ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic postponed: 'ಟಾಕ್ಸಿಕ್' ಮತ್ತೆ ಮುಂದೂಡಿಕೆ; ಯಶ್‌ ಕೊಟ್ಟೇ ಬಿಟ್ರು ಅಧಿಕೃತ ಮಾಹಿತಿ

Toxic postponed:ಇಷ್ಟೊತ್ತಿಗಾಗಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರಣ ನೀಡಿ ಮುಂದೂಡಲಾಗಿತ್ತು. ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾದ ಬಾಕ್ಸಾಫೀಸ್‌ ರಿಸಲ್ಟ್ ಹೊರ ಬೀಳುತ್ತಿತ್ತು. 'ಟಾಕ್ಸಿಕ್' ಸಿನಿಮಾ ಜೂನ್ 4ರಂದೂ ರಿಲೀಸ್ ಆಗುವುದು ಅನುಮಾನ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಈ ಅಂತೆ ಕಂತೆಗೆ ಸ್ವತಃ ಯಶ್‌ ಈಗ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಪೋಸ್ಟ್‌ ಏನು?

'ಟಾಕ್ಸಿಕ್' ಮತ್ತೆ ಮುಂದೂಡಿಕೆ; ಯಶ್‌ ಕೊಟ್ಟೇ ಬಿಟ್ರು ಅಧಿಕೃತ ಮಾಹಿತಿ

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Apr 29, 2026 10:55 AM

'ಟಾಕ್ಸಿಕ್' (Toxic Movie) ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ರಾಕಿಂಗ್ ಸ್ಟಾರ್ ಯಶ್ (Rocking Star Yash) 'ಟಾಕ್ಸಿಕ್'ಗಾಗಿ ಕೇವಲ ಕನ್ನಡಿಗರಷ್ಟೇ ಅಲ್ಲ, ಇಡೀ ದೇಶವೇ ಕಾಯುತ್ತಿದೆ. ಈ ಕಾರಣಕ್ಕೆ ಯಶ್ (Yash) ಹಾಗೂ ಅವರ ತಂಡ ಸಿನಿಮಾವನ್ನು ಸರಿಯಾದ ಸಮಯಕ್ಕೆ ರಿಲೀಸ್ ಮಾಡುವುದಕ್ಕೆ ಎದುರು ನೋಡುತ್ತಿದೆ. 'ಟಾಕ್ಸಿಕ್' ಸಿನಿಮಾ ಜೂನ್ 4ರಂದೂ ರಿಲೀಸ್ (Release) ಆಗುವುದು ಅನುಮಾನ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಈ ಅಂತೆ ಕಂತೆಗೆ ಸ್ವತಃ ಯಶ್‌ ಈಗ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಪೋಸ್ಟ್‌ ಏನು?

ಯಶ್‌ ಪೋಸ್ಟ್‌ನಲ್ಲಿ, ನಾವು ಮಾಡುವ ಕೆಲವು ಸಿನಿಮಾಗಳು ಇರುತ್ತವೆ. ಆದರೆ ಕೆಲವು ಸಿನಿಮಾಗಳು ನಮಗೆ ಸಿನಿಮಾ ಮೇಲಿನ ಪ್ರೀತಿ ಏಕೆ ಬಂತು ಎಂಬುದನ್ನು ನೆನಪಿಸುತ್ತವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ. ಸಿನಿಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಜಗತ್ತಿನಾದ್ಯಂತ ಬಂದ ಭಾರೀ ಪ್ರತಿಕ್ರಿಯೆ ನಮಗೆ ನಾವು ಏನು ನಂಬಿದ್ದೇವೆ ಅದು ಖಚಿತಪಡಿಸಿತು. ಈ ಚಿತ್ರವು ವಿಶ್ವದಾದ್ಯಂತ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಎಂದು.

ಇದನ್ನೂ ಓದಿ: Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

ಜೂನ್ 4ರಂದು ಬಿಡುಗಡೆ ಮಾಡುತ್ತಿಲ್ಲ

ಟಾಕ್ಸಿಕ್ ಸಿನಿಮಾ ಪೂರ್ಣಗೊಂಡಿದೆ. ಪ್ರಸ್ತುತ ನಾವು ಜಾಗತಿಕ ವಿತರಣೆ ಮತ್ತು ಪಾಲುದಾರಿಕೆಗಳನ್ನು ಸರಿಹೊಂದಿಸುತ್ತಿದ್ದೇವೆ. ಇದರಿಂದಾಗಿ ನಾವು ನಮ್ಮ ಬಿಡುಗಡೆಯ ಸಮಯವನ್ನು ಸ್ವಲ್ಪ ಬದಲಾಯಿಸಲು ನಿರ್ಧರಿಸಿದ್ದೇವೆ. ಹಿಂದೆ ಘೋಷಿಸಿದಂತೆ ಜೂನ್ 4ರಂದು ಬಿಡುಗಡೆ ಮಾಡುತ್ತಿಲ್ಲ, ಆದರೆ ಜಗತ್ತಿನಾದ್ಯಂತ ಸರಿಹೊಂದುವ ಮತ್ತೊಂದು ದಿನಾಂಕದಲ್ಲಿ ಬಿಡುಗಡೆ ಮಾಡುತ್ತೇವೆ.

ಟಾಕ್ಸಿಕ್ ಶೀಘ್ರದಲ್ಲೇ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬರುತ್ತದೆ. ಭಾರತೀಯ ಸಿನಿಮಾ ತನ್ನ ಧ್ವನಿಯನ್ನು ಕಂಡುಕೊಳ್ಳುತ್ತಿರುವ ಮತ್ತು ಜಾಗತಿಕ ವೇದಿಕೆಗೆ ಹೆಜ್ಜೆ ಇಡುತ್ತಿರುವ ಈ ಸಮಯದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಮಟ್ಟವನ್ನು ಎತ್ತರಿಸುವ ಜವಾಬ್ದಾರಿ ಇದೆ. ನಟ-ನಿರ್ಮಾಪಕನಾಗಿ, ಈ ಕ್ಷಣವನ್ನು ನಾನು ಭಾರತೀಯ ಸಿನಿಮಾ ಉದ್ಯಮಕ್ಕೆ ಮತ್ತು ನಮ್ಮೆಲ್ಲರಿಗೂ ನನ್ನ ಕೊಡುಗೆಯನ್ನು ನೀಡುವ ಅವಕಾಶವಾಗಿ ನೋಡುತ್ತಿದ್ದೇನೆ. ಸಮಯ ಕೊಟ್ಟು ನಮ್ಮ ಚಿತ್ರವು ಜಗತ್ತಿಗೆ ಅದಕ್ಕೆ ತಕ್ಕ ಪ್ರಭಾವದೊಂದಿಗೆ ತಲುಪುವಂತೆ ಮಾಡುತ್ತಿದ್ದೇನೆ.

ಪ್ರತಿ ಹಂತದಲ್ಲೂ, ಪ್ರತಿ ಬದಲಾವಣೆಯಲ್ಲೂ ನಿಮ್ಮ ಬೆಂಬಲ ನನ್ನ ಜೊತೆಯಲ್ಲೇ ಇದೆ. ಆ ಬೆಂಬಲವನ್ನು ನಾನು ಕೃತಜ್ಞತೆಯೊಂದಿಗೆ ಸ್ವೀಕರಿಸುತ್ತೇನೆ. ಕೆಲವು ಕಥೆಗಳು ತಾಳ್ಮೆಯನ್ನು ಕೇಳುತ್ತವೆ. ಕೆಲವು ಪ್ರಯಾಣಗಳು ತಾಳ್ಮೆಯನ್ನು ಒತ್ತಾಯಿಸುತ್ತವೆ. ನಾವು ನಿಮಗೆ ಒಂದು ಆನಂದಿಸುವ, ಆಚರಿಸುವ ಚಿತ್ರವನ್ನು ನೀಡುವುದಾಗಿ ವಾಗ್ದಾನ ಮಾಡುತ್ತೇವೆ. ಅದು ಕೂಡ ಭಾರತೀಯ ಸಿನಿಮಾಗೆ ಹೆಮ್ಮೆಯ ಕ್ಷಣವಾಗುವಂತಹ ಚಿತ್ರವನ್ನು . ನಿಮ್ಮ ಯಶ್ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್! ಕೊನೆಗೂ ಶಕುಂತಲಾಗೆ ಈ ಜೋಡಿಯೇ ಆಸರೆ

ಇಷ್ಟೊತ್ತಿಗಾಗಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರಣ ನೀಡಿ ಮುಂದೂಡಲಾಗಿತ್ತು. ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾದ ಬಾಕ್ಸಾಫೀಸ್‌ ರಿಸಲ್ಟ್ ಹೊರ ಬೀಳುತ್ತಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಈಗ ಕೊನೆಗೂ ಫ್ಯಾನ್ಸ್‌ ಕ್ಲಾರಿಟಿ ಕೊಟ್ಟಿದ್ದಾರೆ.