Amruthadhare Serial: ಅಮೃತಧಾರೆಯಲ್ಲಿ ಶುರುವಾಯಿತು 5 ವರ್ಷಗಳ ಮುಂದಿನ ಕಥೆ: ಕ್ಯಾಬ್ ಡ್ರೈವರ್ ಆದ ಗೌತಮ್
ಗೌತಮ್ ತನ್ನೆಲ್ಲ ಆಸ್ತಿಯನ್ನು ಶಕುಂತಲಾಗೆ ಕೊಟ್ಟು ಗೌತಮ್ ಈಗ ಮನೆಬಿಟ್ಟು ಹೋಗಿದ್ದಾನೆ. ಇಲ್ಲಿಂದ ಐದು ವರ್ಷಗಳ ನಂತರದ ಹೊಸ ಕಥೆ ಶುರುವಾಗಿದೆ. ಮೊದಲ ದಿನವೇ ಗೌತಮ್ಗೆ ಕುಶಾಲ್ ನಗರಕ್ಕೆ ಹೋಗುವ ಅವಕಾಶ ಸಿಕ್ಕಿದೆ. ವಿಶೇಷ ಎಂದರೆ, ಇದೇ ಊರಿನಲ್ಲಿ ಭೂಮಿ ಕೂಡ ಇರುವ ಸಾಧ್ಯತೆ ಇದೆ.

Amruthadare Serial -

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದ ಎಪಿಸೋಡ್ ಬಂದೇ ಬಿಟ್ಟಿದೆ. ತನ್ನ ಮಲತಾಯಿ ಶಕುಂತಲ ಕೆಟ್ಟವಳು ಎಂಬುದು ಗೌತಮ್ ಗೊತ್ತಾಗಿದೆ. ಮೊದಲನೆಯದಾಗಿ ಭೂಮಿಕಾಗೆ ಈ ವಿಷಯ ಗೊತ್ತಾಯಿತು. ಬಳಿಕ ಇದು ಗೌತಮ್ಗು ತಿಳಿದು ತನ್ನೆಲ್ಲ ಆಸ್ತಿಯನ್ನು ಶಕುಂತಲಾಗೆ ಕೊಟ್ಟು ಗೌತಮ್ ಈಗ ಮನೆಬಿಟ್ಟು ಹೋಗಿದ್ದಾನೆ. ಇಲ್ಲಿಂದ ಐದು ವರ್ಷಗಳ ನಂತರದ ಹೊಸ ಕಥೆ ಶುರುವಾಗಿದೆ. ಮೊದಲ ದಿನವೇ ಗೌತಮ್ಗೆ ಕುಶಾಲ್ ನಗರಕ್ಕೆ ಹೋಗುವ ಅವಕಾಶ ಸಿಕ್ಕಿದೆ. ವಿಶೇಷ ಎಂದರೆ, ಇದೇ ಊರಿನಲ್ಲಿ ಭೂಮಿ ಕೂಡ ಇರುವ ಸಾಧ್ಯತೆ ಇದೆ.
ಹಿಂದಿನ ಎಪಿಸೋಡ್ನಲ್ಲಿ ಗೌತಮ್ ಮನೆಗೆ ಬರುವ ಹೊತ್ತಿಗೆ ಅಲ್ಲಿ ಶಕುಂತಲಾ ಹಾಗೂ ಅವಳ ಮಗ ಜಯದೇವ್ ತಮ್ಮ ಪ್ಲ್ಯಾನ್ ಬಗ್ಗೆ ಮಾತನಾಡುತ್ತ ಇರುತ್ತಾರೆ. ಇದು ಗೌತಮ್ ಕಿವಿಗೂ ಬೀಳುತ್ತದೆ. ಯಾಕಮ್ಮ ಹೀಗೆ ಮಾಡಿದ್ರೀ, ನಾನು ನಿಮಗೇನು ಅನ್ಯಾಯ ಮಾಡಿದ್ದೇ.. ಒಂದು ವೇಳೆ ನನ್ನ ಮನಸಿನಲ್ಲಿ ಹಾಗೇನಾದರೂ ಇದ್ದಿದ್ದರೆ ನನ್ನ ಅಪ್ಪ ಯಾವತ್ತು ಈ ಐವರ ಜವಾಬ್ಧಾರಿ ನಿಂದು ಎಂದು ಕೈಗೆ ಒಪ್ಪಿಸಿ ಹೋದ್ರಲ್ಲ ಅವತ್ತೇ ನಾನು ನಿಮ್ಮನ್ನು ಬೀದಿ ಪಾಲು ಮಾಡಬಹುದಿತ್ತು ಎಂದು ಹೇಳುತ್ತಾನೆ. ಮನೆಯ ಸದಸ್ಯರಾದ ಪಾರ್ಥ, ಅಪೇಕ್ಷಾ, ಸುಧಾ, ಸೃಜನ್, ಮತ್ತು ಗೆಳೆಯನ ಆನಂದನ ಮುಂದೆ ಗೌತಮ್ ಈ ಮಾತುಗಳನ್ನು ಹೇಳಿದ್ದು, ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು.. ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಮನೆಯಾಚೆ ಹೊರಡುತ್ತಾನೆ.
ಐದು ವರ್ಷಗಳಿಂದ ಅಲೆದೂ ಅಲೆದೂ ಸುಸ್ತಾಗಿದ್ದಾನೆ ಗೌತಮ. ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿಲ್ಲ. ಅದರ ನಡುವೆಯೇ ಡ್ರೈವರ್ ಕೆಲಸದ ನಿಮಿತ್ತ ಗೌತಮ್ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಿದ್ದಾನೆ. ಕುಶಾಲನಗರದಲ್ಲಿಯೇ ಭೂಮಿಕಾ ಮಗನ ಜೊತೆ ಇರುವಂತೆ ತೋರಿಸಲಾಗಿದೆ ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಹಿಂದೆ ವಾಹಿನಿ ಬಿಡುಗಡೆ ಮಾಡಿದ್ದ ಪ್ರೊಮೋದಲ್ಲಿ ಗೌತಮ್ಗೆ ಭೂಮಿಕಾ ಮತ್ತು ಮಗ ಸಿಕ್ಕಿರುವಂತೆ ತೋರಿಸಲಾಗಿತ್ತು. ಆದರೆ ಗಂಡನನ್ನು ನೋಡಿದ್ದ ಭೂಮಿಕಾ ಕೋಪ ಮಾಡಿಕೊಂಡಿದ್ದಳು. ಸದ್ಯ ಈ ಘಟನೆ ಕುಶಾಲನಗರದಲ್ಲಿಯೇ ನಡೆಯುತ್ತ ಎಂಬುದು ನೋಡಬೇಕಿದೆ.