ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್! ಮುಂದಿರೋ ಸವಾಲನ್ನ ಹೇಗೆ ಎದುರಿಸ್ತಾಳೆ?

Amruthadhaare Serial: ಗೌತಮ್‌ ಇದಕ್ಕೂ ಮುಂಚೆ ತಲೆ ಸುತ್ತಿ ಬಿದ್ದಿದ್ದಾನೆ. ಇದರಿಂದ ಗಾಬರಿಯಾಗಿ ಆಸ್ಪತ್ರೆಯಲ್ಲಿ ಚೆಕಪ್‌ಗೂ ಕೊಟ್ಟಾಗಿತ್ತು. ಆದರೆ ಆಗಿದ್ದೇ ಬೇರೆ. ವೈದ್ಯರು ಕರೆ ಮಾಡಿ, ಭೂಮಿಕಾ ಮತ್ತು ಗೌತಮ್​ಗೆ ಬರಲು ಹೇಳಿದ್ರು. ಆಗ ಭೂಮಿಕಾ, ಬ್ಲಡ್​ ಟೆಸ್ಟ್​ನಲ್ಲಿ ಗೌತಮ್​ಗೆ ಏನಾದ್ರೂ ಸಮಸ್ಯೆ ಇದೆಯಾ ಎಂದು ಆತಂಕಗೊಂಡಿದ್ದಳು. ಆದರೆ ಇಲ್ಲಿ ಆಗಿದ್ದೇ ಬೇರೆ.

ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್! ಮುಂದಿರೋ ಸವಾಲನ್ನ ಹೇಗೆ ಎದುರಿಸ್ತಾಳೆ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 10, 2026 10:21 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಊಹೆಗೂ ನಿಲುಕದ ಹಾಗೇ ಶಾಕ್‌ ಕೊಟ್ಟಿದ್ದಾರೆ ಡೈರೆಕ್ಟರ್‌ ಅಂತ ಕಮೆಂಟ್‌ ಮಾಡುತ್ತಿದ್ದಾರೆ ವೀಕ್ಷಕರು. ಗೌತಮ್‌ಗೆ (Gowtham) ಗಂಭೀರ ಕಾಯಿಲೆ ಇದೆ ಎಂದುಕೊಂಡರೆ, ವೈದ್ಯಕೀಯ ವರದಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ (Breast Cancer) ಇರುವುದು ದೃಢಪಟ್ಟಿದೆ.

ಆಗಿದ್ದೇ ಬೇರೆ

ಹೌದು ಗೌತಮ್‌ ಇದಕ್ಕೂ ಮುಂಚೆ ತಲೆ ಸುತ್ತಿ ಬಿದ್ದಿದ್ದಾನೆ. ಇದರಿಂದ ಗಾಬರಿಯಾಗಿ ಆಸ್ಪತ್ರೆಯಲ್ಲಿ ಚೆಕಪ್‌ಗೂ ಕೊಟ್ಟಾಗಿತ್ತು. ಆದರೆ ಆಗಿದ್ದೇ ಬೇರೆ. ವೈದ್ಯರು ಕರೆ ಮಾಡಿ, ಭೂಮಿಕಾ ಮತ್ತು ಗೌತಮ್​ಗೆ ಬರಲು ಹೇಳಿದ್ರು. ಆಗ ಭೂಮಿಕಾ, ಬ್ಲಡ್​ ಟೆಸ್ಟ್​ನಲ್ಲಿ ಗೌತಮ್​ಗೆ ಏನಾದ್ರೂ ಸಮಸ್ಯೆ ಇದೆಯಾ ಎಂದು ಆತಂಕಗೊಂಡಿದ್ದಳು. ಆದರೆ ಇಲ್ಲಿ ಆಗಿದ್ದೇ ಬೇರೆ.

ರುಟೀನ್​ ಚೆಕಪ್​ ಮಾಡಿಸಿಕೊಂಡಿದ್ದರು ದಂಪತಿ. ಈ ವೇಳೆ ಭೂಮಿಕಾ ಬ್ರೆಸ್ಟ್​ ಕ್ಯಾನ್ಸರ್​ ಇರುವುದು ತಿಳಿದಿದೆ. ಅಷ್ಟಕ್ಕೂ ಈಗಿನ ಕಾಲದಲ್ಲಿ ಬ್ರೆಸ್ಟ್​ ಕ್ಯಾನ್ಸರ್​ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇದನ್ನೇ ಸೀರಿಯಲ್​ನಲ್ಲಿಯೂ ತಂದಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಎಂದು ಹೇಳುವುದನ್ನು ಸೀರಿಯಲ್​​ ಕಲಿಸುವಂತೆ ಕಾಣುತ್ತಿದೆ.

ಇದನ್ನೂ ಓದಿ: Prajwal Devaraj: ಪೊಲೀಸ್ ಠಾಣೆ ಮೆಟ್ಟಿಲೇರಿದ ಕರಾವಳಿ ಸಿನಿಮಾ ಗಲಾಟೆ!

ಎಂಡ್​ ಆಗಿದೆ ಎಂದುಕೊಳ್ಳುವಾಗಲೇ ಇಂಥದ್ದೊಂದು ಟ್ವಿಸ್ಟ್​ ಕೊಟ್ಟಿದೆ. ಒಟ್ಟಿನಲ್ಲಿ ಒಂದೆಡೆ ಶಕುಂತಲಾ ಮತ್ತು ಜೈದೇವ್​ ಒಟ್ಟಾಗಿ ಗೌತಮ್​ ಸಾಮ್ರಾಜ್ಯದ ಮೇಲೆ ಕಣ್ಣು ಹಾಕಿದ್ದರೆ, ಅದೇ ಇನ್ನೊಂದೆಡೆ ಭೂಮಿಕಾ ಲೈಫ್​ನಲ್ಲಿ ಈ ರೀತಿಯ ಟ್ವಿಸ್ಟ್​ ಕೊಡಲಾಗಿದೆ.

ಇನ್ನೊಂದು ಕಡೆ ಶಕುಂತಲಾ ನಡೆಯೂ ವೀಕ್ಷಕರಿಗೆ ಅನುಮಾನ ಸೃಷ್ಟಿಸಿದೆ. ಪೂರ್ಣ ಆಸ್ತಿಗಾಗಿ ಮಗನಿಂದ ಕೆಲವು ಸಹಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಮೊದಲಿಗೆ ಕೆಡಿ ಜಯದೇವ್‌ ಸಹಿ ಹಾಕೊಲ್ಲ ಎಂದಿದ್ದಾನೆ. ಆದರೆ ಏಕಾಏಕಿ ಅಮ್ಮನ ಮಾತನ್ನು ನಂಬಿ ತನ್ನ ಬಳಿ ಇರುವ ಆಸ್ತಿಯನ್ನು ಬರೆದುಕೊಟ್ಟಿದ್ದಾಳೆ. ಈ ನಡೆಯನ್ನು ಕಂಡು ವೀಕ್ಷಕರು ಶಕುಂತಲಾ ಬದಲಾಗಿರಬೇಕು. ಮಗನ ಮುಂದೆ ನಾಟಕ ಮಾಡುತ್ತಿದ್ದಾಳೇನೋ ಅಂತ ಕಮೆಂಟ್‌ ಕೂಡ ಮಾಡುತ್ತಿದ್ದಾರೆ.

ಎಲ್ಲಾ ಸರಿಯಾಗುತ್ತಿದೆ, ಜೈದೇವ್ ಜೈಲಿಗೆ ಹೋಗಿದ್ದಾನೆ ಎಂದುಕೊಳ್ಳುತ್ತಿರುವಾಗಲೇ ಇದೀಗ, ಶಾಕುಂತಲಾ ಜೈಲಿನಿಂದ ಮಗನನ್ನು ಬಿಡಿಸಿದ್ದಾಳೆ. ಅಷ್ಟೇ ಅಲ್ಲ, ನೀನು ಇಷ್ಟು ದಿನ ನೋಡಿದ್ದೆಲ್ಲಾ ನಾಟಕ, ನನ್ನ ಅಸಲಿ ಮುಖ ಏನು ಅನ್ನೋದನ್ನು ಇನ್ನು ಮುಂದೆ ತೋರಿಸುತ್ತೇನೆ ಎನ್ನುತ್ತಾ, ಮಗನನ್ನು ಅಪ್ಪಿ ಮುದ್ದಾಡಿದ್ದಾಳೆ ಶಾಕುಂತಲಾ. ಆದರೆ ಇದು ಶಕುಂತಲಾಳದ್ದು ಮಾಸ್ಟರ್‌ ಪ್ಲ್ಯಾನ್‌ ಇರಬಹುದು ಎಂಬುದು ವೀಕ್ಷಕರ ಊಹೆ.

ಇದನ್ನೂ ಓದಿ: Amruthadhaare Serial: ಗೌತಮ್‌ಗೆ ಇದೇನಾಯ್ತು? ಕೆಡಿಗೆ ಶಕುಂತಲಾ ತಿರುಮಂತ್ರ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ