ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ನಟಿ ರಕ್ಷಿತಾ ಪ್ರೇಮ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಮಂಗಳವಾರ (ಜುಲೈ 21) ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಖ್ಯಾತ ನಟಿ ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಪ್ರತ್ಯೇಕ ಕಾರುಗಳಲ್ಲಿ ಬಂದ ಇಬ್ಬರು ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ.

ದರ್ಶನ್ ನೋಡಲು ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ-ನಟಿ ರಕ್ಷಿತಾ ಪ್ರೇಮ್‌

-

Avinash GR
Avinash GR Jul 21, 2026 5:21 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಖ್ಯಾತ ನಟಿ ರಕ್ಷಿತಾ ಪ್ರೇಮ್ ಮಂಗಳವಾರ (ಜುಲೈ 21) ಆಗಮಿಸಿದ್ದರು.

ಇತ್ತೀಚೆಗಷ್ಟೇ ಮಗನ ಜೊತೆ ಜೈಲಿಗೆ ತೆರಳಿ ತಮ್ಮ ವಿವಾಹ ವಾರ್ಷಿಕೋತ್ಸವದ (ಆ್ಯನಿವರ್ಸರಿ) ಸಮಯದಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದ ವಿಜಯಲಕ್ಷ್ಮಿ, ಇದೀಗ ಮತ್ತೊಮ್ಮೆ ಗಂಡನನ್ನು ನೋಡಲು ಬಂದಿದ್ದಾರೆ. ಅವರೊಂದಿಗೆ ನಟಿ ರಕ್ಷಿತಾ ಪ್ರೇಮ್ ಕೂಡ ದರ್ಶನ್ ಭೇಟಿಗೆ ಬಂದಿರುವುದು ಕುತೂಹಲ ಮೂಡಿಸಿದೆ.

ಪ್ರತ್ಯೇಕ ಕಾರುಗಳಲ್ಲಿ ಜೈಲಿಗೆ ಆಗಮನ

ನಟಿ ರಕ್ಷಿತಾ ಪ್ರೇಮ್ ಹಾಗೂ ವಿಜಯಲಕ್ಷ್ಮಿ ಅವರು ಎರಡು ಪ್ರತ್ಯೇಕ ಕಾರುಗಳಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದರು. ರಕ್ಷಿತಾ ಪ್ರೇಮ್ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಜೈಲಿಗೆ ಆಗಮಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಒಮ್ಮೆ ಅವರು ಪತಿ ಪ್ರೇಮ್‌ ಅವರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿ, ದರ್ಶನ್‌ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗಿದ್ದರು. ಸದ್ಯ ರಕ್ಷಿತಾ ಅವರು ಯಾವ ಕಾರಣಕ್ಕಾಗಿ ಆಗಮಿಸಿದ್ದರು. ಇಬ್ಬರ ನಡುವೆ ಏನು ಮಾತುಕತೆ ಆಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ವಿಜಯಲಕ್ಷ್ಮಿ ಪೋಸ್ಟ್

ಈಚೆಗೆ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗಿತ್ತು. ದರ್ಶನ್ ಅವರೊಂದಿಗಿನ ವೈಟ್ ಅಂಡ್ ಬ್ಲಾಕ್ ಫೋಟೊವೊಂದನ್ನು ಶೇರ್ ಮಾಡಿದ್ದ ಅವರು, "ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು" ಎಂದು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದರು. ಈ ಪೋಸ್ಟ್ ನೋಡಿ ದರ್ಶನ್ ಅಭಿಮಾನಿಗಳು ಭಾವುಕರಾಗಿದ್ದರು ಮತ್ತು ಈ ಕಷ್ಟದ ಸಮಯದಲ್ಲಿ ಗಂಡನ ಜೊತೆ ಗಟ್ಟಿಯಾಗಿ ನಿಂತಿರುವ ವಿಜಯಲಕ್ಷ್ಮಿ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Actor Darshan: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕಾರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ನಟ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಪ್ರಾಥಮಿಕ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ 'ವಿಚಾರಣೆಗೆ ಅರ್ಹವಲ್ಲ' ಎಂದು ಹೇಳಿ ಆರಂಭದಲ್ಲೇ ತಿರಸ್ಕರಿಸಿತ್ತು. ಅರ್ಜಿಯು ನ್ಯಾಯಾಲಯದ ವಿಚಾರಣೆಯ ಹಂತವನ್ನೇ ತಲುಪದೆ ಆರಂಭದಲ್ಲೇ ತಿರಸ್ಕೃತಗೊಂಡಿದ್ದರಿಂದ, ಇದನ್ನು ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ದರ್ಶನ್‌ ಪರ ವಕೀಲರಿಗೆ ತಿಳಿಸಲಾಗಿತ್ತು. ಇದರಿಂದಾಗಿ ದರ್ಶನ್ ಅವರ ಜಾಮೀನು ಪಡೆಯುವ ಮತ್ತೊಂದು ಪ್ರಯತ್ನಕ್ಕೆ ಹಿನ್ನಡೆ ಆಗಿತ್ತು.