ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shree Gandhada Gudi Serial: ಮುತ್ತು ಬಾಳಲ್ಲಿ ಹೊಸ ಬೆಳಕಿನ ಸೂಚನೆ? ಎಂಟ್ರಿ ಕೊಟ್ಟ 'ಮಿಸ್ ಉತ್ತರ ಕನ್ನಡ' ದೃಷ್ಟಿ ನಾಯಕ್

Shree Gandhada Gudi Serial: ಕಲರ್ಸ್ ಕನ್ನಡ ಚಾನೆಲ್ ಇದೀಗ ‘ಶ್ರೀ ಗಂಧದ ಗುಡಿ ಪ್ರೀತಿಯ ಕುಡಿʼ ಅನ್ನೋ ವಿನೂತನ ಧಾರಾವಾಹಿ ಹೊತ್ತು ತಂದು ಪ್ರೇಕ್ಷಕರ ಮನ ಗೆದ್ದಿದೆ. ‘ಶ್ರೀಗಂಧದ ಗುಡಿʼ ಅನ್ನೋದು ಹೆಣ್ಣು ದಿಕ್ಕಿಲ್ಲದ ಗಂಡಸರೇ ಒಟ್ಟಾಗಿ ಬದುಕ್ತಿರೋ ಮನೆ. ಆ ಮನೆಗೆ ಬರೋ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ?ʼ ಅನ್ನೋ ಕತೆ ಹೇಳೋ ಈ ಕೌಟುಂಬಿಕ ಧಾರಾವಾಹಿ. ಇತ್ತೀಚೆಗೆ ಕಾರಣಾಂತರಗಳಿಂದ ಸಂಜನಾ ಬುರ್ಲಿ ಅವರು ಧಾರಾವಾಹಿಯಿಂದ ಹೊರ ಬಂದಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಂಧದ ಗುಡಿ’ ಧಾರಾವಾಹಿಯ ಎರಡನೇ ನಾಯಕಿಯಾಗಿ, ಮುತ್ತು ಬಾಳಿಗೆ ಒಡತಿಯಾಗಿ ಹೊಸ ನಟಿ ಎಂಟ್ರಿ ಕೊಡುತ್ತಿದ್ದು, ಈಕೆ ಮಿಸ್ ಉತ್ತರ ಕನ್ನಡ 2026 ಕಿರೀಟ ಧರಿಸಿದ ಸುಂದರಿ ಆಗಿದ್ದಾರೆ. ಯಾರದು?

Shree Gandhada Gudi Serial: ಮುತ್ತು ಬಾಳಲ್ಲಿ ಹೊಸ ಬೆಳಕಿನ ಸೂಚನೆ?

ಶ್ರೀ ಗಂಧದ ಗುಡಿ -

Yashaswi Devadiga
Yashaswi Devadiga Mar 30, 2026 6:30 PM

ಕಲರ್ಸ್ ಕನ್ನಡ ಚಾನೆಲ್ (Colors Kannada) ಇದೀಗ ‘ಶ್ರೀ ಗಂಧದ ಗುಡಿ (Shri Gandhada Gudi) ಪ್ರೀತಿಯ ಕುಡಿʼ ಅನ್ನೋ ವಿನೂತನ ಧಾರಾವಾಹಿ ಹೊತ್ತು ತಂದು ಪ್ರೇಕ್ಷಕರ ಮನ ಗೆದ್ದಿದೆ. ‘ಶ್ರೀಗಂಧದ ಗುಡಿʼ ಅನ್ನೋದು ಹೆಣ್ಣು ದಿಕ್ಕಿಲ್ಲದ ಗಂಡಸರೇ ಒಟ್ಟಾಗಿ ಬದುಕ್ತಿರೋ ಮನೆ. ಆ ಮನೆಗೆ ಬರೋ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ?ʼ ಅನ್ನೋ ಕತೆ ಹೇಳೋ ಈ ಕೌಟುಂಬಿಕ ಧಾರಾವಾಹಿ. ಇತ್ತೀಚೆಗೆ ಕಾರಣಾಂತರಗಳಿಂದ ಸಂಜನಾ ಬುರ್ಲಿ (Sanjana Burli) ಅವರು ಧಾರಾವಾಹಿಯಿಂದ ಹೊರ ಬಂದಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಂಧದ ಗುಡಿ’ ಧಾರಾವಾಹಿಯ ಎರಡನೇ ನಾಯಕಿಯಾಗಿ, ಮುತ್ತು ಬಾಳಿಗೆ ಒಡತಿಯಾಗಿ ಹೊಸ ನಟಿ ಎಂಟ್ರಿ ಕೊಡುತ್ತಿದ್ದು, ಈಕೆ ಮಿಸ್ ಉತ್ತರ ಕನ್ನಡ 2026 (Miss Uttarakannada) ಕಿರೀಟ ಧರಿಸಿದ ಸುಂದರಿ ಆಗಿದ್ದಾರೆ. ಯಾರದು?

ಹೊಸ ಪಾತ್ರದ ಎಂಟ್ರಿ

‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದೆ. ಈಗಾಗಲೇ ಮುತ್ತು ಜೊತೆ ಒಂದು ರೊಮ್ಯಾಂಟಿ ಇಂಟರ್ಯಾಕ್ಷನ್ ಕೂಡ ಆಗಿದೆ. ಕನ್ನಡ ಬಾರದ ಹಿಂದಿ ಹುಡುಗಿ ಮಹಿಮಾ ಆಗಿ ದೃಷ್ಟಿ ನಾಯಕ್ ನಟಿಸುತ್ತಿದ್ದಾರೆ.

ಇದನ್ನೂ ಓದಿ: Amruthadhaare Serial: ಜೆಡಿಗೆ ಮಲ್ಲಿಯ ಆವಾಜ್‌; ಸುನಿ ಮುಖವಾಡ ಕಳಚಿ ಬೀಳೋ ಹೊತ್ತಲ್ಲೇ ಎದುರಾಯ್ತು ವಿಘ್ನ!

ಈಗಾಗಲೇ ಮಿಸ್ ಶಿರಸಿ 2025 ರನ್ನರ್ ಅಪ್ ಹಾಗೂ ಮಿಸ್ ಉತ್ತರ ಕನ್ನಡ 2026 ಕಿರೀಟವನ್ನ ಈಕೆ ಮುಡಿಗೇರಿಸಿಕೊಂಡಿದ್ದಾರೆ. ‘ದೇವಸಸ್ಯ’ ಎನ್ನುವ ಸಿನಿಮಾದಲ್ಲಿ, ನೆನಪಿರಲಿ ಪ್ರೇಮ್ ಅಭಿನಯದ ‘ಸ್ಪಾರ್ಕ್’ ಸಿನಿಮಾದಲ್ಲಿ ನಟಿ ಭಾವನಾ ಅವರ ಬಾಲ್ಯದ ಪಾತ್ರವನ್ನು ದೃಷ್ಟಿ ನಟಿಸಿದ್ದರು. ‘ಸ್ಪಾರ್ಕ್’ ಸಿನಿಮಾದಲ್ಲಿ ದೃಷ್ಟಿ ನಟಿಸಿದ್ದರು.

ಏನಂದ್ರು ನಟಿ?

ತಮ್ಮ ಹೊಸ ಪಾತ್ರದ ಬಗ್ಗೆ ಸಂಭ್ರಮ ಹಂಚಿಕೊಂಡಿರುವ ದೃಷ್ಟಿ, ಸೋಶಿಯಲ್ ಮೀಡಿಯಾದಲ್ಲಿ ‘ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಹೃದಯಪೂರ್ವಕವಾಗಿ ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಈ ಪ್ರಯಾಣದಲ್ಲಿ ನೀವು ನೀಡಿದ ಪ್ರೋತ್ಸಾಹ ನನಗೆ ಬಹಳ ಮಹತ್ವದ್ದಾಗಿದೆ.

‘ಶ್ರೀ ಗಂಧದಗುಡಿ’ಯ ಮಹಿಮಾ ಪಾತ್ರಕ್ಕೂ ಇದೇ ರೀತಿಯ ಪ್ರೀತಿ ಮತ್ತು ಬೆಂಬಲ ಸಿಗಲಿ ಎಂದು ಆಶಿಸುತ್ತೇನೆ. ಇಂದು ನನ್ನ ಮೇಲೆ ನನಗೆ ತುಂಬಾ ಹೆಮ್ಮೆ ಇದೆ. ಈ ಧಾರಾಬಾಹಿಯನ್ನು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 8:30ಕ್ಕೆ ವೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಕಡೆ ನಟಿ ಸಂಜನಾ ಅವರ ಜಾಗಕ್ಕೆ ಈಗ ಸ್ನೇಹಾ ಮಂಜುನಾಥ್ ಅವರ ಎಂಟ್ರಿಯಾಗಿದೆ. ಸಂಜನಾ ಅವರು ಅನಿವಾರ್ಯ ಕಾರಣಗಳಿಂದ ಧಾರಾವಾಹಿಯಿಂದ ಹೊರನಡೆದಿದ್ದು, ಆ ಜವಾಬ್ದಾರಿಯನ್ನು ಈಗ ಸ್ನೇಹಾ ವಹಿಸಿಕೊಂಡಿದ್ದಾರೆ.

ಏನಿದು ಕಥೆ?

ನಟ ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರೋ ಅಪ್ಪ ನಟರಾಜ ತನ್ನ ಮಕ್ಕಳಿಗೆ ಮುತ್ತುರಾಜ, ಸತ್ಯ ಹರಿಶ್ಚಂದ್ರ, ಕಂಠೀರವ, ಮಯೂರ ಎಂದು ಹೆಸರಿಟ್ಟಿದ್ದಾನೆ. ಈ ನಾಲ್ಕು ಗಂಡು ಮಕ್ಕಳೋ ನಾಲ್ಕು ದಿಕ್ಕುಗಳು. ಒಬ್ಬೊಬ್ರದ್ದು ಒಂದೊಂದು ಹಾದಿ. ತಂದೆ ನಟರಾಜ ಕುಡುಕ, ಗೊತ್ತು ಗುರಿಯಿಲ್ಲದ ಬೇಜವಾಬ್ದಾರಿಯ ಮನುಷ್ಯ.

ಅವನು ಸಂಪಾದಿಸಿರೋದು ಕೆಟ್ಟ ಹೆಸರು ಮಾತ್ರ. ಅವನಿಂದ ಮನೆಯ ಮಕ್ಕಳಿಗೂ ಕೆಟ್ಟ ಹೆಸರು. ಈ ಮನೆಗೆ ಹುಡುಗಿಯೊಬ್ಬಳು ಬರ್ತಾಳೆ. ಅವಳು ಯಾಕೆ ಬರ್ತಾಳೆ?ಯಾವ ಕಾರಣಕ್ಕೆ? ಬಂದ ಮೇಲೆ ಅದೇ ಮನೆಯಲ್ಲಿ ಯಾಕೆ ಉಳೀತಾಳೆ? ಉಳಿದ ಮೇಲೆ ಯಾವ ಕಾರಣಕ್ಕಾಗಿ ಆ ಮನೆಯನ್ನ ಸರಿ ಮಾಡ್ತಾಳೆ? ಹೇಗೆ ಸರಿ ಮಾಡ್ತಾಳೆ? ಅನ್ನೋ ಕತೆಯನ್ನ ಇದು ಹೇಳುತ್ತೆ.

ಇದನ್ನೂ ಓದಿ: Sonam Kapoor : ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್

ʼಕಥಾ ಕ್ರಿಯೇಷನ್ಸ್ʼ ಬ್ಯಾನರ್‌ನಲ್ಲಿ ಪರೀಕ್ಷಿತ್ ಎಂ.ಎಸ್. - ಪ್ರದೀಪ್ ಆಜ್ರಿ ನಿರ್ಮಾಣದಲ್ಲಿ ಕಿರುತೆರೆಗೆ ಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕರು- ಪ್ರಕಾಶ್ ಮುಚ್ಚಳಗುಡ್ಡ. ತಾರಾಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ.