ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash's Toxic Postponed: ʻಧುರಂಧರ್‌ 2ʼ ಚಿತ್ರಕ್ಕೆ ಸುಗಮವಾಯ್ತು ಹಾದಿ, ಬಾಕ್ಸ್‌ ಆಫೀಸ್‌ನಲ್ಲಿ ರಣವೀರ್‌ ಸಿಂಗ್ ಅಬ್ಬರ ಗ್ಯಾರಂಟಿ!

Yash Toxic Postponed: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕವನ್ನು ಮಾ.19 ರಿಂದ ಜೂನ್ 4ಕ್ಕೆ ಮುಂದೂಡಲಾಗಿದೆ. ಮಧ್ಯಪ್ರಾಚ್ಯದ ಅನಿಶ್ಚಿತತೆಯ ಕಾರಣ ನೀಡಿರುವ ಚಿತ್ರತಂಡದ ಈ ನಿರ್ಧಾರದಿಂದಾಗಿ, ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಎದುರಾಳಿಗಳೇ ಇಲ್ಲದಂತಾಗಿದೆ.

Dhurandhar 2: ಯಶ್ ಫ್ಯಾನ್ಸ್‌ಗೆ ನಿರಾಸೆ, ರಣವೀರ್‌ಗೆ ಜಾಕ್‌ಪಾಟ್!

-

Avinash GR
Avinash GR Mar 4, 2026 12:18 PM

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಟೀಮ್‌ ಬುಧವಾರ (ಮಾ.4) ಬೆಳ್ಳಂಬೆಳಗ್ಗೆ ಶಾಕ್‌ ನೀಡಿದೆ. ಇನ್ನೇನು ಸಿನಿಮಾ ತೆರೆಗೆ ಬರಲು 15 ದಿನಗಳು ಬಾಕಿ ಇವೆ ಎಂದುಕೊಂಡಿರುವಾಗಲೇ ಚಿತ್ರತಂಡ ಪೋಸ್ಟ್‌ಪೋನ್‌ ಮಾಡಿದೆ. ಮಾ.19ರ ಬದಲು ಜೂನ್‌ 4ರಂದು ಟಾಕ್ಸಿಕ್‌ ಸಿನಿಮಾ ತೆರೆಕಾಣಲಿದೆ. ಇದರಿಂದ ಯಶ್‌ ಅಭಿಮಾನಿಗಳಿಗಂತೂ ತೀವ್ರ ನಿರಾಸೆ ಆಗಿದೆ. ಆದರೆ ಅತ್ತ ಬಾಲಿವುಡ್‌ನಲ್ಲಿ ಸಂಭ್ರಮ ಜೋರಾಗಿದೆ.

ಧುರಂಧರ್‌ 2 ಹಾದಿ ಸುಗಮ

ಮಾ.19ರಂದೇ ʻಧುರಂಧರ್‌ 2ʼ ಸಿನಿಮಾ ತೆರೆಗೆ ಬರುವುದಾಗಿ ಘೋಷಣೆ ಮಾಡಿತ್ತು. ಅಂದು ಎರಡು (ಟಾಕ್ಸಿಕ್‌ ವರ್ಸಸ್‌ ಧುರಂಧರ್‌ 2) ದೊಡ್ಡ ಸಿನಿಮಾಗಳ ನಡುವೆ ಬಿಗ್‌ ಫೈಟ್‌ ಎದುರಾಗಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂದುಕೊಂಡಿದ್ದೆಲ್ಲಾ ಸುಳ್ಳಾಗಿದೆ. ‌ʻಟಾಕ್ಸಿಕ್ʼ ಫೋಸ್ಟ್‌ಪೋನ್‌ ಆಗಿದ್ದರಿಂದ ಧುರಂಧರ್‌ 2 ಸಿನಿಮಾ ಬಿಡುಗಡೆ ಸಲೀಸಾಗಿದೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

"ಹಲವು ವರ್ಷಗಳ ಶ್ರಮದ ನಂತರ, ನಮ್ಮ ಟಾಕ್ಸಿಕ್‌ ಚಿತ್ರವನ್ನು ಮಾರ್ಚ್ 19 ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೆವು. ಆದರೆ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತತೆಯು ನಮ್ಮ ಚಿತ್ರವನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ, ನಮ್ಮ ಪಾಲುದಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಚಿತ್ರದ ಬಿಡುಗಡೆಯ ದಿನಾಂಕವನ್ನು ಮರುನಿಗದಿಪಡಿಸುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ" ಎಂದು ಹೇಳುತ್ತ ಟಾಕ್ಸಿಕ್‌ ತಂಡ ರಿಲೀಸ್‌ ಅನ್ನು ಜೂನ್‌ 4ಕ್ಕೆ ಮುಂದೂಡಿದೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಸೋಲೋ ರಿಲೀಸ್‌ನಿಂದ ದೊಡ್ಡ ಕಮಾಯಿ ಗ್ಯಾರಂಟಿ

ʻಧುರಂಧರ್: ದಿ ರಿವೆಂಜ್ʼ ಸಿನಿಮಾವು ಮಾ.19ರಂದು ಗುರುವಾರ ತೆರೆಗೆ ಬರುತ್ತಿದೆ. ಆಗ ಯುಗಾದಿ, ಗುಡಿ ಪಾಡ್ವಾ ಮತ್ತು ರಂಜಾನ್‌ ಹಬ್ಬಗಳ ಸಾಲು ಸಾಲು ರಜೆಗಳು ಸಿಗುವುದರಿಂದ ಭರ್ಜರಿ ಕಮಾಯಿ ಗ್ಯಾರಂಟಿ. ʻಧುರಂಧರ್ 1ʼ ಸಿನಿಮಾವು ಬರೀ ಹಿಂದಿಯಲ್ಲಿ ತೆರೆಕಂಡು 1300 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ʻಧುರಂಧರ್: ದಿ ರಿವೆಂಜ್ʼ ಸಿನಿಮಾವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಟಾಕ್ಸಿಕ್‌ ಪೋಸ್ಟ್‌ಪೋನ್



ಹಾಗಾಗಿ, ಈ ಬಾರಿ ದಾಖಲೆಯ ಮೊತ್ತ ಬಾಚಿಕೊಳ್ಳುವುದು ಪಕ್ಕಾ ಎನ್ನಲಾಗಿದೆ. ಮೊದಲ ದಿನವೇ ಈ ಸಿನಿಮಾವು 150+ ಕೋಟಿ ರೂ. ವರೆಗೂ ವಿಶ್ವಾದ್ಯಂತ ಗಳಿಕೆ ಮಾಡುವ ನಿರೀಕ್ಷೆ ಇದೆ. ಮೊದಲ ವಾರಾಂತ್ಯಕ್ಕೆ 500 ಕೋಟಿ ರೂ. ಕ್ಲಬ್‌ ಸೇರಿದರೂ ಅಚ್ಚರಿ ಇಲ್ಲ! ಒಟ್ಟಿನಲ್ಲಿ ಯಶ್‌ ತಂಡದ ನಿರ್ಧಾರದಿಂದ ರಣವೀರ್‌ ಸಿಂಗ್‌ ಸಿನಿಮಾ ಟೀಮ್‌ಗೆ ಭರ್ಜರಿ ಲಾಭವಂತೂ ಆಗುವುದು ಖಚಿತ.