ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijay Deverakonda Rashmika: ʻತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡಿಕೊಳ್ಳಿʼ ಎಂದ ವಿಜಯ್‌ ದೇವರಕೊಂಡ

Vijay Deverakonda Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಉದಯಪುರದಲ್ಲಿ ವಿವಾಹ ಆದರು. ಹೈದರಾಬಾದ್‌ ತಾಜ್ ಕೃಷ್ಣ ಹೋಟೆಲ್‌ನಲ್ಲಿ 'ವಿರೋಷ್' ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮದುವೆ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ. ಅದ್ಧೂರಿ ರಿಸೆಪ್ಷನ್ ಪಾರ್ಟಿಗೂ ಮುನ್ನ ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದೆ. ಈ ಸಂದರ್ಭದಲ್ಲಿ ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ ಎಂದಿದ್ದಾರೆ ವಿಜಯ್‌ ದೇವರಕೊಂಡ.

ʻತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆʼ ಎಂದ ವಿಜಯ್‌!

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Mar 4, 2026 6:24 PM

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಉದಯಪುರದಲ್ಲಿ ವಿವಾಹ ಆದರು. ಹೈದರಾಬಾದ್‌ ತಾಜ್ ಕೃಷ್ಣ ಹೋಟೆಲ್‌ನಲ್ಲಿ 'ವಿರೋಷ್' (Virosh) ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮದುವೆ ಬಳಿಕ ವಿಜಯ್ ದೇವರಕೊಂಡ (Vijay Devarkonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ದಂಪತಿ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ. ಅದ್ಧೂರಿ ರಿಸೆಪ್ಷನ್ ಪಾರ್ಟಿಗೂ ಮುನ್ನ ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದೆ. ಈ ಸಂದರ್ಭದಲ್ಲಿ ತೆಲುಗು (Telugu State) ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ ಎಂದಿದ್ದಾರೆ ವಿಜಯ್‌ ದೇವರಕೊಂಡ.

ಮಾಧ್ಯಮದ ಮುಂದೆ ವಿಜಯ್‌ ದೇವರಕೊಂಡ ಹೇಳಿದ್ದೇನು?

ಹಳದಿ ಕುರ್ತಾದಲ್ಲಿ ಕಾಣಿಸಿಕೊಂಡ ವಿಜಯ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, "ನಾನು ಚಿಕ್ಕವನಿದ್ದಾಗಿನಿಂದ ನೀವು ನನ್ನನ್ನು ನೋಡುತ್ತಿದ್ದೀರಿ, ಚಲನಚಿತ್ರಗಳು, ಸಂದರ್ಶನಗಳು, ಫೋಟೋಶೂಟ್‌ಗಳ ಮೂಲಕ ನಾನು ಬೆಳೆಯುವುದನ್ನು ನೋಡಿದ್ದೀರಿ. ನಾನು ನನ್ನ ವೃತ್ತಿಜೀವನದ ಆರಂಭದಲ್ಲಿದ್ದಾಗ, ಈ ಎಲ್ಲಾ ಸಂದರ್ಶನಗಳು ಮುಖ್ಯವಾಗಿದ್ದವು" ಎಂದು ಹೇಳಿದರು.

ಇದನ್ನೂ ಓದಿ: Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

ತೆಲುಗು ಪತ್ರಿಕೆಗಳು ತಮಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಿವೆ ಎಂದು ಅವರು ಒಪ್ಪಿಕೊಂಡರು ಮತ್ತು "ನನ್ನ ಪ್ರತಿಯೊಂದು ಪ್ರಯಾಣದ ಭಾಗವಾಗಿದ್ದೀರಿ. ಇಂದು, ನಾನು ಮದುವೆಯಾದಾಗ, ನೀವು ಇಲ್ಲಿದ್ದೀರಿ. ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ ಎಂದಿದ್ದಾರೆ ವಿಜಯ್‌ ದೇವರಕೊಂಡ. ಈ ಕಾಮೆಂಟ್‌ಗೆ ವಿಜಯ್ ಪಕ್ಕದಲ್ಲಿ ನಿಂತಿದ್ದ ರಶ್ಮಿಕಾ ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ನಾಚಿಕೊಂಡು ಅವರತ್ತ ನೋಡಿದರು.



ನಾವು ಇಷ್ಟು ದೊಡ್ಡ ಹೆಜ್ಜೆ ಇಡುತ್ತಿರುವುದು ಇದೇ ಮೊದಲು, ಆದ್ದರಿಂದ ಹೊಸ ಜೀವನವನ್ನು ಪ್ರಾರಂಭಿಸಲು ನಿಮ್ಮೆಲ್ಲರ ಆಶೀರ್ವಾದವನ್ನು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.

ಉದಯ್‌ಪುರದಲ್ಲಿ ಅದ್ದೂರಿಯಾಗಿ ಮದುವೆ

ಇದಕ್ಕೂ ಮೊದಲು, ದಂಪತಿ ಅಭಿಮಾನಿಗಳೊಂದಿಗೆ ಊಟ ಕೂಡ ಮಾಡಿದ್ದಾರೆ ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು. ಕೆಲವೇ ಆಪ್ತರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು. ಬಳಿಕ ಮದುವೆ ಫೋಟೊಗಳನ್ನು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಅದು ಸಿಕ್ಕಾಪಟ್ಟೆ ವೈರಲ್ ಆಗಿ ದಾಖಲೆ ಬರೆದಿದೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭಾನುವಾರ (ಮಾ.1) ಭೇಟಿ ನೀಡಿದ್ದ ವಿಜಯ್‌ ಮತ್ತು ರಶ್ಮಿಕಾ, ಅಭಿಮಾನಿಗಳಿಗೆ ಸಿಹಿ ಹಂಚಿದ್ದರು. ನಂತರ ಅಲ್ಲು ಸ್ಟುಡಿಯೋದಲ್ಲಿ ಆಯೋಜಿಸಿದ್ದ ಅಲ್ಲು ಅರ್ಜುನ್‌ ಸಹೋದರ ಅಲ್ಲು ಸಿರೀಶ್ ಅವರ‌ ವರಪೂಜೆಗೆ ಈ ಜೋಡಿ ಹೋಗಿತ್ತು.

ಇದನ್ನೂ ಓದಿ: Karna Serial Kannada: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ? ಕರ್ಣನ ಮುಂದಿನ ಹೆಜ್ಜೆ ಏನು?

ಅಲ್ಲಿ ಕೆಲ ಹೊತ್ತು ಅಲ್ಲು ಕುಟುಂಬದ ಜೊತೆಗೆ ಸಮಯ ಕಳೆದಿತ್ತು ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅವರ ವಿವಾಹದ ಆರತಕ್ಷತೆ ನಡೆಯಲಿದ್ದು, ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ ಎಂದು ತಿಳಿಸಲಾಗಿದೆ.