45 Movie: 45 ಟೈಟಲ್ ನನ್ನದಾಗಿತ್ತು, ಸೌಜನ್ಯಕ್ಕೂ ನನ್ನ ಹೆಸರನ್ನ ಎಲ್ಲೂ ಹೇಳಲಿಲ್ಲ! ಮಿತ್ರ ಬೇಸರ
Actor Mitra : ರಾಜ್ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್‌ಕುಮಾರ್ ಅಭಿನಯದ ‘45’ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿತ್ತು. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಈಗ ಒಟಿಟಿಯಲ್ಲಿಯೂ ಲಭ್ಯವಿದೆ.
45 ಸಿನಿಮಾ -
ರಾಜ್ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್‌ಕುಮಾರ್ ಅಭಿನಯದ ‘45’ ಸಿನಿಮಾ (45 Movie) ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿತ್ತು. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಈಗ ಒಟಿಟಿಯಲ್ಲಿಯೂ (OTT) ಲಭ್ಯವಿದೆ. ಇದೀಗ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಟೈಟಲ್ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ಹಾಗೂ ಕಿರುತೆರೆ ಕಲಾವಿದ ಮಿತ್ರ ಮಾತನಾಡಿದ್ದಾರೆ. ‘ಟೈಟಲ್ ನನ್ನದಾಗಿತ್ತು (Title), ಅವರಿಗೆ ನೀಡಿದ್ದೇನೆ’ ಎಂದಿದ್ದಾರೆ.
ಟೈಟಲ್ ನನ್ನದಾಗಿತ್ತು, ಅವರಿಗೆ ನೀಡಿದ್ದೇನೆ
45 ಸಿನಿಮಾಗೆ ಟೈಟಲ್ ಕೊಟ್ಟಿದ್ದೇ ನಾನು. ಟೈಟಲ್ ನನ್ನದಾಗಿತ್ತು, ಅವರಿಗೆ ನೀಡಿದ್ದೇನೆ. ಒಂದು ದಿನ ನನಗೆ ರೆಡ್ಡಿ ಅವರು ಫೋನ್ ಮಾಡ್ತಾರೆ. ಸರ್ ನನಗೆ ಟೈಟಲ್ ಬೇಕು. ನನ್ನ ಸಿನಿಮಾಗೆ ಪೂರಕವಾಗಿದೆ ಎಂದು. ತೊಂದರೆ ಇಲ್ಲ ಅಂದರೆ ಕೊಡಬಹುದಾ ಕೇಳಿದ್ರು. ಬಳಿಕ ನಾನು ಯಾರು ಡೈರೆಕ್ಟರ್ ಅಂತ ಕೇಳಿದೆ.
ಇದನ್ನೂ ಓದಿ: Gilli Nata: ಬಡವನ ಮುಖವಾಡ ಅಂದವ್ರಿಗೆ ಗಿಲ್ಲಿ ಖಡಕ್ ಕೌಂಟರ್
ಅರ್ಜುನ್ ಜನ್ಯ ಅಂದರು. ನಾನು ಖಂಡಿತ ಮಾಡಿ ಎಂದು ಹೇಳಿದೆ. ದುಡ್ಡೂ ಕೊಡೋಕೆ ಬಂದರು. ನಾನು ಹಣವನ್ನು ತೆಗೆದುಕೊಳ್ಳದೇ, ಒಳ್ಳೆ ಸಿನಿಮಾ ಮಾಡಿ ಅಂತ ಆ ಟೈಟಲ್ ಕೊಟ್ಟೆ. ಎಲ್ಲದಾರೂ ಧನ್ಯವಾದ ಕಾರ್ಡ್ ಹಾಕ್ತಾರೆ ಅಂತ ನಾನು ಕಾದಿದ್ದೆ. ಅದೇನೂ ಮಾಡಿಲ್ಲ. ಆದರೆ ಇದು ನನ್ನ ಬ್ಯಾನರ್‌ನಿಂದ ಕೊಟ್ಟಂತಹ ಟೈಟಲ್. ಆದರೆ ಅರ್ಜುನ್ ಜನ್ಯಾ ಅವರಾದ್ರೂ ಅದನ್ನ ಸ್ಮರಿಸಿಕೊಳ್ತಾರೆ ಅಂತ ಅಂದುಕೊಂಡಿದ್ದೆ. ಆದರೆ ಅದು ಏನೂ ಮಾಡೋಕೆ ಆಗಲ್ಲ. ಪ್ರೀತಿಯಿಂದ ಕೊಟ್ಟಿದ್ದೀನಿ. ಬೇಸರ ಆಗಿದೆ. ಯಾಕೆ ಅಂದರೆ ನಾನು ಕೂಡ ಮನುಷ್ಯನೇ ಅಲ್ವಾ? ಎಂದು ಬೇಸರ ಹೊರ ಹಾಕಿದ್ದಾರೆ.
ಫ್ಯಾಂಟಸಿ ಸಿನಿಮಾ
ಇದೊಂದು ಫ್ಯಾಂಟಸಿ ಸಿನಿಮಾ. ಮನುಷ್ಯನ ಸಾವು, ಸಾವಿನ ನಂತರದ ಆತ್ಮದ ಪ್ರಯಾಣ, ಗರುಡಪುರಾಣ, ವಿಧಿ, ಪಾಪ-ಕರ್ಮ, ಕಾಯುವವನು, ಕೊಲ್ಲುವವನು ಜೊತೆಗೆ ಒಬ್ಬ ನಾರ್ಮಲ್ ಮನುಷ್ಯ.. ಇದೆಲ್ಲವನ್ನು ಇಟ್ಟುಕೊಂಡು, ಒಂದು ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ ಅರ್ಜುನ್ ಜನ್ಯ. ಅವರ ಈ ಕನಸಿಗೆ ಧಾರಾಳವಾಗಿ ಹಣ ಹಾಕಿದ್ದಾರೆ ರಮೇಶ್ ರೆಡ್ಡಿ. ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಹಲವು ಅವತಾರಗಳ ಆಗಮನ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಒಂದೊಂದು ಅವತಾರದಲ್ಲೂ ಎಂಟ್ರಿ ಕೊಡುವಾಗ ಶಿವಣ್ಣ ನಡೆಸುವ ಶಿವ ತಾಂಡವ ಅಭಿಮಾನಿಗಳಿಗೆ ರೊಮಾಂಚನ ನೀಡುತ್ತದೆ.
ಇದನ್ನೂ ಓದಿ: 45 movie OTT: ಕರುನಾಡಲ್ಲಿ ಅಬ್ಬರಿಸಿದ್ದ `45’ ಮೂವಿಯಿಂದ ಗುಡ್ ನ್ಯೂಸ್; ಒಟಿಟಿ ರಿಲೀಸ್ ಡೇಟ್ ಅನೌನ್ಸ್
ಇನ್ನೂ ಉಪೇಂದ್ರ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಯ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ನಟಿಸಿದ್ದಾರೆ. ಈವರೆಗೆ ಎಲ್ಲರೂ ಅರ್ಜುನ್ ಜನ್ಯ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾತ್ರ ನೋಡಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳನ್ನು ಅವರು ಚಿತ್ರರಂಗಕ್ಕೆ ನೀಡಿದ್ದಾರೆ.