Vaishnavi Gowda: ಈ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ? ಯಾವ ವಾಹಿನಿ?
Vaishnavi Gowda: ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಜನರ ಮೆಚ್ಚುಗೆ ಪಡೆದು ಕಿರುತೆರೆಯ ನಟಿ ವೈಷ್ಣವಿ ಗೌಡ. ಮದುವೆ ಬಳಿಕ ಕಿರುತೆರೆಗೆ ಮತ್ತೆ ಕಮ್ ಬ್ಯಾಕ್ ಆಗಲಿದ್ದಾರೆ ಎಂದು ವರದಿಯಾಗಿದೆ. ಮದುವೆಗೂ ಮುನ್ನ ಸೀತಾ ರಾಮ ಟೀಮ್ ಜೊತೆ ಸತತವಾಗಿ ವೈಶು ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಆದರೆ, ಮದುವೆಯ ಬಳಿಕ ಇದು ಕಮ್ಮಿ ಆಗಿತ್ತು. ಆದರೆ ಇದೀಗ ಮತ್ತೆ ಧಾರಾವಾಹಿಗೆ ಮರಳುತ್ತಿದ್ದಾರೆ ಎಂದು ವರದಿಯಾಗಿದೆ.
ನಟಿ ವೈಷ್ಣವಿ ಗೌಡ -
ಅಗ್ನಿಸಾಕ್ಷಿ (Agnisakshi Serial Kannada) ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಜನರ ಮೆಚ್ಚುಗೆ ಪಡೆದು ಕಿರುತೆರೆಯ ನಟಿ ವೈಷ್ಣವಿ ಗೌಡ. ಮದುವೆ ಬಳಿಕ ಕಿರುತೆರೆಗೆ ಮತ್ತೆ ಕಮ್ ಬ್ಯಾಕ್ ಆಗಲಿದ್ದಾರೆ ಎಂದು ವರದಿಯಾಗಿದೆ. ಮದುವೆಗೂ ಮುನ್ನ ಸೀತಾ ರಾಮ ಟೀಮ್ ಜೊತೆ ಸತತವಾಗಿ ವೈಶು ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಆದರೆ, ಮದುವೆಯ ಬಳಿಕ ಇದು ಕಮ್ಮಿ ಆಗಿತ್ತು. ಆದರೆ ಇದೀಗ ಮತ್ತೆ ಧಾರಾವಾಹಿಗೆ (Serial) ಮರಳುತ್ತಿದ್ದಾರೆ ಎಂದು ವರದಿಯಾಗಿದೆ.
ಉದಯ ವಾಹಿನಿಗೆ?
ಮೂಲಗಳ ಪ್ರಕಾರ ಒಂದು ದಶಕದ ನಂತರ ಮತ್ತೆ ಉದಯ ವಾಹಿನಿಗೆ ಮರಳುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದೇ ವಾಹಿನಿಯ 'ಮನೆದೇವ್ರು' ಸೀರಿಯಲ್‌ನಲ್ಲಿ ಅವರು ಮಿಂಚಿದ್ದರು. ಅಲ್ಲಿಂದ 'ಅಗ್ನಿಸಾಕ್ಷಿ', 'ಸೀತಾರಾಮ' ಹಾಗೂ 'ಬಿಗ್‌ಬಾಸ್' ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು ವೈಷ್ಣವಿ .
ಇದನ್ನೂ ಓದಿ: Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!
ವೈಷ್ಣವಿ ಗೌಡ ಅವರಿಗೆ ಸಾಥ್ ನೀಡಲು ಕೃತಿಕಾ ರವೀಂದ್ರ ಸಜ್ಜಾಗಿದ್ದಾರೆ. 'ರಾಧಾ ಕಲ್ಯಾಣ' ಮತ್ತು 'ಭೂಮಿಗೆ ಬಂದ ಭಗವಂತ' ಖ್ಯಾತಿಯ ಕೃತಿಕಾ ಹಾಗೂ ವೈಷ್ಣವಿ ಜೋಡಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಅದ್ಧೂರಿಯಾಗಿ ನಿಶ್ಚಿತಾರ್ಥ
ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ, ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಈ ಜೋಡಿ ಉತ್ತರಾಖಂಡ ಋಷಿಕೇಶ್, ಮನಾಲಿಗೆ ಹನಿಮೂನ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು.
ವೈಷ್ಣವಿ ಅವರ ಪತಿ ಅನುಕೂಲ್ ಮಿಶ್ರಾ ಅವರು ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಕೂಡ ಇಲ್ಲಿಯೇ ಇದ್ದಾರೆ. ಮದುವೆ ಬಳಿಕ ವೈಷ್ಣವಿ ಅವರು ಇನ್ಸ್ಟಾದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು.
ಇದನ್ನೂ ಓದಿ: Krishna Rukku Serial: 19 ವರ್ಷಗಳ ಬಳಿಕ ಕಿರುತೆರೆ ಲೋಕಕ್ಕೆ ಕಮ್‌ಬ್ಯಾಕ್ ಆದ್ರು ನಟಿ ಸುಚಿತ್ರಾ !
ಯಾವುದಾದರು ಹಬ್ಬ ಅಥವಾ ಏನಾದರು ಪ್ರಮೋಷನಲ್ ವಿಡಿಯೋ ಇದ್ದರೆ ಮಾತ್ರ ಸಾಮಾಜಿಕ ತಾಣಗಳಲ್ಲಿ ಪ್ರತ್ಯಕ್ಷರಾಗುತ್ತಿದ್ದರು. ಮದುವೆಗೂ ಮುನ್ನ ಸೀತಾ ರಾಮ ಟೀಮ್ ಜೊತೆ ಸತತವಾಗಿ ವೈಶು ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಆದರೆ, ಮದುವೆಯ ಬಳಿಕ ಇದು ಕಮ್ಮಿ ಆಗಿತ್ತು.