MM Keeravani Son Wedding: ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆಯಾಗಲಿದ್ದಾರಾ ತೆಲುಗಿನ ಈ ಜನಪ್ರಿಯ ನಟಿ? ಯಾರವರು?
Kavya Kalyanram Wedding: ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಪುತ್ರ, ಗಾಯಕ ಕಾಲಭೈರವ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 'ಬಲಗಂ' ಸಿನಿಮಾ ಖ್ಯಾತಿಯ ನಟಿ ಕಾವ್ಯ ಕಲ್ಯಾಣ್‌ರಾಮ್ ಅವರು ರಾಜಮೌಳಿ ಮತ್ತು ಕೀರವಾಣಿ ಕುಟುಂಬದ ಸೊಸೆಯಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ.
-
ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರದ್ದು ಎಂಥ ದೊಡ್ಡ ಕುಟುಂಬ ಎಂಬುದು ಎಲ್ಲರಿಗೂ ಗೊತ್ತಿದೆ. ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಕೂಡ ರಾಜಮೌಳಿ ಅವರ ಸಂಬಂಧಿಕರೇ. ರಾಜಮೌಳಿ ಕುಟುಂಬದ ಬಹುತೇಕರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಕುಟುಂಬದಲ್ಲಿ ಸದ್ಯದಲ್ಲೇ ಮಂಗಳವಾದ್ಯ ಮೊಳಗಲಿದೆ, ಜನಪ್ರಿಯ ನಟಿಯೊಬ್ಬರು ಈ ಕುಟುಂಬದ ಸೊಸೆಯಾಗಲಿದ್ದಾರೆ ಎಂಬ ಟಾಕ್ ಕೇಳಿಬಂದಿದೆ. ಅಷ್ಟಕ್ಕೂ ಆ ನಟಿ ಯಾರು? ಮುಂದೆ ಓದಿ.
ಕಾಲಭೈರವ ಜೊತೆ ಕಾವ್ಯಾ ಕಲ್ಯಾಣ್‌ರಾಮ್ ಮದುವೆ
ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ, ಅಲ್ಲು ಶಿರೀಶ್-ನಯನಿಕಾ ಅವರ ವಿವಾಹ ಸಂಭ್ರಮಗಳು ಅದ್ಧೂರಿಯಾಗಿ ಮುಗಿದಿವೆ. ನಟ ಬೆಲ್ಲಂಕೊಂಡ ಶ್ರೀನಿವಾಸ್ ಕೂಡ ತಮ್ಮ ಭಾವಿ ಪತ್ನಿಯನ್ನು ಪರಿಚಯಿಸಿದ್ದಾರೆ. ಈ ಸಾಲಿಗೆ ಈಗ ರಾಜಮೌಳಿ ಕುಟುಂಬದಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂಬ ಟಾಕ್ ಕೇಳಿಬಂದಿದೆ. ಹೌದು, ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಅವರ ಹಿರಿಯ ಪುತ್ರ, ಗಾಯಕ ಕಾಲಭೈರವ ಅವರು ಮದುವೆಗೆ ಸಜ್ಜಾಗುತ್ತಿದ್ದು, ‘ಬಲಗಂ’ ಸಿನಿಮಾ ಖ್ಯಾತಿಯ ನಟಿ ಕಾವ್ಯ ಕಲ್ಯಾಣ್‌ರಾಮ್ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಒಟ್ಟಿಗೆ ಪ್ರತ್ಯಕ್ಷ
ಕಳೆದ ಕೆಲವು ಸಮಯದಿಂದ ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಕಾರ್ಯಕ್ರಮದಲ್ಲಿ ಕಾಲಭೈರವ ಮತ್ತು ಕಾವ್ಯ ಪಕ್ಕಪಕ್ಕದಲ್ಲೇ ಕುಳಿತು ಆತ್ಮೀಯವಾಗಿ ಹರಟೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, "ಈ ಜೋಡಿ ನೋಡಲು ಮುದ್ದಾಗಿದೆ, ಸದ್ಯದಲ್ಲೇ ಶುಭ ಸುದ್ಧಿ ಕೇಳಲಿದ್ದೇವೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕಲಾಗುತ್ತಿದೆ.
SSMB29 Movie: ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಮಾಧವನ್ ಎಂಟ್ರಿ?
ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು ಹೇಗೆ?
ಕಾಲಭೈರವ ಅವರ ಸಹೋದರ ನಟ ಶ್ರೀಸಿಂಹ ಅಭಿನಯದ ‘ಉಸ್ತಾದ್’ ಸಿನಿಮಾದಲ್ಲಿ ಕಾವ್ಯಾ ನಾಯಕಿಯಾಗಿ ನಟಿಸಿದ್ದರು. ಆ ಶೂಟಿಂಗ್ ಸಮಯದಲ್ಲಿ ಕಾವ್ಯಗೆ ಕಾಲಭೈರವ ಅವರ ಪರಿಚಯ ಆಗಿತ್ತು ಎನ್ನಲಾಗಿದೆ. ಈ ಪರಿಚಯವೇ ನಂತರ ಪ್ರೇಮಕ್ಕೆ ತಿರುಗಿದ್ದು, ಇದಕ್ಕೆ ಎರಡೂ ಕುಟುಂಬದ ಹಿರಿಯರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಕೀರವಾಣಿ ಅವರ ಕಿರಿಯ ಪುತ್ರ ಶ್ರೀಸಿಂಹ ಅವರ ವಿವಾಹ ಮುರಳಿ ಮೋಹನ್ ಅವರ ಮೊಮ್ಮಗಳೊಂದಿಗೆ ನಡೆದಿದ್ದು, ಈಗ ಹಿರಿಯ ಪುತ್ರನ ಮದುವೆಗೆ ಕೀರವಾಣಿ ಕುಟುಂಬ ಸಜ್ಜಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ನಟಿ ಕಾವ್ಯ ಕಲ್ಯಾಣ್ ರಾಮ್
ಯಾರು ಕಾವ್ಯ ಕಲ್ಯಾಣ್‌ರಾಮ್
ತೆಲುಗು ಪ್ರೇಕ್ಷಕರಿಗೆ ಕಾವ್ಯ ಕಲ್ಯಾಣ್‌ರಾಮ್ ಚಿರಪರಿಚಿತ ನಟಿ. ಅಲ್ಲು ಅರ್ಜುನ್ ಅವರ ‘ಗಂಗೋತ್ರಿ’ ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದ್ದ ಕಾವ್ಯ, ನಂತರ ‘ಟ್ಯಾಗೋರ್’, ‘ಬನ್ನಿ’ ಚಿತ್ರಗಳಲ್ಲಿಯೂ ಮಿಂಚಿದ್ದರು. ಬಳಿಕ ‘ಮಸೂದ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಅವರು, ‘ಬಲಗಂ’ ಸಿನಿಮಾದಿಂದ ದೊಡ್ಡ ಹೆಸರು ಪಡೆದುಕೊಂಡರು. ಸದ್ಯ ಇವರು ‘ವಾಟ್ಸಾಪ್ ನರೇಶ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.