Puttakkana Makkalu Serial: ಪುಟ್ಟಕ್ಕನ ಮಕ್ಕಳು 'ಅಂತಿಮ ಅಧ್ಯಾಯ'; ಕಂಠಿ- ಸ್ನೇಹಾಗೆ ಇದೇನಾಯ್ತು?
Puttakkana Makkalu Serial: ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೀ ಕನ್ನಡದ ಜನಪ್ರಿಯ ಧಾರಾವಾಹಿ, ನಟಿ ಉಮಾಶ್ರೀಯವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಇದೀಗ ಅಂತ್ಯ ಹಾಡುತ್ತಿದೆ. ಅಂತಿಮ ಅಧ್ಯಾಯದ ಪ್ರೋಮೋ ಔಟ್ ಆಗಿದೆ. ಪುಟ್ಟಕ್ಕನ ಕನಸನ್ನ ಸಹನಾ- ಸುಮಾ ಈಡೆರಿಸಿದರೆ, ಕಂಠಿ- ಸ್ನೇಹಾ ಮನೆಗೆ ಜೂನಿಯರ್ ಬಂಗಾರಮ್ಮ ಬಂದಾಗಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ -
ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೀ ಕನ್ನಡದ ಜನಪ್ರಿಯ ಧಾರಾವಾಹಿ (Zee Kannada serial), ನಟಿ ಉಮಾಶ್ರೀಯವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಇದೀಗ ಅಂತ್ಯ ಹಾಡುತ್ತಿದೆ. ಅಂತಿಮ ಅಧ್ಯಾಯದ ಪ್ರೋಮೋ ಔಟ್ ಆಗಿದೆ. ಪುಟ್ಟಕ್ಕನ ಕನಸನ್ನ ಸಹನಾ- ಸುಮಾ ಈಡೆರಿಸಿದರೆ, ಕಂಠಿ- ಸ್ನೇಹಾ ಮನೆಗೆ ಜೂನಿಯರ್ ಬಂಗಾರಮ್ಮ (Junior Bangaramma) ಬಂದಾಗಿದೆ.
ರಾಧಾ ಕಥೆ ಏನು?
ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಪುಟ್ಟಕ್ಕನಾಗಿ ಹಿರಿಯ ನಟಿ ಉಮಾಶ್ರೀಯವರು ನಟಿಸಿದ್ದಾರೆ. ಪುಟ್ಟಕ್ಕ ಹಾಗೂ ಅವರ ಮೂರು ಜನ ಹೆಣ್ಣು ಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಪಡುವ ಕಷ್ಟ-ಸುಖದ ಕಥೆಯೇ ಪುಟ್ಟಕ್ಕನ ಮಕ್ಕಳು.
ಇದನ್ನೂ ಓದಿ: Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್!
ಮೂವರು ಮಕ್ಕಳಾದ ಮೇಲೆ ಗಂಡ ಬಿಟ್ಟು, ಬೇರೆಯವಳ ಜೊತೆ ಸಂಸಾರ ಮಾಡುತ್ತಾನೆ. ಆ ಸಂದರ್ಭದಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಾ, ಮಕ್ಕಳನ್ನು ಚೆನ್ನಾಗಿ ಸಾಕಿ, ಓದಿಸುತ್ತಾಳೆ ಪುಟ್ಟಕ್ಕ. ಪುಟ್ಟಕ್ಕನ ಕಷ್ಟ, ಸುಃಖ, ಮೆಸ್, ಗೆಳತಿ ಬಂಗಾರಮ್ಮ, ರಾಜಿಯ ದ್ವೇಷ, ಜೀವನದ ಸಮಸ್ಯೆಗಳೇ ಕಥೆ. ರಾಜಕೀಯದಲ್ಲಿ ನಿಂತು, ಬಂಗಾರಮ್ಮನ ಕುರ್ಚಿಯಲ್ಲಿ ಕುಳಿತುಕೊಳ್ಳಲು ರಾಧ ಹೊಂಚುಹಾಕುತ್ತಿದ್ದಾಳೆ, ಅದನ್ನು ಕಂಠಿ ಕೊನೆಗೂ ತಡೆದಿದ್ದಾನೆ.
ಪುಟ್ಟಕ್ಕನ ಕುಟುಂಬ ಒಂದಾಯ್ತು
ರಾಧಾ ಕಂಠಿಯನ್ನು ಸಾಯಿಸಲು ಪ್ರಯತ್ನಿಸಿದ್ದಾಳೆ. ಕಂಠಿ ಇರಿತವಾಗಿದ್ದರೂ ಸ್ನೇಹಾ ಬಳಿ ಬಂದಿದ್ದಾನೆ. ಕಂಠಿಯನ್ನು ನೋಡಿ ರಕ್ತದ ಮಡುವಿನಲ್ಲಿ ಸ್ನೇಹಾ ಕೂಡ ಬೀಳುತ್ತಾಳೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ನೇಹಾಗೆ ಹೆಣ್ಣು ಮಗು ಜನನವಾಗಿದೆ. ಬಂಗಾರಮ್ಮ ಈ ಮತ್ತೆ ಬಂದಾಯ್ತು ಅಂತ ಪುಟ್ಟಕ್ಕ ಸಖತ್ ಖುಷ್ ಆಗಿದ್ದಾಳೆ. ಮಗು ಜೊತೆ ಕಂಠಿ ಸ್ನೇಹಾ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಅಂತೂ ಪುಟ್ಟಕ್ಕನ ಕುಟುಂಬ ಒಂದಾಗಿದೆ.
ಪುಟ್ಟಕ್ಕನ ಮಕ್ಕಳು ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿದ ಖ್ಯಾತಿ ಸೀರಿಯಲ್ ಇದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ, ಧನುಷ್ ಗೌಡ, ಮಂಜುಭಾಷಿಣಿ, ಅಕ್ಷರಾ, ರಮೇಶ್ ಪಂಡಿತ್, ಸಂಜನಾ ಬುರ್ಲಿ, ಹಂಸಾ, ಶಿಲ್ಪಾ, ಅನಿರಿಶ್, ರಮ್ಯಾ ರಾಜು ಸೇರಿ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: Toxic postponed: ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ; ಯಶ್ ಫ್ಯಾನ್ಸ್ ಶಾಕ್! ಕಾರಣ ಇದು
2021, ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಒಂದು ಹಂತದ ವರೆಗೆ ಈ ಧಾರಾವಾಹಿ ನಂಬರ್ ಒನ್ ಪಟ್ಟದಲ್ಲಿತ್ತು.