ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಶಿವಣ್ಣ- ಉಪೇಂದ್ರ ಜೋಡಿಯ '45' ಮೂವಿ; ಟ್ರೈಲರ್‌ ನೋಡಿ ರಿಷಬ್‌ ಶೆಟ್ಟಿ ಏನಂದ್ರು?

45 Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ.

'45' ಮೂವಿ  ಟ್ರೈಲರ್‌ ನೋಡಿ ರಿಷಬ್‌ ಶೆಟ್ಟಿ ಏನಂದ್ರು?

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Dec 14, 2025 6:28 PM

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼ45ʼ (45 Movie). ನಾಳೆ, 15 ಡಿಸೆಂಬರ್ 2025ರಂದು ಬೆಂಗಳೂರಿನ ಶಂಕರ್‌ ನಾಗ್ ಸರ್ಕಲ್ ಬಳಿಯ ಸ್ಟೇಡಿಯಂನಲ್ಲಿ ಅರ್ಜುನ್ ಜನ್ಯಾ (Arjuna Janya) ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದ ಟ್ರೈಲರ್ ಲಾಂಚ್ ಈವೆಂಟ್ ಇದೆ. 'ಕಾಂತಾರ' ನಿರ್ದೇಶಕರು ರಿಷಬ್‌ ಶೆಟ್ಟಿ 45 ಸಿನಿಮಾದ ಟ್ರೈಲರ್ ನೋಡಿ ಹೊಗಳಿದ್ದಾರೆ.

ಕೆನಡಾದ ಪ್ರತಿಷ್ಠಿತ ʼMARZʼ ಸಂಸ್ಥೆ ಈ ಚಿತ್ರಕ್ಕೆ ವಿ.ಎಫ್.ಎಕ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆ ವಿ.ಎಫ್.ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಚಿತ್ರವಿದು. ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ತಂತ್ರಜ್ಞರಿಂದ ಸಿಜಿ ವರ್ಕ್ ನಡೆಯುತ್ತಿದ್ದು, ಇಂಡಿಯಾದಲ್ಲೇ ಅತೀ ಹೆಚ್ಚು ಸಿಜಿ (ವಿ.ಎಫ್.ಎಕ್ಸ್) ಅಳವಡಿಸಲಾಗುತ್ತಿರುವ ಮೊದಲ ಚಿತ್ರ ಕೂಡ ಇದು.

ಇದನ್ನೂ ಓದಿ: Kantara: Chapter -1: ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವಾ? ರಿಷಬ್‌ ಪತ್ನಿ ಪ್ರಗತಿ ಹೇಳಿದ್ದೇನು?

ಅದ್ಭುತ ಪ್ಲ್ಯಾನಿಂಗ್‌

ರಿಷಬ್‌ ಮಾತನಾಡಿ, ನನ್ನ ಮೊದಲ ನಿರ್ದೇಶನದ, ಮೊದಲ ಸಂಗೀತ ನಿರ್ದೇಶಕರು ಅರ್ಜುನ್‌ ಜನ್ಯಾ ಮಾಡಿರುವಂತ ಸಿನಿಮಾ. ಇದು ಅವರು ನಿರ್ದೇಶಕರಾಗಿ ಮಾಡಿರುವ ಮೊದಲ ಸಿನಿಮಾ. ಪ್ರತಿಯೊಬ್ಬ ನಿರ್ದೇಶಕನಿಕೆ ಒಂದು ಸಿನಿಮಾ ಮಾಡಬೇಕಾದರೆ, ಹಲವಾರ ಕನ್ಸರ್ನ್‌ ಇರತ್ತೆ. ಯಾವ ತರಹದ ಕಥೆಯನ್ನ ಹೇಳಬೇಕು. ಯಾವ ಜಾನರ್‌ನಲ್ಲಿ ಹೇಳಬೇಕು. ಎಷ್ಟು ದೊಡ್ಡ ಸ್ಕೇಲ್‌ನಲ್ಲಿ ಇರತ್ತೆ? ಎಲ್ಲ ವಿಷಯಗಳ ಬಗ್ಗೆ ಕನ್ಸರ್ನ್‌ ಇರತ್ತೆ. ಆದರೆ ಫಸ್ಟ್‌ ಟೈಲ್‌ ನಿರ್ದೇಶಕರು ಅದ್ಭುತ ಪ್ಲ್ಯಾನಿಂಗ್‌ ಜೊತೆಗೆ ಇಷ್ಟು ದೊಡ್ಡ ಸ್ಕೇಲ್‌ನ್ನ ಸಾಧನೆ ಮಾಡಲು ಹೊರಟಿರೋದು ದೊಡ್ಡ ವಿಚಾರ.

ಈಗ ಸಿನಿಮಾ ಮುಗಿದಿದೆ, ಟ್ರೈಲರ್‌ ನೋಡಿದೆ. ಟ್ರೈಲರ್‌ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ನನ್ನ ಮೆಚ್ಚಿನ ಶಿವಣ್ಣ ಅವರು , ಉಪ್ಪಿ ಸರ್‌ ಅಭಿಯನಯದಲ್ಲಿ ಬರ್ತಿರೋ ಸಿನಿಮಾ. ಅವರಿಬ್ಬರನ್ನ ಸ್ಕ್ರೀನ್‌ನಲ್ಲಿ ನೋಡೋದೆ ಒಂದು ಮಜಾ. ಡಿಸೆಂಬರ್‌ 25 ಕ್ಕೆ ದೇಶಾದ್ಯಂತ, ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಎಂದಿದ್ದಾರೆ.

ಪ್ರಮೋಷನಲ್ ಸಾಂಗ್ ಹಿಟ್

13 ದಿನ ಮುನ್ನ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಜೊತೆಗೆ ಚಿತ್ರದ ಕಾಲಾವಧಿ ಎಷ್ಟು ಎನ್ನುವುದು ರಿವೀಲ್ ಆಗಿದೆ.ಲೇ '45' ಚಿತ್ರದ ಟೀಸರ್ ಹಾಗೂ ಪ್ರಮೋಷನಲ್ ಸಾಂಗ್ ಈಗಾಗಲೇ ಹಿಟ್ ಆಗಿದೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಎದುರು ಈ ಮಲ್ಟಿಸ್ಟಾರರ್ ಸಿನಿಮಾ ಕೂಡ ಬರ್ತಿದೆ. ಬಹಳ ವರ್ಷಗಳ ಬಳಿಕ ಮತ್ತೆ ಶಿವಣ್ಣ, ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ.

ಇದನ್ನೂ ಓದಿ: Drowned: ಕಾಂತಾರ ಸಿನಿಮಾ ಟಿಕೆಟ್‌ ಸಿಗದೆ ಈಜಲು ಹೋದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ ಸಾವು

ಸೆನ್ಸಾರ್ ವಿಚಾರಕ್ಕೆ ಬಂದರೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. '45' ಚಿತ್ರದ ಕಾಲಾವಧಿ 2 ಗಂಟೆ 30 ನಿಮಿಷ ಎನ್ನುವುದು ಬಯಲಾಗಿದೆ.ಕೌಸ್ತುಭ ಮಣಿ ಹಾಗೂ ಜಿಶು ಸೆಂಗುಪ್ತ ಚಿತ್ರದ ತಾರಾಗಣದಲ್ಲಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಕೆ. ಪ್ರಕಾಶ್ ಸಂಕಲನ '45' ಚಿತ್ರಕ್ಕಿದೆ. ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಅನಿಲ್‌ ಕುಮಾರ್ ಸಂಭಾಷಣೆ ಬರೆದಿದ್ದಾರೆ.5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಆಗಲಿದೆ.