South Movies on OTT: ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ; ಈ ಎಲ್ಲ ಸೌತ್ ಸಿನಿಮಾಗಳು ಸ್ಟ್ರೀಮಿಂಗ್ ಎಲ್ಲಿ?
South Movies to Watch on OTT: ಒಟಿಟಿ ಪ್ರಿಯರಿಗೆ ವೀಕೆಂಡ್ ಬಂತು ಅಂದರೆ ಯಾವೆಲ್ಲ ಸಿನಿಮಾಗಳು ಬಂದಿವೆ ಅನ್ನೋದು ಕುತೂಹಲ. ಈ ವಾರ ಸಾಲು ಸಾಲು ಸೌತ್ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ವಿಜಯ್ ಸೇತುಪತಿ ಅಭಿನಯದ 'ಗಾಂಧಿ ಟಾಕ್ಸ್' ಎಂಬ ಮೂಕ ಭಾರತೀಯ ಚಿತ್ರ ಅಧಿಕೃತವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದರ ಜೊತೆಗೆ ಯಾವೆಲ್ಲ ಸಿನಿಮಾಗಳು ಬಂದಿವೆ? ತಿಳಿಯಲು ಮುಂದೆ ಓದಿ.
ಒಟಿಟಿ ಸಿನಿಮಾಗಳು -
ಒಟಿಟಿ ಪ್ರಿಯರಿಗೆ (South Movies to Watch on OTT) ವೀಕೆಂಡ್ ಬಂತು ಅಂದರೆ ಯಾವೆಲ್ಲ ಸಿನಿಮಾಗಳು ಬಂದಿವೆ ಅನ್ನೋದು ಕುತೂಹಲ. ಈ ವಾರ ಸಾಲು ಸಾಲು ಸೌತ್ ಸಿನಿಮಾಗಳು (South Cinema) ಒಟಿಟಿಗೆ ಲಗ್ಗೆ ಇಡುತ್ತಿವೆ. ವಿಜಯ್ ಸೇತುಪತಿ ಅಭಿನಯದ 'ಗಾಂಧಿ ಟಾಕ್ಸ್' ಎಂಬ ಮೂಕ ಭಾರತೀಯ ಚಿತ್ರ ಅಧಿಕೃತವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದರ ಜೊತೆಗೆ ಯಾವೆಲ್ಲ ಸಿನಿಮಾಗಳು ಬಂದಿವೆ? ತಿಳಿಯಲು ಮುಂದೆ ಓದಿ.
'ಗಾಂಧಿ ಟಾಕ್ಸ್'
ಪಾತ್ರವರ್ಗ: ವಿಜಯ್ ಸೇತುಪತಿ , ಅರವಿಂದ್ ಸ್ವಾಮಿ, ಅದಿತಿ ರಾವ್ ಹೈದರಿ, ಸಿದ್ಧಾರ್ಥ್ ಜಾಧವ್, ಮಹೇಶ್ ಮಂಜ್ರೇಕರ್, ಉಷಾ ನಾಡಕರ್ಣಿ
ನಿರ್ದೇಶಕ: ಕಿಶೋರ್ ಪಾಂಡುರಂಗ ಬೇಲೇಕರ್
ಅವಧಿ: 2 ಗಂಟೆ 10 ನಿಮಿಷಗಳು
ಸ್ಟ್ರೀಮಿಂಗ್ ದಿನಾಂಕ: ಮಾರ್ಚ್ 6, 2026
ಎಲ್ಲಿ ವೀಕ್ಷಿಸಬೇಕು: ZEE5
ಗಾಂಧಿ ಟಾಕ್ಸ್ ಚಿತ್ರವು ಒಂದು ಕಾಲದಲ್ಲಿ ಯಶಸ್ವಿ ಉದ್ಯಮಿಯಾಗಿದ್ದ ಮೋಹನ್ ಬೋಸ್‌ಮನ್ ಅವರ ಕುರಿತು ಇರುವ ಕಥೆ. ಈ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ಬಾಡಿಗೆ ಮೂಲಕ ಸಿನಿಮಾ ವೀಕ್ಷಿಸಬೇಕಿತ್ತು. ಆದರೆ ಈಗ ನಾಳೆಯಿಂದ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಇದನ್ನೂ ಓದಿ: Bhagyalakshmi Serial: ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್ ಕೆನ್ನೆಗೆ ಬಾರಿಸಿದ ಆದಿ!
ಹಸಿವು, ಉದ್ಯೋಗದಿಂದ ವಂಚನಾಗಿದ್ದ ಯುವಕ ಅಸಮಾನತೆ ವಿರುದ್ಧ ಹೋರಾಡಲು ಮುಂದಾಗುತ್ತಾನೆ. ಹೋರಾಟದ ಹಾದಿ ಬದಲು ಹಣದ ಮೋಹಕ್ಕೆ ಒಳಗಾಗುತ್ತಾನೆ. ಇದು ಟ್ರೈಲರ್‌ನಲ್ಲಿ ಅನಾವರಣಗೊಂಡಿತ್ತು. ಅಸಮಾನತೆ ವಿರುದ್ಧ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿರಾವ್ ಫುಲೆ, ಮಹಾತ್ಮಗಾಂಧೀಜಿ, ಭಗತ್ ಸಿಂಗ್ ಚಿತ್ರಗಳನ್ನು ತೋರಿಸಲಾಗಿತ್ತು.
ಓಂ ಶಾಂತಿ ಶಾಂತಿ ಶಾಂತಿಹಿ
ಪಾತ್ರವರ್ಗ: ತರುಣ್ ಭಾಸ್ಕರ್ , ಈಶಾ ರೆಬ್ಬಾ, ಬ್ರಹ್ಮಾಜಿ, ಶಿವನ್ನಾರಾಯಣ ನರಿಪೆಡ್ಡಿ, ಸುರಭಿ ಪ್ರಭಾವತಿ, ಗೋಪರಾಜು ವಿಜಯ್
ನಿರ್ದೇಶಕ: ಎ ಆರ್ ಸಜೀವ್
ಅವಧಿ: 2 ಗಂಟೆ 10 ನಿಮಿಷಗಳು
ಭಾಷೆ: ತೆಲುಗು
ಸ್ಟ್ರೀಮಿಂಗ್ ದಿನಾಂಕ: ಮಾರ್ಚ್ 4, 2026
ಎಲ್ಲಿ ವೀಕ್ಷಿಸಬೇಕು: ಆಹಾ ವಿಡಿಯೋ
ಓಂ ಶಾಂತಿ ಶಾಂತಿ ಶಾಂತಿಹಿ ಚಿತ್ರವು ಪಿತೃಪ್ರಧಾನ ಮೌಲ್ಯಗಳನ್ನು ಹೊಂದಿರುವ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಯುವತಿಯ ಕಥೆ.
ಈ ಚಿತ್ರವು ದರ್ಶನ ರಾಜೇಂದ್ರನ್ ಮತ್ತು ಬಾಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮಲಯಾಳಂ ಚಿತ್ರ ಜಯ ಜಯ ಜಯ ಜಯ ಹೇ ಚಿತ್ರದ ಅಧಿಕೃತ ತೆಲುಗು ರಿಮೇಕ್ ಆಗಿದೆ.
ಜಾಕಿ
ಪಾತ್ರವರ್ಗ: ಯುವನ್ ಕೃಷ್ಣ, ರಿಧಾನ್ ಕೃಷ್ಣಸ್, ಅಮ್ಮು ಅಭಿರಾಮಿ, ಮಧುಸೂಧನ್ ರಾವ್, ಸಿತನ್ ಮೋಹನ್, ಶರಣ್ಯ ರವಿ, ಫಾತ್ಮೆನ್, ಯೋಗಿ, ಸಾಯಿ ದಿನೇಶ್
ನಿರ್ದೇಶಕ: ಡಾ. ಪ್ರಗಭಾಲ್
ಪ್ರಕಾರ: ಕ್ರೀಡಾ ಆಕ್ಷನ್ ನಾಟಕ
ಅವಧಿ: 2 ಗಂಟೆ 27 ನಿಮಿಷಗಳು
ಭಾಷೆ: ತಮಿಳು
ಸ್ಟ್ರೀಮಿಂಗ್ ದಿನಾಂಕ: ಮಾರ್ಚ್ 6, 2026
ಎಲ್ಲಿ ನೋಡಬೇಕು: ಅಮೆಜಾನ್ ಪ್ರೈಮ್ ವಿಡಿಯೋ
ಜಾಕಿ ಮಧುರೈನ ಗ್ರಾಮೀಣ ಸಂಸ್ಕೃತಿಯಲ್ಲಿ ಬೇರೂರಿರುವ ತಮಿಳು ಕ್ರೀಡಾ ಆಕ್ಷನ್ ಡ್ರಾಮ ಆಗಿದೆ. ಮೇಕೆ ಕಾದಾಟದ ಸಂಪ್ರದಾಯಗಳ ಸುತ್ತ ಸುತ್ತುವ ಕಥೆ ಇದು ತಮಿಳು ಸಂಸ್ಕೃತಿಯ ರೋಮಾಂಚಕ ಕಥೆ ಒಳಗೊಂಡಿದೆ.
Granny
ಪಾತ್ರವರ್ಗ: ವಡಿವುಕ್ಕರಸಿ, ದಿಲೀಪನ್, ಸಿಂಗಂ ಪುಲಿ, ಗಜರಾಜ್ ಎಸ್, ಅನಂತ್ ನಾಗ್ ನಟಿಸಿದ್ದಾರೆ.
ವಿಜಯ ಕುಮಾರನ್ ನಿರ್ದೇಶನವಿದೆ. ಹಾರರ್ ಥ್ರಿಲ್ಲರ್ ಸಿನಿಮಾ ಇದು.
ಅವಧಿ: 2 ಗಂಟೆ 4 ನಿಮಿಷಗಳು
ಭಾಷೆ: ತಮಿಳು
ಸ್ಟ್ರೀಮಿಂಗ್ ದಿನಾಂಕ: ಮಾರ್ಚ್ 6, 2026
ಎಲ್ಲಿ ವೀಕ್ಷಿಸಬೇಕು: ಸನ್‌ಎನ್‌ಎಕ್ಸ್‌ಟಿ
ಇದನ್ನೂ ಓದಿ: Shah Rukh Khan: ಈ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್ ಒಟ್ಟಿಗೆ ನಟನೆ: ಫ್ಯಾನ್ಸ್ ಖುಷ್
ಧೀರಂ
ಪಾತ್ರವರ್ಗ: ಇಂದ್ರಜಿತ್ ಸುಕುಮಾರನ್ , ರೆಂಜಿ ಪಣಿಕರ್, ಅಜು ವರ್ಗೀಸ್, ನಿಶಾಂತ್ ಸಾಗರ್, ದಿವ್ಯಾ ಪಿಳ್ಳೈ, ರೆಬಾ ಮೋನಿಕಾ ಜಾನ್. ಜಿತಿನ್ ಸುರೇಶ್ ಟಿ. ನಿರ್ದೇಶನವಿದೆ. ನಿಗೂಢ ಮನೋವೈಜ್ಞಾನಿಕ ಥ್ರಿಲ್ಲರ್ ಸಿನಿಮಾ ಇದು.2 ಗಂಟೆ 31 ನಿಮಿಷಗಳು ಸಿನಿಮಾ. ಮಲಯಾಳಂ ಭಾಷೆ ಸಿನಿಮಾ ಇದು.
ಸ್ಟ್ರೀಮಿಂಗ್ ದಿನಾಂಕ: ಮಾರ್ಚ್ 6, 2026
ಎಲ್ಲಿ ವೀಕ್ಷಿಸಬೇಕು: ಸನ್‌ಎನ್‌ಎಕ್ಸ್‌ಟಿ
ಕ್ಯಾಲಿಕಟ್‌ನಲ್ಲಿ ನಡೆದ ನಿಗೂಢ ಕೊಲೆಗಳ ಸರಣಿ ಕಥೆ ಆಗಿದೆ.