Yash: ಸುದೀಪ್ ಮೆಚ್ಚುಗೆಗೆ ಉತ್ತರಿಸಿದ ಯಶ್! ನೀವು ನನ್ನ ಹಿರಿಯರು ಎಂದ ರಾಕಿಂಗ್ ಸ್ಟಾರ್
Sudeep Yash: ʻರಾಕಿಂಗ್ ಸ್ಟಾರ್ʼ ಯಶ್ ಅವರ ಹೊಸ ಸಿನಿಮಾ ʻಟಾಕ್ಸಿಕ್ʼ ಸ್ಪೆಷಲ್ ಟೀಸರ್ ರಿಲೀಸ್ ಆಗಿರೋದು ಗೊತ್ತೇ ಇದೆ. ಟೀಸರ್‌ನಲ್ಲಿರುವ ಯಶ್ ಬೋಲ್ಡ್ ಅವತಾರ ಎಲ್ಲರ ಗಮನಸೆಳೆದಿತ್ತು. ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಅನ್ನು ಈ ಟೀಸರ್ ಪಡೆದುಕೊಂಡಿರುವುದು ವಿಶೇಷ. ಟೀಸರ್ ನೋಡಿ, ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಟ್ವೀಟ್ಗೆ ಯಶ್ಪ್ರ ತಿಕ್ರಿಯೆ ನೀಡಿದ್ದಾರೆ.
ಯಶ್ ಸುದೀಪ್ -
ʻರಾಕಿಂಗ್ ಸ್ಟಾರ್ʼ ಯಶ್ (Yash Movie) ಅವರ ಹೊಸ ಸಿನಿಮಾ ʻಟಾಕ್ಸಿಕ್ʼ (Toxic Cinema) ಸ್ಪೆಷಲ್ ಟೀಸರ್ ರಿಲೀಸ್ ಆಗಿರೋದು ಗೊತ್ತೇ ಇದೆ. ಟೀಸರ್‌ನಲ್ಲಿರುವ ಯಶ್ ಬೋಲ್ಡ್ ಅವತಾರ ಎಲ್ಲರ ಗಮನಸೆಳೆದಿತ್ತು. ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಅನ್ನು ಈ ಟೀಸರ್ ಪಡೆದುಕೊಂಡಿರುವುದು ವಿಶೇಷ. ಟೀಸರ್ ನೋಡಿ, ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಟ್ವೀಟ್ಗೆ ಯಶ್ (yash) ಪ್ರತಿಕ್ರಿಯೆ ನೀಡಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್
"ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕಾಗುತ್ತದೆ. ನೀವು ಇಟ್ಟಿರುವ ಈ ಹೊಸ ಹೆಜ್ಜೆಯು, ನೀವು ಗುರಿಯಾಗಿಸಿಕೊಂಡಿರುವ ಆ ಗಮ್ಯಸ್ಥಾನಕ್ಕೆ ನಿಮ್ಮನ್ನು ಇನ್ನಷ್ಟು ಹತ್ತಿರವಾಗಿಸಲಿ. ಯಶಸ್ಸಿನ ಹಾದಿಯಲ್ಲಿ ಹೀಗೆಯೇ ಸಾಗಲಿ" ಎಂದು ಕಿಚ್ಚ ಸುದೀಪ್ ಅವರು ಕೊಂಡಾಡಿದ್ದರು.
ಇದನ್ನೂ ಓದಿ: Bigg Boss Kannada 12: ಮಲ್ಲಮ್ಮ ಬಗ್ಗೆ ಧ್ರುವಂತ್ ಅಸಮಾಧಾನ! ನನಗೆ ನೀವು, ನಿಮಗೆ ನಾನು ಎಂದ ಅಶ್ವಿನಿ
ಯಶ್ ಪರಪಸ್ಪರ ಪ್ರತಿಕ್ರಿಯೆ
ಇದಕ್ಕೆ ಯಶ್ ಪ್ರತಿಕ್ರಿಯಿಸಿ ‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’ ಎಂದು ಅವರು ಉತ್ತರಿಸಿದ್ದಾರೆ. ಸುದೀಪ್ ಹಾಗೂ ಯಶ್ ಪರಪಸ್ಪರ ಪ್ರತಿಕ್ರಿಯೆ ನೀಡಿಕೊಂಡ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ.
Thank you, sir. One thing I have learnt from my seniors, yourself among them, is the drive to elevate the craft with focus, honesty and courage.🙂
— Yash (@TheNameIsYash) January 11, 2026
ಸುದೀಪ್ ಮಾತ್ರವಲ್ಲದೇ ಈ ಮುಂಚೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟಾಕ್ಸಿಕ್‌ಗೆ ಮನಸಾರೆ ಹೊಗಳಿದ್ದರು. "ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಅವತಾರ ಮತ್ತು ಟ್ರೈಲರ್ ನೋಡಿದ ಮೇಲೆ, ಗೀತು ಮೋಹನ್‌ದಾಸ್ ಅವರು 'ಮಹಿಳಾ ಸಬಲೀಕರಣ'ದ ಪರಮ ಸಂಕೇತ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: Bigg Boss Kannada 12: ಧನುಷ್ ಗೌಡ ಪ್ರಕಾರ ಇವರು ಮಿಡ್ ವೀಕ್ ಎಲಿಮಿನೇಟ್ ಆಗ್ತಾರಂತೆ! ಯಾರದು?
ಈ ಮಹಿಳಾ ನಿರ್ದೇಶಕಿಯ ಶಕ್ತಿಗೆ ಹೋಲಿಸಿದರೆ ಯಾವ ಪುರುಷ ನಿರ್ದೇಶಕರೂ ಸಾಟಿಯಿಲ್ಲ.. ಅವರು ಈ ಮಟ್ಟಕ್ಕೆ ಚಿತ್ರೀಕರಿಸಿದ್ದಾರೆ ಎನ್ನುವುದನ್ನು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ" ಎಂದು ಆರ್‌ಜಿವಿ ಹೊಗಳಿದ್ದರು.