Vaishnavi Gowda: ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ಅದ್ಧೂರಿಯಾಗಿ ನಡೆಯಿತು ರಿಸೆಪ್ಷನ್
ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನೆರವೇರಿದೆ. ಇದೀಗ, ನವದಂಪತಿಗಳ ರಿಸೆಪ್ಷನ್ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಜರುಗಿದ್ದು, ಕನ್ನಡ ಕಿರುತೆರೆಯ ಹಲವು ತಾರೆಯರು ಆಗಮಿಸಿ ಶುಭಾಶಯ ಕೋರಿದ್ದಾರೆ.

Vaishnavi Gowda marriage reception -

ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda) ಇದೀಗ ಹಸೆಮಣೆ ಏರಿದ್ದಾರೆ. ಕಳೆದ ತಿಂಗಳು ಏಪ್ರಿಲ್ 14ರಂದು ವೈಷ್ಣವಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅನುಕೂಲ್ ಮಿಶ್ರಾ ಜೊತೆಗೆ ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು. ಇದೀಗ ಸದ್ದಿಲ್ಲದೆ ಅದ್ಧೂರಿಯಾಗಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊನ್ನೆಯಷ್ಟೇ ಇವರ ಅರಿಶಿನ ಶಾಸ್ತ್ರ ಕೂಡ ನಡೆದಿತ್ತು. ಇದರ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.
ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನೆರವೇರಿದೆ. ಇದೀಗ, ನವದಂಪತಿಗಳ ರಿಸೆಪ್ಷನ್ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಜರುಗಿದ್ದು, ಕನ್ನಡ ಕಿರುತೆರೆಯ ಹಲವು ತಾರೆಯರು ಆಗಮಿಸಿ ಶುಭಾಶಯ ಕೋರಿದ್ದಾರೆ.
ಹೌದು, ಮದುವೆಯ ನಂತರ ನಡೆದ ರಿಸೆಪ್ಷನ್ ಕಾರ್ಯಕ್ರಮವು ಕನ್ನಡ ಕಿರುತೆರೆಯ ತಾರೆಯರ ಸಂಗಮವಾಗಿತ್ತು. ಕಾರ್ಯಕ್ರಮದಲ್ಲಿ ಸೀತಾರಾಮ ಧಾರಾವಾಹಿಯ ಇಡೀ ತಂಡವೂ ಭಾಗವಹಿಸಿತು, ಜೊತೆಗೆ ಕನ್ನಡ ಚಿತ್ರರಂಗದ ಹಲವು ಪ್ರಮುಖರು ನವಜೋಡಿಗೆ ಶುಭ ಕೋರಿದರು. ರಿಸೆಪ್ಷನ್ನಲ್ಲಿ ವೈಷ್ಣವಿ ಗೌಡ ಅವರು ಕೆಂಪು ಬಣ್ಣದ ಡ್ರೆಸ್ನಲ್ಲಿ ಮಿಂಚಿದರು.
ಅನುಪಮಾ ಗೌಡ, ನಿವೇದಿತಾ ಗೌಡ, ನಟಿ ಇಶಿತಾ, ನೇಹಾ ಗೌಡ, ನಿರಂಜನ್ ದೇಶಪಾಂಡೆ ಹಾಗೂ ಪತ್ನಿ ಯಶಸ್ವಿನಿ, ನಟ ವಿಜಯ್ ಸೂರ್ಯ ದಂಪತಿ, ನಟಿ ಅಮೂಲ್ಯ, ಸೀತಾರಾಮ ಧಾರಾವಾಹಿಯ ಇಡೀ ತಂಡ ಈ ಗಣ್ಯರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದಿತು. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಿಸೆಪ್ಷನ್‌ನ ವಿಡಿಯೋಗಳು-ಫೋಟೋಗಳು ವೈರಲ್ ಆಗಿವೆ.
ಭಾರತೀಯ ವಾಯುಸೇನೆಯಲ್ಲಿ ಇರುವ ಅನುಕೂಲ್ ಮಿಶ್ರಾ ಹಾಗೂ ವೈಷ್ಣವಿದು ಲವ್ ಕಮ್ ಎರೇಂಜ್ ಮ್ಯಾರೇಜ್. ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರಂತೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು ಎಂದು ಮೊನ್ನೆಯಷ್ಟೆ ವೈಷ್ಣವಿ ಹೇಳಿದ್ದರು.
Bhagya Lakshmi Serial: ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡಲು ಹೊರಟ ಆದೀಶ್ವರ್: ಕುತೂಹಲ ಕೆರಳಿಸಿದ ಧಾರಾವಾಹಿ