Annayya Serial: ಜಿಮ್ ಸೀನಾ ಪಾತ್ರ ಬದಲು! ‘ಅಣ್ಣಯ್ಯ’ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಈ ನಟ ಯಾರು?
Annayya Serial: ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಜಿಮ್ ಸೀನ ಎಂಬ ಪಾತ್ರ ಅನೆಕ ವೀಕ್ಷಕರ ಮೆಚ್ಚುಗೆ ಅಗಿತ್ತು. ಕಾಮಿಡಿ, ಪ್ರೀತಿ, ಫ್ಲರ್ಟ್ ಎಲ್ಲಾ ರೀತಿಯ ಭಾವನೆ ಇದರಲ್ಲಿ ಇತ್ತು. 'ಅಣ್ಣಯ್ಯ' ಧಾರಾವಾಹಿಯ 'ಜಿಮ್ ಸೀನಾ' ಪಾತ್ರಧಾರೀ ಸುಷ್ಮಿತ್ ಜೈನ್ ದಿಢೀರನೆ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಶೀಘ್ರದಲ್ಲೇ ಆರಂಭವಾಗಲಿರುವ 'ಬಿಗ್ ಬಾಸ್ ಕನ್ನಡ 13' ರಿಯಾಲಿಟಿ ಶೋಗೆ ಇವರು ಕಾಲಿಡಲಿದ್ದಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಅಣ್ಣಯ್ಯ ಧಾರಾವಾಹಿ -
‘ಅಣ್ಣಯ್ಯ’ (Annayya Serial) ಧಾರಾವಾಹಿಯಲ್ಲಿ ಜಿಮ್ ಸೀನ (Jim Seena) ಎಂಬ ಪಾತ್ರ ಅನೆಕ ವೀಕ್ಷಕರ ಮೆಚ್ಚುಗೆ ಅಗಿತ್ತು. ಕಾಮಿಡಿ, ಪ್ರೀತಿ, ಫ್ಲರ್ಟ್ ಎಲ್ಲಾ ರೀತಿಯ ಭಾವನೆ ಇದರಲ್ಲಿ ಇತ್ತು. 'ಅಣ್ಣಯ್ಯ' ಧಾರಾವಾಹಿಯ 'ಜಿಮ್ ಸೀನಾ' ಪಾತ್ರಧಾರೀ ಸುಷ್ಮಿತ್ ಜೈನ್ ದಿಢೀರನೆ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಶೀಘ್ರದಲ್ಲೇ ಆರಂಭವಾಗಲಿರುವ 'ಬಿಗ್ ಬಾಸ್ ಕನ್ನಡ 13' (Big Boss Kannada 13) ರಿಯಾಲಿಟಿ ಶೋಗೆ ಇವರು ಕಾಲಿಡಲಿದ್ದಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣಯ್ಯ' ಧಾರಾವಾಹಿ ಪ್ರೇಕ್ಷಕರಿಂದ ಮೆಚ್ಚಗೆ ಪಡೆದುಕೊಂಡಿದೆ. ವಿಕಾಸ್ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣನ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಈ ಸೀರಿಯಲ್‌ನ ಪ್ರತಿಯೊಂದು ಪಾತ್ರಗಳು ಜನರಿಗೆ ಇಷ್ಟವಾಗಿವೆ. ಅದರಲ್ಲಿ ಜಿಮ್ ಸೀನಾ ಪಾತ್ರ ಕೂಡ ಒಂದು. ಆರಂಭದಿಂದಲೂ ಗುಂಡಮ್ಮ ಅಲಿಯಾಸ್ ರಶ್ಮಿ ಜೊತೆ ಕಿತ್ತಾಡುತ್ತಿದ್ದ ಜಿಮ್ ಸೀನಾ, ಈಗ ಆಕೆಯನ್ನೇ ಮದುವೆಯಾಗಿದ್ದಾನೆ.
ಮದುವೆಯಾದ ಮೇಲೂ ಇವರಿಬ್ಬರ ಕಿತ್ತಾಟ ಮುಂದುವರೆದಿದೆ. ಸುಷ್ಮಿತ್ ಜೈನ್ ಅವರು 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸ್ಯಾಂಡಿ ಅಲಿಯಾಸ್ ಸುಂದರನಾಗಿ ನಟಿಸುವ ಮೂಲಕ ಕಿರುತೆರೆ ಕಾಲಿಟ್ಟರು. ನಂತರ ಹಲವು ಧಾರಾವಾಹಿಗಳಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದ ಸುಷ್ಮಿತ್, ಭೂಮಿ ತಾಯಾಣೆ ಧಾರಾವಾಹಿ ಮೂಲಕ ನಾಯಕನಾಗಿ ಭಡ್ತಿ ಪಡೆದರು. ದೊರೆಸಾನಿ ಸೀರಿಯಲ್‌ನಲ್ಲಿ ಚಿನ್ಮಯ್ ಪಾತ್ರ ಮಾಡಿದ್ದ ಸುಷ್ಮಿತ್, ಕನ್ಯದಾನ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಮನಸೆಲ್ಲಾ ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದರು.
ಈ ಧಾರಾವಾಹಿಯಲ್ಲಿ ‘ಜಿಮ್ ಸೀನಾ’ ಎಂಬ ಜನಪ್ರಿಯ ಪಾತ್ರದಲ್ಲಿ ನಟಿಸುತ್ತಿದ್ದ ಸುಷ್ಮಿತ್ ಜೈನ್ ಅವರು ಈ ಧಾರಾವಾಹಿಯಿಂದ ಹೊರಬಂದಿದ್ದಾರೆ.
ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಜಿಮ್ ಸೀನಾ ಮಾತಾಡ್ತಾ ಇದ್ದೀನಿ. ಇನ್ನು ಮುಂದೆ ಈ ಜಿಮ್ ಸೀನಾ ಅನ್ನೋ ಪಾತ್ರವನ್ನು ನಾನು ಮುಂದುವರಿಸುವುದಕ್ಕೆ ಆಗುತ್ತಿಲ್ಲ. ಕೆಲವು ಕಾರಣಾಂತರಗಳಿಂದ ಈ ನಿರ್ಧಾರ ತಗೆದುಕೊಳ್ಳಬೇಕಾಯಿತು. ನನ್ನ ಮನವಿ ಏನೆಂದರೆ, ಇಷ್ಟು ದಿನ ನನಗೆ ಹೇಗೆ ಬೆಂಬಲ ಹಾಗೂ ಪ್ರೀತಿ ಕೊಟ್ಟಿರೋ, ಹಾಗೆಯೇ ಇನ್ನು ಮುಂದೆ ಈ ಪಾತ್ರವನ್ನು ಅಭಿನಯಿಸಲು ಬರುವ ಹೊಸ ಕಲಾವಿದರಿಗೂ ಅದೇ ಪ್ರೀತಿ ಮತ್ತು ಸಪೋರ್ಟ್ ನೀಡಿ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
‘ಜಿಮ್ ಸೀನಾ’ ಪಾತ್ರಕ್ಕೆ ಹೊಸ ನಟರೊಬ್ಬರು ಸೇರ್ಪಡೆಯಾಗಿದ್ದಾರೆ. ಇನ್ಮುಂದೆ ಈ ಪಾತ್ರದಲ್ಲಿ ನೂತನ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಇತ್ತೀಚೆಗಷ್ಟೇ ಸೀನ, ತನ್ನ ತಪ್ಪುಗಳನ್ನ ತಿದ್ದಿಕೊಳ್ಳುವ ದೃಶ್ಯಗಳನ್ನ ತೋರಿಸಲಾಗಿತ್ತು.
ಇದನ್ನೂ ಓದಿ: Prakash Raj: ಬೆಂಗಳೂರು ಮತದಾರರ ಪಟ್ಟಿಯಲ್ಲಿ ಪ್ರಕಾಶ್ ರಾಜ್ ಹೆಸರೇ ಇಲ್ಲ! ವಿಡಿಯೋ ಮೂಲಕ ಹೇಳಿದ್ದೇನು?
ಮತ್ತೊಂದೆಡೆ, ‘ಕನ್ನಡ ಬಿಗ್ ಬಾಸ್ ಸೀಸನ್ 13’ ಶೀಘ್ರವೇ ಆರಂಭವಾಗಲಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಪರ್ಧಿಗಳ ಕುರಿತು ಕುತೂಹಲ ಹೆಚ್ಚಾಗಿದೆ.