ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಬಿಗ್ ಟ್ವಿಸ್ಟ್: ಒಂದು ವಾರ ಭಾಗ್ಯ ರೀತಿ ಜೀವನ ಮಾಡಲು ಹೊರಟ ಆದೀಶ್ವರ್

ಸ್ವಾಭಿಮಾನಿ ಭಾಗ್ಯಾಗೆ ಈ ಹಣ ಭಾರವಾಗಿದೆ. ಹೀಗಾಗಿ ಅದನ್ನು ಕೊಡಲು ಆದೀ ಆಫೀಸ್ಗೆ ಬಂದಿದ್ದಾಳೆ. ಇಲ್ಲಿ ಇಬ್ಬರ ಮಧ್ಯೆ ಸಣ್ಣ ಜಗಳ ನಡೆದಿದ್ದು, ಆದೀಶ್ವರ್, ನಾನು ಒಂದು ವಾರ ನಿಮ್ಮಂತೆ ಮಿಡಲ್ ಕ್ಲಾಸ್ನಲ್ಲಿ ಜೀವನ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾನೆ.

ಒಂದು ವಾರ ಭಾಗ್ಯ ರೀತಿ ಜೀವನ ಮಾಡಲು ಹೊರಟ ಆದೀಶ್ವರ್

Bhagya Lakshmi Serial

Profile Vinay Bhat Aug 16, 2025 12:29 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ನಡುವಣ ಎಪಿಸೋಡ್ ದಿನದಿಂದ ದಿನಕ್ಕೆ ರೋಷಕತೆ ಸೃಷ್ಟಿಸುತ್ತಿದೆ. ಆದೀಯ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿದ ಕಾರಣ ಆಕೆಗೆ 25 ಲಕ್ಷ ರೂ. ಗಿಫ್ಟ್ ನೀಡಲು ಆದೀ ಮುಂದಾಗಿದ್ದ. ಅದರಂತೆ ಆದೀ ಆ ಹಣವನ್ನು ಭಾಗ್ಯಾಗೆ ನೀಡಿದ್ದಾನೆ. ಆದರೆ, ಸ್ವಾಭಿಮಾನಿ ಭಾಗ್ಯಾಗೆ ಈ ಹಣ ಭಾರವಾಗಿದೆ. ಹೀಗಾಗಿ ಅದನ್ನು ಕೊಡಲು ಆದೀ ಆಫೀಸ್​ಗೆ ಬಂದಿದ್ದಾಳೆ. ಇಲ್ಲಿ ಇಬ್ಬರ ಮಧ್ಯೆ ಸಣ್ಣ ಜಗಳ ನಡೆದಿದ್ದು, ಆದೀಶ್ವರ್, ನಾನು ಒಂದು ವಾರ ನಿಮ್ಮಂತೆ ಮಿಡಲ್ ಕ್ಲಾಸ್​ನಲ್ಲಿ ಜೀವನ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾನೆ.

ಹಿಂದಿನ ಎಪಿಸೋಡ್​ನಲ್ಲಿ ಭಾಗ್ಯಾಗೆ ಆದೀಶ್ವರ್ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದ. ಆಗಲೇ ಭಾಗ್ಯ ಇದನ್ನು ತಿರಸ್ಕರಿಸಿದ್ದಳು. ನನಗೆ ಈ ದುಡ್ಡು ಬೇಡವೇ ಬೇಡ.. ನಾನು ಆ ಫೈಲ್ ಕೊಟ್ಟು ಮಾಡಿದ ಸಹಾಯಕ್ಕೆ ಒಂದು ಅರ್ಥ ಬರಬೇಕು ಅಂದರೆ ಈ ಹಣವನ್ನು ನೀವೇ ಪುನಃ ತೆಗೆದುಕೊಳ್ಳಬೇಕು.. ಇದು ನಾವು ಸಂಪಾದಿಸಿದ ಹಣವಲ್ಲ.. ಇದನ್ನು ನಾವು ಉಪಯೋಗೊಸಬಾರದು.. ಇದು ನಮಗೆ ದಕ್ಕಲ್ಲ ಎಂದು ಹೇಳಿದ್ದಾಳೆ. ಮನೆಯವರೆಲ್ಲ ಎಷ್ಟೇ ಕನ್ವೆನ್ಸ್ ಮಾಡಿದರೂ ಭಾಗ್ಯ ಆ ಹಣವನ್ನು ತೆಗೆದುಕೊಳ್ಳಲು ರೆಡಿಯಿಲ್ಲ. ಉಡುಗೊರೆ ಯಾವತ್ತು ಮನಸ್ಸಿಗೆ ಖುಷಿ ಆಗೋ ರೀತಿ ಇರಬೇಕು ಭಾರ ಆಗೋತರ ಇರಬಾರದು ಎಂದು ಹೇಳಿದ್ದಾಳೆ.

ಹೀಗಾಗಿ ಭಾಗ್ಯ ಮೊದಲಿಗೆ ಆ ಹಣವನ್ನು ತೆಗೆದುಕೊಂಡು ನೇರವಾಗಿ ಆದೀಶ್ವರ್ ಮನೆಗೆ ತೆರಳಿದ್ದಾಳೆ. ಮನೆಯ ಹೊರಗೆ ನಿಂತು ಆದೀಗೆ ಕಾಲ್ ಮಾಡಿ, ಸ್ವಲ್ಪ ಮನೆಯಿಂದ ಹೊರಗೆ ಬರುತ್ತೀರಾ, ನಾನು ಇಲ್ಲೆ ಹೊರಗೆ ನಿಮಗೋಸ್ಕರ ಕಾಯುತ್ತಾ ಇದ್ದೇನೆ ಎಂದು ಹೇಳುತ್ತಾಳೆ. ಆದೀ ಹೊರ ಬಂದೊಡನೆ, ನೀವು ನನಗೆ ವಾಪಾಸ್ ಹಣ ಕೊಡಲು ಬಂದಿದ್ದರೆ ನಾನು ನಿಮ್ಮ ಹತ್ರ ಬರೋದೆ ಇಲ್ಲ ಎಂದಿದ್ದಾನೆ. ದಯವಿಟ್ಟು ಈ ಹಣವನ್ನು ಪುನಃ ತೆಗೆದುಕೊಳ್ಳಿ.. ನೀವಿದನ್ನ ನನಗೆ ಕೊಟ್ಟಾಗಿನಿಂದ ಇದು ಉಡುಗೊರೆ ಅನಿಸುತ್ತಿಲ್ಲ.. ಹೊರೆ ಅನಿಸುತ್ತಿದೆ ಎಂದು ಭಾಗ್ಯ ಹೇಳಿದ್ದಾಳೆ.



ಸರಿ.. ನಾನು ಈ ದುಡ್ಡನ್ನ ವಾಪಾಸ್ ತೆಗೆದುಕೊಳ್ಳುತ್ತೇನೆ ಆದ್ರೆ ಒಂದು ಕಂಡೀಷನ್.. ನೀವು ನಮ್ಮ ಕಂಪನಿಯ ಬ್ಯುಸಿನೆಸ್ ಪಾರ್ಟ್ನರ್ ಆಗಬೇಕು ಎಂದು ಹೇಳಿದ್ದಾನೆ ಆದೀ. ಒಂದು ದುಡ್ಡು ಇಟ್ಟುಕೊಳ್ಳಿ ಅಥವಾ ಬ್ಯುಸಿನೆಸ್ ಪಾರ್ಟ್ನರ್ ಆಗಿ ಎರಡೇ ಆಯ್ಕೆ ಇರೋದು ಎಂದು ಹೇಳಿದ್ದಾನೆ. ಅಲ್ಲದೆ ಬ್ಯುಸಿನೆಸ್ ಪಾರ್ಟ್ನರ್ ಆದ್ರೆ ಜಾಸ್ತಿ ಹಣ ಬರಲ್ಲ ವರ್ಷಕ್ಕೆ 10 ಲಕ್ಷ ಅಥವಾ ಕೋಟಿ ಬರಬಹುದು ಎಂದಿದ್ದಾನೆ. ಇದನ್ನ ಕೇಳಿ ಭಾಗ್ಯಾಗೆ ಮತ್ತೆ ಶಾಕ್ ಆಗಿದೆ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಅಂತ ಹೇಳಿ ಎಂದು ಆದೀ ಹೊರಟು ಆಫೀಸ್​ಗೆ ಹೋಗಿದ್ದಾನೆ.



ಈಗ ಭಾಗ್ಯ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾಳೆ. ಬಳಿಕ ನೇರವಾಗಿ ಆದೀಶ್ವರ್ ಆಫೀಸ್​ಗೆ ತೆರಳಿದ ಭಾಗ್ಯ, ಈ ದುಡ್ಡು ಎಷ್ಟು ಭಾರ ಆಗ್ತಿದೆ ಗೊತ್ತ.. ನಮ್ಮಂತ ಮಿಡಲ್ ಕ್ಲಾಸ್ ವ್ಯಕ್ತಿಗಳಿಗೆ ಇಷ್ಟೊಂದು ದುಡ್ಡು ಬಂದಾಗ ಅದು ಭಾರ ಅಂತಾನೆ ಅನಿಸುತ್ತದೆ ಎಂದಿದ್ದಾಳೆ.. ಆಗ ಆದೀಶ್ವರ್, ದುಡ್ಡು ಭಾರ ಎನ್ನುತ್ತಿರುವ ಮೊದಲ ವ್ಯಕ್ತಿ ನೀವೇ ಇರಬೇಕು.. ಆಗಿದ್ದು ಆಗಲಿ ಒಂದು ವಾರ ನಾನು ನಿಮ್ಮ ಥರ ಜೀವನ ಮಾಡಿ ನೋಡುತ್ತೇನೆ ಎಂದು ಭಾಗ್ಯಾಗೆ ಚಾಲೆಂಜ್ ಹಾಕಿರುವುದು ಹೊಸ ಪ್ರೊಮೋದಲ್ಲಿ ತೋರಿಸಲಾಗಿದೆ. ಸದ್ಯ ಆದೀಶ್ವರ್ ಈ ಹಣ ತೆಗೆದುಕೊಂಡಿದ್ದಾನಾ?, ಒಂದು ವಾರ ಆದೀ ಮಿಡಲ್ ಕ್ಲಾಸ್ ಜೀವನ ಹೇಗೆ ನಡೆಸುತ್ತಾನೆ? ಎಂಬುದೆಲ್ಲ ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

BBK 12: ಲೋಗೋ ಜೊತೆಗೆ ಈ ಬಾರಿಯ ಬಿಗ್ ಬಾಸ್ ಕಾನ್ಸೆಪ್ಟ್​ನ ಹಿಂಟ್ ಕೊಟ್ಟ ಕಲರ್ಸ್?