BBK 12: ಈ ವಾರದ ಕಳಪೆ ಧ್ರುವಂತ್: ಸ್ಪರ್ಧಿಗಳು ಕೊಟ್ಟ ಕಾರಣ ಏನು ನೋಡಿ
ಧ್ರುವಂತ್ ಈ ವಾರ ಎಲ್ಲೂ ಕಾಣಿಸಿಕೊಂಡಿಲ್ಲ. ನಿಷ್ಠಾವಂತಹ ಸ್ಟೂಡೆಂಟ್ ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಅಲ್ಲದೆ ವಾರದ ಆರಂಭದಲ್ಲೇ ಬಿಗ್ ಬಾಸ್ ಕಾಲೇಜ್ನಿಂದ ಚಂದ್ರಪ್ರಭ ಜೊತೆಗೆ ಇವರೂ ಡಿಬಾರ್ ಆದರು. ಇದೀಗ ವಾರದ ಕೊನೆಯಲ್ಲಿ ಕಳಪೆ ಪಟ್ಟ ತೊಟ್ಟು ಜೈಲು ಸೇರಿಕೊಂಡಿದ್ದಾರೆ.
 
                                Dhruvanth Kalape -
 Vishwavani News
                            
                                Oct 31, 2025 4:19 PM
                                
                                Vishwavani News
                            
                                Oct 31, 2025 4:19 PM
                            ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಕಾಲೇಜ್ ಆಗಿ ಬದಲಾಗಿತ್ತು. ಇದರಲ್ಲಿ ಧ್ರುವಂತ್ ಎಲ್ಲೂ ಕಾಣಿಸಿಕೊಂಡಿಲ್ಲ. ನಿಷ್ಠಾವಂತಹ ಸ್ಟೂಡೆಂಟ್ ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಅಲ್ಲದೆ ವಾರದ ಆರಂಭದಲ್ಲೇ ಬಿಗ್ ಬಾಸ್ ಕಾಲೇಜ್ನಿಂದ ಚಂದ್ರಪ್ರಭ ಜೊತೆಗೆ ಇವರೂ ಡಿಬಾರ್ ಆದರು. ಇದೀಗ ವಾರದ ಕೊನೆಯಲ್ಲಿ ಕಳಪೆ ಪಟ್ಟ ತೊಟ್ಟು ಜೈಲು ಸೇರಿಕೊಂಡಿದ್ದಾರೆ.
ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೋಮೋ ಒಂದು ಬಿಡುಗಡೆ ಮಾಡಿದ್ದು, ಇದರಲ್ಲಿ ಮನೆಯಲ್ಲಿನ ಹೆಚ್ಚಿನ ಸ್ಪರ್ಧಿಗಳು ಕಳಪೆಗೆ ಧ್ರುವಂತ್ ಹೆಸರು ತೆಗೆದುಕೊಂಡಿದ್ದಾರೆ. ಕಳಪೆ ಧ್ರುವ್ ಎಂದು ಅನೇಕರು ಹೇಳಿದ್ದಾರೆ. ಕಾರಣ ಏನಂದ್ರೆ, ಕಳೆದ ವಾರ ಇವರಿಗೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿತ್ತು. ಆದರೆ, ಧ್ರುವ್ ಅದನ್ನು ನನಗೆ ಬೇಡ ಅಂತ ರಿಟರ್ನ್ ಮಾಡಿದ್ದರು. ಹೀಗಾಗಿ ಅವರು ನಮ್ಮ ನಿರ್ಧಾರಕ್ಕೆ ಅವರು ಬೆಲೆ ಕೊಡಲಿಲ್ಲ ಎಂದು ಕಾವ್ಯಾ ಮತ್ತು ಚಂದ್ರಪ್ರಭ ಹೇಳಿದ್ದಾರೆ.
ಮತ್ತೊಂದಡೆ ರಿಷಾ ಅವರು, ಧ್ರುವಂತ್ ತುಂಬಾ ಎಲ್ಲ ವಿಷಯಗಳಲ್ಲೂ ಮಾತಾಡ್ತಾರೆ ಮನೆ ಕೆಲಸ ಮನೆ ಕೆಲಸ ಅಂತಾರೆ ಆದ್ರೆ ಈ ವಾರದಲ್ಲಿ ಅವರು ಯಾವ ಡಿಪಾರ್ಟ್ಮೆಂಟ್ನಲ್ಲಿ ಇದ್ರು ಅಂತ ನನ್ಗೆ ಅಂತೂ ಗೊತ್ತಾಗಿಲ್ಲ ಎಂದಿದ್ದಾರೆ. ಅವರು ಡಿಬಾರ್ ಆದ ಬಳಿಕ ಡಿಫೆಂಡ್ ಮಾಡಿಲ್ಲ ಎಂದು ಸೂರಜ್ ಹೇಳಿದರೆ ಅವರು ಎಮಿಡಿಯೆಟ್ ಆಗಿ ಸೋಲು ಒಪ್ಪಿಕೊಂಡರು ಎಂದು ಕ್ಯಾಪ್ಟನ್ ರಘು ಹೇಳಿದರು. ಜೈಲಿನ ಒಳಗೆ ಹೋದ ಬಳಿಕ ಧ್ರುವಂತ್ ಅವರು, ನನಗೆ ರೀಸನ್ಸ್ ತುಂಬಾ ಇಷ್ಟ ಆಯಿತು ಎಂದು ಹೇಳಿದ್ದಾರೆ.
BBK 12: ಐ ಲವ್ ಯು: ರಾಶಿಕಾಗೆ ಕೊನೆಗೂ ಪ್ರಪೋಸ್ ಮಾಡಿದ ಸೂರಜ್: ರಿಪ್ಲೇ ಏನು ಬಂತು ಗೊತ್ತೇ?
