ಯೆ ಬಂದ ಜಾನ್ವಿ, ನಮ್ಮ ಹತ್ರ ಬಂದುಬಿಟ್ಟು ಏಕವಚನದಲ್ಲಿ ಎಲ್ಲ ಮಾತನಾಡಿದ್ರೆ ಹೋಗ್ತಾ ಇರಬಹುದು ಎಂದಿದ್ದಾರೆ. ಏಯ್.. ಏಯ್.. ಎಂದು ಅಶ್ವಿನಿ-ರಘು ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಇಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

BBK 12: ಬಿಗ್ ಬಾಸ್​ಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಮ್ಯುಟೆಂಟ್ ರಘು ಯಾರು?