BBK 12: ಬಿಗ್ ಬಾಸ್ನಲ್ಲಿ ಶಾಕಿಂಗ್ ಎಲಿಮಿನೇಷನ್: ಮಂಜು ಭಾಷಿಣಿ-ಅಶ್ವಿನಿ ಔಟ್
ಮಾಸ್ ಎಲಿಮಿನೇಷನ್ನ ಭಾಗವಾಗಿ ಮೊದಲ ಸ್ಪರ್ಧಿ ಮನೆಯಿಂದ ಔಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚೇನು ಸದ್ದು ಮಾಡದ ಮಂಜು ಭಾಷಿಣಿ ಮೂರನೇ ವಾರಕ್ಕೆ ತಮ್ಮ ಬಿಗ್ ಬಾಸ್ ಪ್ರಯಾಂಣವನ್ನು ಕೊನೆಗೊಳಿಸಿದ್ದಾರೆ. ಮಂಜು ಭಾಷಿಣಿ ಅವರು ಮೊದಲೆರಡು ವಾರ ಅಡುಗೆ ಮನೆಯಲ್ಲೇ ಫಿಕ್ಸ್ ಆಗಿದ್ದರು.

Manju Bhashini Eliminated -

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಮೊದಲ ಫಿನಾಲೆ ನಡೆಯುತ್ತಿದೆ. ಶೋ ಆರಂಭವಾದ ಮೊದಲ ದಿನವೇ ಬಿಗ್ ಬಾಸ್ ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ ಎಂದು ಹೇಳಿದ್ದರು. ಅಲ್ಲದೆ ಇದರಲ್ಲಿ ಕೆಲ ಅಚ್ಚರಿಯ ಸಂಗತಿ ನಡೆಯಲಿದ್ದು ಎಂದು ಹಿಂಟ್ ಕೊಟ್ಟಿದ್ದರು. ಬಳಿಕ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅವರು, ಮೂರನೇ ವಾರದಲ್ಲಿ ಈ ಮನೆ ಅರ್ಧಕರ್ಧ ಖಾಲಿ ಆಗಲಿದೆ ಎಂದು ಹೇಳಿ ಶಾಕ್ ಕೊಟ್ಟಿದ್ದರು. ಅಂದರೆ ಮಾಸ್ ಎಲಿಮಿನೇಷನ್.
ಇದರ ಈ ಮಾಸ್ ಎಲಿಮಿನೇಷನ್ನ ಭಾಗವಾಗಿ ಮೊದಲ ಸ್ಪರ್ಧಿ ಮನೆಯಿಂದ ಔಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚೇನು ಸದ್ದು ಮಾಡದ ಮಂಜು ಭಾಷಿಣಿ ಮೂರನೇ ವಾರಕ್ಕೆ ತಮ್ಮ ಬಿಗ್ ಬಾಸ್ ಪ್ರಯಾಂಣವನ್ನು ಕೊನೆಗೊಳಿಸಿದ್ದಾರೆ. ಇವರ ಜೊತೆಗೆ ಅಶ್ವಿನಿ ಎಸ್ಎನ್ ಕೂಡ ಮನೆಯಿಂದ ಹೊರಬಿದ್ದಿದ್ದಾರೆ. ಮಂಜು ಭಾಷಿಣಿ ಅವರು ಮೊದಲೆರಡು ವಾರ ಅಡುಗೆ ಮನೆಯಲ್ಲೇ ಫಿಕ್ಸ್ ಆಗಿದ್ದರು. ಕಿಚ್ಚ ಸುದೀಪ್ ಈ ಕುರಿತು ಪರೋಕ್ಷವಾಗಿ ಹೇಳಿದರೂ ಅದನ್ನು ಇವರು ಸೀರಿಯೆಸ್ ಆಗಿ ತೆಗೆದುಕೊಂಡಿಲ್ಲ.
ಅಲ್ಲದೆ ಮಂಜು ಅವರು ಫಿಸಿಕಲ್ ಟಾಸ್ಕ್‌ಗಳಲ್ಲಿ ಹೆಚ್ಚೇನು ಮೋಡಿ ಮಾಡಿಲ್ಲ. ಸ್ಟ್ರಾಟೆಜಿ ಮಾಡೋದ್ರಲ್ಲಿ ಮತ್ತು ಮಾತಲ್ಲೇ ಟಕ್ಕರ್ ಕೊಡೋದ್ರಲ್ಲಿ ಮಂಜುಭಾಷಿಣಿ ಮುಂದಿದ್ದರು. ಆದರೆ, ಬಿಗ್ ಬಾಸ್ನಲ್ಲಿ ಉಳಿಯಲು ಇದಿಷ್ಟೆ ಇದ್ದರೆ ಸಾಲದು. ಹೀಗಾಗಿ ಇವರಿಗೆ ಕಡಿಮೆ ವೋಟ್ ಬಂದು ಮೂರನೇ ವಾರಕ್ಕೆ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಂದು ಹಾಗೂ ನಾಳೆ ದೊಡ್ಮನೆಯಲ್ಲಿ ಇನ್ನಷ್ಟು ಎಲಿಮಿನೇಷನ್ ನಡೆಯಲಿದ್ದು ಯಾರೆಲ್ಲ ಹೋಗುತ್ತಾರೆ ಎಂಬುದು ನೋಡಬೇಕಿದೆ.
BBK 12: ಕೆರಳಿ ಕೆಂಡವಾದ ಕಿಚ್ಚ: ಅಶ್ವಿನಿ-ಜಾನ್ವಿಯ ಮೈಚಳಿ ಬಿಡಿಸಿದ ಸುದೀಪ್