ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic movie Trailer: ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್‌

Toxic movie Trailer: ಯಶ್‌ ಮೊದಲ ಬಾರಿಗೆ ಸಿನಿಮಾ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಅಭಿಮಾನಿಗಳು, ಚಿತ್ರತಂಡ ಹಾಗೂ ಸಿನಿಮಾದ ಉದ್ದೇಶದ ಬಗ್ಗೆ ಹಲವು ಕುತೂಹಲಕಾರಿ ಮಾತುಗಳನ್ನು ಹಂಚಿಕೊಂಡಿದ್ದಾರೆ.ಕರ್ನಾಟಕ ಜನತೆ ಕೊಟ್ಟಿರುವ ಶಕ್ತಿ, ಜವಬ್ಧಾರಿ. ಪ್ರತಿ ಸಿನಿಮಾದಲ್ಲೂ ಹಿಟ್‌ ಮಾಡುವಾಗ, ಕೆಲಸ ಮಾಡು ಅಂತ ನೆನಪಿಸುತ್ತೆ. ಕೆಲಸ ಮಾಡುತ್ತ ಮುಂದೆ ಹೆಜ್ಜೆ ಇಟ್ಟಿದ್ದೀನಿ. ಇನ್ನೂ ಮಂದೆ ಹೋಗಲು ನಿಮ್ಮ ಆಶೀರ್ವಾದ ಇರಲಿ ಎಂದರು.

ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್‌

ಯಶ್‌ ಟಾಕ್ಸಿಕ್‌ -

Yashaswi Devadiga
Yashaswi Devadiga Aug 8, 2026 9:17 PM

ಯಶ್ (Yash) ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬೆಂಗಳೂರಿನ ಎಎಂಬಿ ಮಾಲ್​​ನಲ್ಲಿ ಬಿಡುಗಡೆ ಆಗಿದೆ. ನಟ ಯಶ್, ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ನಿರ್​ದೇಶಕಿ ಗೀತು ಮೋಹನ್​​ದಾಸ್, ನಿರ್ಮಾಪಕ ಕೆವಿಎನ್ ವೆಂಕಟ್ ಇನ್ನೂ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಶ್‌ ಮೊದಲ ಬಾರಿಗೆ ಸಿನಿಮಾ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಅಭಿಮಾನಿಗಳು, ಚಿತ್ರತಂಡ ಹಾಗೂ ಸಿನಿಮಾದ ಉದ್ದೇಶದ ಬಗ್ಗೆ ಹಲವು ಕುತೂಹಲಕಾರಿ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದು ಇಂಡಿಯನ್‌ ಸಿನಿಮಾ

ಇದು ಯಾವುದೇ ಕನ್ನಡ, ತಮಿಳು, ತೆಲುಗು ಸಿನಿಮಾ ಅಲ್ಲ. ಇದು ಇಂಡಿಯನ್‌ ಸಿನಿಮಾ. ಇದು ಯಶ್‌ ಸಿನಿಮಾ ಕೂಡ ಅಲ್ಲ. ಇದು ಇಂಡಿಯನ್‌ ಸಿನಿಮಾ. ಇಲ್ಲಿ ಎಲ್ಲ ಅರ್ಹತೆ ಇರೋ ಅನೇಕ ಖ್ಯಾತ ನಟ ನಟಿಯರು ಇದ್ದಾರೆ. ಕರ್ನಾಟಕಕ್ಕೆ ಸ್ವಾಗತ. ಇವತ್ತು ನಾವೆಲ್ಲರೂ ಏನಕ್ಕೆ ಸೇರಿದ್ದೇವೆ ಅಂದ್ರೆ ಅದಕ್ಕ ಮುಖ್ಯ ಕಾರಣ ಕರ್ನಾಟಕ ಜನತೆ.

ಇದನ್ನೂ ಓದಿ: Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'! ʼಟಾಕ್ಸಿಕ್‌ʼ ಟ್ರೈಲರ್‌ ಕಂಡು ದಂಗಾದ್ರು ಫ್ಯಾನ್ಸ್‌

ಕಾಲಕ್ಕೆ ತಕ್ಕಂತೆ ನಡೆಯಬೇಕು

ಕರ್ನಾಟಕ ಜನತೆ ಕೊಟ್ಟಿರುವ ಶಕ್ತಿ, ಜವಬ್ಧಾರಿ. ಪ್ರತಿ ಸಿನಿಮಾದಲ್ಲೂ ಹಿಟ್‌ ಮಾಡುವಾಗ, ಕೆಲಸ ಮಾಡು ಅಂತ ನೆನಪಿಸುತ್ತೆ. ಕೆಲಸ ಮಾಡುತ್ತ ಮುಂದೆ ಹೆಜ್ಜೆ ಇಟ್ಟಿದ್ದೀನಿ. ಇನ್ನೂ ಮಂದೆ ಹೋಗಲು ನಿಮ್ಮ ಆಶೀರ್ವಾದ ಇರಲಿ. ಯಶ್‌ ಮೇಲೆ ನಂಬಿಕೆ ಇರಲಿ. ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು.

ಇವತ್ತಿನ ಯುವ ಪೀಳಿಗೆ ಗೊಂದಲಗಳ ಬಗ್ಗೆ ಇ ಸಿನಿಮಾ ಇದೆ. ಇದು ಕನ್ನಡಿಗರು ಹೆಮ್ಮೆಯಿಂದ ಹೇಳುವಂತ ಸಿನಿಮಾ. ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ. ತಗ್ಗಿಸಲು ನಾವು ಬಿಡಲ್ಲ. ಹೆಮ್ಮೆಯಿಂದ ಸಿನಿಮಾ ನೋಡಿ.



ನಮ್ಮ ಹಿನ್ನೆಲೆ ಏನೇ ಇರಲಿ, ಗುರಿ ದೊಡ್ಡದಾಗಿದ್ದರೆ ಅದನ್ನು ತಲುಪಲು ನಿರಂತರವಾಗಿ ಮುಂದೆ ಸಾಗಬೇಕು. ಸಮಯ ಮತ್ತು ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುನ್ನಡೆಯಬೇಕು ಎಂಬ ಮಾತನ್ನು ಯಶ್‌ ಅಭಿಮಾನಿಗಳಿಗೆ ಹೇಳಿದ್ದಾರೆ. ಟಾಕ್ಸಿಕ್‌’ ಸಿನಿಮಾಕ್ಕಾಗಿ ಸುಮಾರು 200 ದಿನಗಳ ಕಾಲ ಶೂಟಿಂಗ್‌ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕೆಜಿಎಫ್’ ಬಳಿಕ ಕಮರ್ಶಿಯಲ್ ಹಾದಿ ಹಿಡಿಯುವ ಅವಕಾಶ ಇತ್ತು. ಆದರೆ ಭಿನ್ನವಾದುದನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ ಗೀತು ಮೋಹನ್​​ದಾಸ್ ಸಿಕ್ಕರು. ಅವರಲ್ಲಿ ಅದ್ಭುತ ಫ್ಯಾಷನ್ ಇತ್ತು, ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕು ಎಂಬ ಹಠ ಇತ್ತು

ಸಿನಿಮಾ ನಿರ್ಮಾಣದ ಹಾದಿಯಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದವು. ಆದರೆ ಆ ಎಲ್ಲ ಸಮಸ್ಯೆಗಳನ್ನು ಮೀರಿ ‘ಟಾಕ್ಸಿಕ್‌’ ಇದೀಗ ಪ್ರೇಕ್ಷಕರ ಮುಂದೆ ಬರುತ್ತಿದೆ ಎಂದು ಯಶ್‌ ಹೇಳಿದ್ದಾರೆ.

‘ಟಾಕ್ಸಿಕ್’ ಟ್ರೈಲರ್ ನಲ್ಲಿ ಯಶ್ ಅವರನ್ನು ಹಲವು ಆಕರ್ಷಕ ರೂಪಗಳಲ್ಲಿ ನೋಡಬಹುದು. ಕ್ರೈಮ್, ಅಧಿಕಾರ ಮತ್ತು ದ್ರೋಹದ ಅಪಾಯಕಾರಿ ಜಗತ್ತನ್ನು ತೋರಿಸುತ್ತದೆ. ಜೊತೆಗೆ ಸ್ಟೈಲಿಶ್ ಆಕ್ಷನ್ ಸೀನ್‌ಗಳೂ ಇವೆ. ಟ್ರೈಲರ್‌ನಲ್ಲಿ ರೊಮ್ಯಾಂಟಿಕ್ ಭಾಗವೂ ಇದೆ. ಕಥೆಯ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿಲ್ಲ. ಮುಖ್ಯ ವಿವರಗಳನ್ನು ರಹಸ್ಯವಾಗಿ ಇಟ್ಟು, ಟ್ರೈಲರ್ ಯಶ್‌ನ ಪಾತ್ರ ಮತ್ತು ಅವರ ಜಗತ್ತಿನ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಗ್ಯಾಂಗ್‌ಸ್ಟರ್ ಡ್ರಾಮಾ, ರೊಮ್ಯಾನ್ಸ್ ಮತ್ತು ದೊಡ್ಡ ಆಕ್ಷನ್ ಸೇರಿ, ಟಾಕ್ಸಿಕ್ ಯಶ್‌ನ ಹಿಂದಿನ ಚಿತ್ರಗಳಿಗಿಂತ ತುಂಬಾ ವಿಭಿನ್ನವಾಗಿ ಕಂಡಿದ್ದಾರೆ.

ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Toxic Trailer: 'ಟಾಕ್ಸಿಕ್‌' ಟ್ರೈಲರ್‌ ಔಟ್‌ ಆಗುತ್ತಿದ್ದಂತೆ ಈ ಒಂದು ಸೀನ್‌ ಬಗ್ಗೆ ಶುರುವಾಯ್ತು ಚರ್ಚೆ!

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಸಂಕಲನ ಒದಗಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.