ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Suryavamsha Serial : ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್‌ ಜತ್ಕರ್‌ ಭಾವುಕ ಪೋಸ್ಟ್‌

Suryavamsha Serial : ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಧಾರಾವಾಹಿ ‘ಜೊತೆ ಜೊತೆಯಲಿ’. ಈ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ್ ಜತ್ಕರ್‌ ಮಿಂಚಿದ್ದರು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್‌ ಡ್ಯೂಪರ್‌ ಹಿಟ್‌ ಸಿನಿಮಾ ‘ಸೂರ್ಯವಂಶ’ . ಈ ಸಿನಿಮಾ 1999 ರಲ್ಲಿ ತೆರೆಗೆ ಬಂದಿತ್ತು. ಇದೇ ಹೆಸರಿನ ‘ಸೂರ್ಯವಂಶ’ಧಾರಾವಾಹಿ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದರು ಅನಿರುದ್ಧ್‌. ‘ಉದಯ ಟಿವಿ’ಯ ‘ಸೂರ್ಯವಂಶ’ ಶೀಘ್ರದಲ್ಲೇ ತನ್ನ ಪಯಣವನ್ನ ಮುಕ್ತಾಯಗೊಳಿಸಲಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರು‌ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್‌ ಭಾವುಕ ಪೋಸ್ಟ್‌

ಸೂರ್ಯವಂಶ ಧಾರಾವಾಹಿ -

Yashaswi Devadiga
Yashaswi Devadiga Mar 12, 2026 7:36 PM

ಕನ್ನಡ ಕಿರುತೆರೆಯಲ್ಲಿ (Kannada Serial) ಹೊಸ ಸಂಚಲನ ಸೃಷ್ಟಿಸಿದ ಧಾರಾವಾಹಿ ‘ಜೊತೆ ಜೊತೆಯಲಿ’. ಈ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ್ ಜತ್ಕರ್‌ (Anirudh Jatkar) ಮಿಂಚಿದ್ದರು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್‌ ಡ್ಯೂಪರ್‌ ಹಿಟ್‌ ಸಿನಿಮಾ ‘ಸೂರ್ಯವಂಶ’ (Suryavamsha Serial). ಈ ಸಿನಿಮಾ 1999 ರಲ್ಲಿ ತೆರೆಗೆ ಬಂದಿತ್ತು. ಇದೇ ಹೆಸರಿನ ‘ಸೂರ್ಯವಂಶ’ಧಾರಾವಾಹಿ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದರು ಅನಿರುದ್ಧ್‌. ‘ಉದಯ ಟಿವಿ’ಯ (Udaya TV) ‘ಸೂರ್ಯವಂಶ’ ಶೀಘ್ರದಲ್ಲೇ ತನ್ನ ಪಯಣವನ್ನ ಮುಕ್ತಾಯಗೊಳಿಸಲಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರು‌ ಸೋಶಿಯಲ್‌ ಮೀಡಿಯಾದಲ್ಲಿ (Social Media) ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kannada Serial TRP: ಈ ಧಾರಾವಾಹಿಗೆ ಮೊದಲ ಸ್ಥಾನ! ಲಿಸ್ಟ್‌ ಇಲ್ಲಿದೆ

ಕಥೆಗೆ ಸಂಪೂರ್ಣ ಅಂತ್ಯ ದೊರಕದಿರಬಹುದು!

ಎಸ್‌ ನಾರಾಯಣ್ ಹಾಗೂ ಅನಿರುದ್ಧ್ ಜತ್ಕರ್ ಕಾಂಬಿನೇಶನ್‌ನಲ್ಲಿ ‘ಸೂರ್ಯವಂಶ’ ಸೀರಿಯಲ್‌ ತಯಾರಾಗಿತ್ತು. ಈ ತಿಂಗಳ 21ರಂದು ಕೊನೆಯ ಭಾಗ ಟೆಲಿಕಾಸ್ಟ್‌ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ,

‘ಸೂರ್ಯವಂಶ’ ಧಾರಾವಾಹಿಯನ್ನು ನಾವು ಮುಕ್ತಾಯಗೊಳಿಸುತ್ತಿದ್ದೇವೆ. ಈ ತಿಂಗಳ 21ರಂದು ಕೊನೆಯ ಭಾಗ ಪ್ರಸಾರವಾಗಲಿದೆ. ಕಥೆಗೆ ಸಂಪೂರ್ಣ ಅಂತ್ಯ ದೊರಕದಿರಬಹುದು. ಆದರೆ ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯುತ್ತಾ ಸುಮಾರು 650 ಕಂತುಗಳನ್ನು ಪೂರ್ಣಗೊಳಿಸಿದ ನಂತರ, ಹೊಸ ಧಾರಾವಾಹಿಗೆ ಅವಕಾಶ ನೀಡುವ ಉದ್ದೇಶದಿಂದ ಚಾನೆಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಹೊಸ ಪಾತ್ರದೊಂದಿಗೆ ನಿಮ್ಮನ್ನು ಮತ್ತೆ ಭೇಟಿ ಮಾಡುವೆ

ಈ ಅದ್ಭುತ ತಂಡದ ಜೊತೆ ಹಾಗೂ ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನೋಡಿಕೊಂಡ ಚಾನೆಲ್‌ನ ಎಲ್ಲರ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಸಂತೋಷ ಮತ್ತು ಗೌರವದ ವಿಷಯವಾಗಿತ್ತು.

ಈ ಧಾರಾವಾಹಿಯನ್ನು ಪ್ರೀತಿಯಿಂದ ನೋಡುತ್ತಾ ನಿರಂತರವಾಗಿ ಬೆಂಬಲ ನೀಡಿದ ನನ್ನ ಎಲ್ಲ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ತುಂಬಾ ಬೇಗನೇ ಹೊಸ ಪ್ರಾಜೆಕ್ಟ್ ಮತ್ತು ಹೊಸ ಪಾತ್ರದೊಂದಿಗೆ ನಿಮ್ಮನ್ನು ಮತ್ತೆ ಭೇಟಿ ಮಾಡುತ್ತೇನೆ. ಎಲ್ಲರಿಗೂ ಅಪಾರ ಪ್ರೀತಿ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ ಶವವಾಗಿ ಪತ್ತೆ

ಸೂರ್ಯವಂಶ ಸರಿಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗುವ ಮೂಲಕ ಕಿರುತೆರೆ ವೀಕ್ಷಕರ ಮನೆಮಾತಾಗಿತ್ತು. ಸುಮಾರು 650 ಎಪಿಸೋಡ್‌ಗಳನ್ನ ಪೂರೈಸಿದೆ ಈ ಧಾರಾವಾಹಿ. ‘ಸೂರ್ಯವಂಶ’ ಸೀರಿಯಲ್‌ಗೆ ಎಸ್‌ ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿತ್ತು. ‘ಸೂರ್ಯವಂಶ’ ಧಾರಾವಾಹಿಯಲ್ಲಿ ಕಲಾವಿದರ ದಂಡೇ ಇತ್ತು.