ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Suvarna Sakhi: ಮಹಿಳಾ ಆಟೋ ಡ್ರೈವರ್ಸ್‌ ಗೌರವಿಸಿದ ಸ್ಟಾರ್‌ ಸುವರ್ಣ ; ಏನಿದು ʻಸುವರ್ಣಮಹಿಳಾ ಸಖಿʼ?

Star Suvarna: ಮನರಂಜನೆಯಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ಕನ್ನಡಿಗರ ಮನಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿರುವ 'ಸ್ಟಾರ್ ಸುವರ್ಣ' ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಸುವರ್ಣ ಸಖಿ" ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಸಮಾಜಕ್ಕೆ ಮಾದರಿಯಾಗಿದೆ.

ಮಹಿಳಾ ಆಟೋ ಡ್ರೈವರ್ಸ್‌ ಗೌರವಿಸಿದ ಸ್ಟಾರ್‌ ಸುವರ್ಣ!

ಸುವರ್ಣ ಸಖಿ -

Yashaswi Devadiga
Yashaswi Devadiga Mar 8, 2026 6:23 PM

ಮನರಂಜನೆಯಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ಕನ್ನಡಿಗರ ಮನಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿರುವ 'ಸ್ಟಾರ್ ಸುವರ್ಣ' (Star Suvarna) ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಸುವರ್ಣ ಸಖಿ" (Suvarna Sakhi) ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಸಮಾಜಕ್ಕೆ ಮಾದರಿಯಾಗಿದೆ.

ಮಹಿಳೆ ಎಂದರೆ ಕೇವಲ ಒಂದು ಪದವಲ್ಲ, ಅದು ಶಕ್ತಿ, ಪ್ರೀತಿ, ತಾಳ್ಮೆ ಹಾಗು ತ್ಯಾಗದ ಪ್ರತೀಕ. ಆಧುನಿಕ ಸಮಾಜದಲ್ಲಿರೋ ಕಟ್ಟುಪಾಡುಗಳನ್ನೂ ಮೀರಿ ಪ್ರತಿ ಕ್ಷೇತ್ರದಲ್ಲೂ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ.

ಇದನ್ನೂ ಓದಿ: Amruthadhaare Serial: ಗೌತಮ್‌ ಅಸಲಿ ಆಟ, ಜೆಡಿ ಎದೆಯಲ್ಲಿ ನಡುಕ; ಮಲ್ಲಿಗೆ ಕಂಟಕ!

ಮೊದಲೆಲ್ಲ ಪುರುಷರೇ ಆಟೋ ಡ್ರೈವರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಈಗ ತಾನು ಯಾವುದಕ್ಕೂ ಕಮ್ಮಿಯಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಮಹಿಳಾ ಆಟೋ ಮಣಿಯರು ರಸ್ತೆಗೆ ಲಗ್ಗೆಯಿಟ್ಟಿದ್ದಾರೆ. ಮೊದಲೆಲ್ಲ ಪುರುಷರೇ ಆಟೋ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ತಾನು ಕೂಡ ಯಾವುದಕ್ಕೂ ಕಮ್ಮಿಯಿಲ್ಲ ಎಂದಿ ಮಹಿಳಾ ಆಟೋ ಮಣಿಯರು ರಸ್ತೆಗೆ ಕಾಲಿಟ್ಟಿದ್ದಾರೆ.

suvarna sakhi

ಇದೆಲ್ಲದರ ಜೊತೆ ತಮ್ಮ ಕಷ್ಟ, ನೋವು, ಕುಟುಂಬ ಎಲ್ಲವನ್ನು ಬದಿಗಿಟ್ಟು, ಸಮಾಜದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಿರುವ ಬೆಂಗಳೂರಿನ ಒಂದಷ್ಟು ಮಹಿಳಾ ಆಟೋ ಚಾಲಕಿಯರಿಗೆ ಸ್ಟಾರ್ ಸುವರ್ಣ ವಾಹಿನಿಯು ಗೌರವಿಸಿ, ಕಿಟ್ ನೀಡುವುದರೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಬೀತು ಪಡಿಸಿದೆ.

ಇದನ್ನೂ ಓದಿ: Dhurandhar 2 advance booking: 8 ಕೋಟಿ ರೂ. ಬೆಲೆಯ ಟಿಕೆಟ್ ಮಾರಾಟ! ‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌ ಕ್ರೇಜ್‌ ಹೇಗಿದೆ?

'ಸುವರ್ಣ ಸಖಿ' ಎಂಬ ಅದ್ಬುತ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸ್ಟಾರ್ ಸುವರ್ಣ ವಾಹಿನಿಯು ಹೆಮ್ಮೆ ಪಡುತ್ತದೆ.