Kannada Serial TRP: ಒಂದೇ ವಾರದಲ್ಲಿ ಮತ್ತೆ ಮೇಲೆದ್ದ ಕರ್ಣ: ಈ ಬಾರಿ ಎಷ್ಟು TRP?
34ನೇ ವಾರದ ಟಿಆರ್‌ಪಿ ರೇಟಿಂಗ್ಸ್ನಲ್ಲಿ ಕರ್ಣ ಎರಡನೇ ಸ್ಥಾನಕ್ಕೆ ಕುಸಿದಿದ್ದ. ಆದರೀಗ 35ನೇ ವಾರದ ಟಿಆರ್ಪಿಯಲ್ಲಿ ಕರ್ಣ ಮತ್ತೆ ಬೌನ್ಸ್ ಬ್ಯಾಕ್ ಮಾಡಿದ್ದಾನೆ. ಕುಸಿದಿದ್ದ ಕರ್ಣ ಈಗ ಮತ್ತೆ ಮೇಲೆದ್ದು ನಂಬರ್ ಒನ್ ಸ್ಥಾನಕ್ಕೇರಿದ್ದಾನೆ.

Karna Serial -

ಕನ್ನಡ ಕಿರುತೆರೆಯಲ್ಲಿ ಕರ್ಣನ (Karna Kannada Serial) ಆಗಮನದ ನಂತರ ಸೀರಿಯಲ್ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದ್ದವು. ಕರ್ಣನ ಮುಂದೆ ಎಲ್ಲ ಧಾರಾವಾಹಿ ತಲೆಬಾಗುತ್ತ ಇದ್ದವು. ಕಿರುತೆರೆ ಲೋಕದಲ್ಲಿ ಸತತ ಎಂಟು ವಾರ ನಂಬರ್ ಒನ್ ಧಾರಾವಾಹಿ ಆಗಿ ಇತಿಹಾಸ ನಿರ್ಮಿಸಿದ್ದ ಕರ್ಣ. ಆದರೆ ಹಿಂದಿನ ವಾರ ಕರ್ಣನ ಅಬ್ಬರ ತಗ್ಗಿತ್ತು. 34ನೇ ವಾರದ ಟಿಆರ್‌ಪಿ ರೇಟಿಂಗ್ಸ್ನಲ್ಲಿ ಕರ್ಣ ಎರಡನೇ ಸ್ಥಾನಕ್ಕೆ ಕುಸಿದಿದ್ದ. ಆದರೀಗ 35ನೇ ವಾರದ ಟಿಆರ್ಪಿಯಲ್ಲಿ ಕರ್ಣ ಮತ್ತೆ ಬೌನ್ಸ್ ಬ್ಯಾಕ್ ಮಾಡಿದ್ದಾನೆ. ಕುಸಿದಿದ್ದ ಕರ್ಣ ಈಗ ಮತ್ತೆ ಮೇಲೆದ್ದು ನಂಬರ್ ಒನ್ ಸ್ಥಾನಕ್ಕೇರಿದ್ದಾನೆ.
ಕರ್ಣ ಧಾರಾವಾಹಿ ಶುರುವಾದಾಗಿನಿಂದ ಇದರ ಅಬ್ಬರ ಜೋರಾಗಿತ್ತು. ಮೊದಲ ವಾರ ಅರ್ಬನ್ + ರೂರಲ್‌ನಲ್ಲಿ 10.2 ಟಿವಿಆರ್, ಎರಡನೇ ವಾರ 10.4 ಟಿವಿಆರ್, ಮೂರನೇ ವಾರ 10.2 ಟಿವಿಆರ್ ಲಭಿಸಿತ್ತು. ನಾಲ್ಕನೇ ವಾರ 9.6 ಟಿವಿಆರ್ ಪಡೆದಿತ್ತು. ಐದನೇ ವಾರ ಕರ್ಣ ಸೀರಿಯಲ್‌ಗೆ 10.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್) ಲಭಿಸಿದರೆ ಆರನೇ ವಾರ 9.1 ಟಿವಿಆರ್ (ಅರ್ಬನ್ + ರೂರಲ್ ಮಾರ್ಕೆಟ್), ಏಳನೇ ವಾರ 9.2 ಟಿವಿಆರ್, ಎಂಟನೇ ವಾರ ಕೂಡ 9.1 ಟಿವಿಆರ್ ದಾಖಲಿಸಿತ್ತು. ಆದರೆ ಒಂಬತ್ತನೆ ವಾರ 8.3 ಟಿವಿಆರ್ ದಾಖಲಿಸಿ ಎರಡನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಹತ್ತನೇ ವಾರ 9.2 ಟಿವಿಆರ್ ಪಡೆದುಕೊಂಡು ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದೆ.
ಶಾಕಿಂಗ್ ಎಂದರೆ, ಹಿಂದೆಲ್ಲಾ 8+ ಅಥವಾ 9+ ಟಿವಿಆರ್ ಪಡೆದುಕೊಳ್ಳುತ್ತಿದ್ದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 35ನೇ ವಾರ ಕೇವಲ 4.0 ಟಿವಿಆರ್ ಪಡೆದುಕೊಂಡಿದೆ. ಇದಕ್ಕೆ ಕಾರಣ ಸಮಯ ಬದಲಾವಣೆ. ಹಿಂದೆ ಪ್ರೈಮ್ ಟೈಮ್‌ನಲ್ಲಿ ಈ ಸೀರಿಯಲ್ ಪ್ರಸಾರವಾಗುತ್ತಿತ್ತು. ಆದ್ರೀಗ ಟೈಮಿಂಗ್ಸ್ ಚೇಂಜ್ ಮಾಡಲಾಗಿದೆ. 6 ಗಂಟೆಯ ಸ್ಲಾಟ್‌ನಲ್ಲಿ ಟೆಲಿಕಾಸ್ಟ್ ಆಗುತ್ತಿರುವ ಕಾರಣ ಟಿಆರ್‌ಪಿ ಡೌನ್ ಆಗಿದೆ.
Amruthadhare Serial: ಅಮೃತಧಾರೆಯಲ್ಲಿ ಶುರುವಾಯಿತು 5 ವರ್ಷಗಳ ಮುಂದಿನ ಕಥೆ: ಕ್ಯಾಬ್ ಡ್ರೈವರ್ ಆದ ಗೌತಮ್
ಇನ್ನು 9.0 ಟಿವಿಆರ್ ದಾಖಲಿಸಿ ಅಣ್ಣಯ್ಯ ಎರಡನೇ ಸ್ಥಾನ ಮತ್ತು ಅಮೃತಧಾರೆ ಮೂರನೇ ಸ್ಥಾನದಲ್ಲಿದೆ. ಲಕ್ಷ್ಮೀ ನಿವಾಸ ಸೀರಿಯಲ್ 8.4 ಟಿವಿಆರ್ನೊಂದಿಗೆ ನಾಲ್ಕನೇ ಸ್ಥಾನ ಮತ್ತು ಐದನೇ ಸ್ಥಾನದಲ್ಲಿ 8.2 ಟಿವಿಆರ್ನೊಂದಿಗೆ ನಾ ನಿನ್ನ ಬಿಡಲಾರೆ ಧಾರಾವಾಹಿ ಇದೆ.
ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್ನಲ್ಲಿದೆ. ಈ ಧಾರಾವಾಹಿಗೆ 5.9 ಟಿವಿಆರ್ ಲಭಿಸಿದೆ. ಭಾಗ್ಯ ಲಕ್ಷ್ಮೀ ಧಾರಾವಾಹಿ ಅರ್ಬಲ್ + ರೂರಲ್ ಮಾರ್ಕೆಟ್‌ನಲ್ಲಿ 5.3 ಟಿವಿಆರ್ ಪಡೆದು ಕಲರ್ಸ್ನ ಎರಡನೇ ಧಾರಾವಾಹಿ ಆಗಿದೆ. ಮುದ್ದು ಸೊಸೆ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 5.1 ಟಿವಿಆರ್ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ.