ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಿಗ್‌ ಬಾಸ್‌ ಮನೆಯಿಂದ ಲಕ್ಷ್ಮೀ ಗೌಡ ಎಲಿಮಿನೇಟ್‌!

Bigg Boss Kannada 13: ‘ಬಿಗ್‌ ಬಾಸ್‌ ಕನ್ನಡ ಸೀಸನ್‌-13’ (Bigg Boss Kannada 13) ಕಾರ್ಯಕ್ರಮಕ್ಕೆ ಬಂದ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಲಕ್ಷ್ಮೀ ಗೌಡ (Lakshmi Gowda) ಎಲಿಮಿನೇಟ್‌ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಈ ವಾರ ಸ್ಪರ್ಧಿಗಳ ನಡುವೆ ಆಟದ ವಿಚಾರವಾಗಿ ತೀವ್ರ ಪೈಪೋಟಿ ಕಂಡುಬಂದಿತ್ತು. ಸಾಮಾನ್ಯವಾಗಿ ಜಗಳಗಳಿಂದ ಸುದ್ದಿಯಾಗುತ್ತಿದ್ದ ಮನೆ, ಈ ಬಾರಿ ಟಾಸ್ಕ್‌ಗಳ ಮೂಲಕ ಗಮನ ಸೆಳೆದಿದೆ. ಇತ್ತೀಚೆಗೆ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಲಕ್ಷ್ಮೀ, ವಜ್ರ ಕದಿಯುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಿಗ್‌ ಬಾಸ್‌ ಮನೆಯಿಂದ ಲಕ್ಷ್ಮೀ ಗೌಡ ಎಲಿಮಿನೇಟ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 25, 2026 10:44 PM

‘ಬಿಗ್‌ ಬಾಸ್‌ ಕನ್ನಡ ಸೀಸನ್‌-13’ (Bigg Boss Kannada 13) ಕಾರ್ಯಕ್ರಮಕ್ಕೆ ಬಂದ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಲಕ್ಷ್ಮೀ ಗೌಡ (Lakshmi Gowda) ಎಲಿಮಿನೇಟ್‌ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಈ ವಾರ ಸ್ಪರ್ಧಿಗಳ ನಡುವೆ ಆಟದ ವಿಚಾರವಾಗಿ ತೀವ್ರ ಪೈಪೋಟಿ ಕಂಡುಬಂದಿತ್ತು. ಸಾಮಾನ್ಯವಾಗಿ ಜಗಳಗಳಿಂದ ಸುದ್ದಿಯಾಗುತ್ತಿದ್ದ ಮನೆ, ಈ ಬಾರಿ ಟಾಸ್ಕ್‌ಗಳ ಮೂಲಕ ಗಮನ ಸೆಳೆದಿದೆ. ಇತ್ತೀಚೆಗೆ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಲಕ್ಷ್ಮೀ, ವಜ್ರ ಕದಿಯುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟಾಸ್ಕ್‌ನಲ್ಲಿ ಲಕ್ಷ್ಮೀ ತೋರಿದ ಪ್ರದರ್ಶನದಿಂದಾಗಿ ಅವರು ಅಭಿಮಾನಿಗಳ ಗಮನ ಸೆಳೆದಿದ್ದರು.

ಲಕ್ಷ್ಮೀ ಗೌಡ ಅವರು ಮಂಡ್ಯ ಮೂಲದವರು. ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಓರ್ವ ಸಹೋದರ ಕೂಡ ಇದ್ದಾರೆ. ಇಬ್ಬರೂ ಸಿಬ್ಲಿಂಗ್‌ಗಳಿಗೆ ಸಂಬಂಧಪಟ್ಟ ಫನ್‌ ವಿಡಿಯೋ ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು.

ಇದನ್ನೂ ಓದಿ: Bigg Boss Kannada 13: ತಾಂಡವ್‌ ಗೆಳೆತನಕ್ಕೆ ಅರ್ಹರಲ್ಲ ಗಗನ್‌; ನೇರವಾಗಿ ಹೇಳಿದ ಕಿಚ್ಚ

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭಿನಯ ಸಿಕ್ಕಾಪಟ್ಟೆ ಇಷ್ಟ ಪಡುವ ಲಕ್ಷ್ಮೀ ಹಲವು ಕಿರುಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಬಹಳ ವರ್ಷಗಳಿಂದ ಸಹಜವಾಗಿಯೇ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡುವ ಕನಸು ಹೊತ್ತಿದ್ದರು ಲಕ್ಷ್ಮೀ ಗೌಡ.ಲಕ್ಷ್ಮೀ ಅವರು ನೇರವಾಗಿ, ಗಟ್ಟಿ ಧ್ವನಿಯಲ್ಲಿ ಮಾತ್ನಾಡುವುದು ಹಿರಿಯ ನಟಿ ಶ್ರುತಿ ಅವರಿಗೆ ಇಷ್ಟವಾಗಿತ್ತು.

ಗೆಲುವಿಗಾಗಿ ಎರಡೂ ತಂಡಗಳು ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಂಡು ಆಟದಲ್ಲಿ ಭಾಗವಹಿಸಿದವು. ಹೊಸದಾಗಿ ಮನೆಗೆ ಬಂದಿದ್ದರೂ ಆಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಂಡದ ಗೆಲುವಿಗೆ ನೆರವಾಗಲು ಪ್ರಯತ್ನಿಸಿದ್ದರು.