ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KD Movie: ‘ಸರ್ಸೆ ನಿನ್ನ ಸೆರಗ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ; ಪ್ರೇಮ್ ವಿರುದ್ಧ ಜನರು ಗರಂ

Director Prem: ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿʼ ಸಿನಿಮಾದ ಹೊಸ ಹಾಡು ಔಟ್‌ ಆಗಿರೋದು ಗೊತ್ತೇ ಇದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿರುವ ‘ಸೆರಗ ಸರ್ಸೆ’ ಹಾಡು ಲಿರಿಕಲ್ ಹಾಡಾಗಿದ್ದು, ಹಾಡಿನ ವಿಡಿಯೋಗಳು ಕಡಿಮೆ ಇವೆ. ಈ ಹಾಡಿನಲ್ಲಿ ನೋರಾ ಫತೇಹಿ ಅವರು ಡ್ಯಾನ್ಸ್ ಮಾಡಿದ್ದಾರೆ. ಆದ್ದರಿಂದ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಇವರೊಂದಿಗೆ ಬಾಲಿವುಡ್‌ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಹಾಗೇ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 'ಕೆಡಿ' ಸಿನಿಮಾದ ನಾಲ್ಕನೇ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ.

‘ಸರ್ಸೆ ನಿನ್ನ ಸೆರಗ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ!

ಕೆಡಿ ಸಿನಿಮಾ -

Yashaswi Devadiga
Yashaswi Devadiga Mar 17, 2026 9:55 AM

ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿʼ ಸಿನಿಮಾದ (KD Cinema) ಹೊಸ ಹಾಡು ಔಟ್‌ ಆಗಿರೋದು ಗೊತ್ತೇ ಇದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿರುವ ‘ಸೆರಗ ಸರ್ಸೆ’ ಹಾಡು ಲಿರಿಕಲ್ ಹಾಡಾಗಿದ್ದು, ಹಾಡಿನ ವಿಡಿಯೋಗಳು ಕಡಿಮೆ ಇವೆ. ಈ ಹಾಡಿನಲ್ಲಿ ನೋರಾ ಫತೇಹಿ (Nora Fatehi) ಅವರು ಡ್ಯಾನ್ಸ್ ಮಾಡಿದ್ದಾರೆ. ಆದ್ದರಿಂದ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಇವರೊಂದಿಗೆ ಬಾಲಿವುಡ್‌ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಹಾಗೇ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 'ಕೆಡಿ' ಸಿನಿಮಾದ ನಾಲ್ಕನೇ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ.

ಹಿಂದಿ ವರ್ಷನ್​ಗೂ ಆಕ್ರೋಶ

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ನಿರ್ದೇಶಕ ಪ್ರೇಮ್ ಅವರು ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಅವರು ಹಾಡಿದ್ದಾರೆ. ಹಿಂದಿ ವರ್ಷನ್​ಗೆ ರಖೀಬ್ ಆಲಂ ಅವರು ಸಾಹಿತ್ಯ ಬರೆದಿದ್ದು, ಮಂಗ್ಲಿ ಧ್ವನಿ ನೀಡಿದ್ದಾರೆ. ಹಾಡುಗಳನ್ನು ತೀರಾ ಕಮರ್ಷಿಯಲ್ ಮಾಡುವುದಕ್ಕೆ ಹೋಗಿ ಜನರ ಆಕ್ರೋಶವನ್ನು ಎದುರಿಸಬೇಕಾಗಿದೆ.

ಇದನ್ನೂ ಓದಿ: Khushbu Sundar: ತ್ರಿಶಾ ಅತ್ಯಂತ ಸೌಮ್ಯ ಸ್ವಭಾವದವರು; ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್

ಸಿನಿಮಾದ ಸಾಹಿತ್ಯ ಹಾಗೂ ನಟಿ ನೂರಾ ಫತೇಹಿಯ ಕಾಸ್ಟ್ಯೂಮ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. 'ಕೆಡಿ ದಿ ಡೆವಿಲ್' ಸಿನಿಮಾದಿಂದ ನಮ್ಮ ಚಿತ್ರರಂಗಕ್ಕೆ ನೀವೇನು ಮಾಡುತ್ತಿದ್ದೀರಾ? ದಯವಿಟ್ಟು ನೀವು ನಿವೃತ್ತಿ ತೆಗೆದುಕೊಂಡು ಚಿತ್ರರಂಗವನ್ನು ಕಾಪಾಡಿ ಎಂದು ಎಂದು ಬರೆದುಕೊಂಡಿದ್ದಾರೆ ನೆಟ್ಟಿಗರು.

‘ಇಷ್ಟು ಕಳಪೆ ಸಾಹಿತ್ಯದ ಹಾಡು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಉತ್ತಮ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕಳಪೆ ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು. ಪ್ರೇಮ್ ಅವರೇ, ನಿಮ್ಮ ಮೇಲೆ ಗೌರವ ಇದೆ. ಆದರೆ ಕನ್ನಡಕ್ಕೆ ಇಂಥ ಹಾಡು ಬೇಡ’ ಎಂಬಿತ್ಯಾದಿಯಾಗಿ ಪ್ರೇಕ್ಷಕರು ಕಮೆಂಟ್ ಮಾಡಿದ್ದಾರೆ.



ಹಿಂದಿಯಲ್ಲಿ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ನೇರವಾಗಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: Puneeth Birthday: ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್‌ ಹಾಕುತ್ತಿದ್ರಂತೆ ಪುನೀತ್ ! ಏನದು?

ಜೋಗಿ ಪ್ರೇಮ್ ನಿರ್ದೇಶನ 'ಕೆಡಿ ದಿ ಡೆವಿಲ್' ಬಿಡುಗಡೆಗೆ ರೆಡಿಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.