ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Militants killed: ಮಣಿಪುರದಲ್ಲಿ ಭರ್ಜರಿ ಬೇಟೆ; 10 ಬಂಡುಕೋರರು ಫಿನಿಶ್‌

ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಚಂದೇಲ್ ಜಿಲ್ಲೆಯ ನ್ಯೂ ಸಮ್ತಾಲ್ ಗ್ರಾಮದ ಬಳಿ ಸಶಸ್ತ್ರ ಉಗ್ರಗಾಮಿಗಳ ಚಲನವಲನದ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಅಸ್ಸಾಂ ರೈಫಲ್ಸ್ ಘಟಕವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು. ಅದಕ್ಕೆ ಅವರು ಪ್ರತಿದಾಳಿ ನಡೆಸಿ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ 10 ಬಂಡೂಕೋರರನ್ನು ಸದೆಬಡಿಯಲಾಗಿದೆ.

ಮಣಿಪುರದಲ್ಲಿ ಭರ್ಜರಿ ಬೇಟೆ; 10 ಬಂಡುಕೋರರು ಫಿನಿಶ್‌

Profile Rakshita Karkera May 15, 2025 8:15 AM

ಇಂಫಾಲ್‌: ಮಣಿಪುರದಲ್ಲಿ ಭಾರತೀಯ ಸೇನೆ ನಡೆದಿದ ಭರ್ಜರಿ ಕಾರ್ಯಾಚರಣೆ(Militants killed) ನಡೆಸಿ ಬರೋಬ್ಬರು ಹತ್ತು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಚಂದೇಲ್ ಜಿಲ್ಲೆಯ ನ್ಯೂ ಸಮ್ತಾಲ್ ಗ್ರಾಮದ ಬಳಿ ಸಶಸ್ತ್ರ ಉಗ್ರಗಾಮಿಗಳ ಚಲನವಲನದ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಅಸ್ಸಾಂ ರೈಫಲ್ಸ್ ಘಟಕವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು. ಅದಕ್ಕೆ ಅವರು ಪ್ರತಿದಾಳಿ ನಡೆಸಿ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ 10 ಬಂಡೂಕೋರರನ್ನು ಸದೆಬಡಿಯಲಾಗಿದೆ. ಈ ಬಗ್ಗೆ ಪೂರ್ವ ಸೇನೆಯ ಕಮಾಂಡ್‌ ಪೋಸ್ಟ್‌ ಮಾಡುವ ಮೂಲಕ ದಾಳಿ ಬಗ್ಗೆ ಖಚಿತ ಪಡಿಸಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ, ಶಂಕಿತ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು, ಅದಕ್ಕೆ ಸೇನೆ ತ್ವರಿತವಾಗಿ ಪ್ರತಿಕ್ರಿಯಿಸಿತು. ನಂತರದ ಗುಂಡಿನ ಚಕಮಕಿಯಲ್ಲಿ, 10 ಬಂಡುಕೋರರನ್ನು ಹೊಡೆದುರುಳಿಸಲಾಗಿದೆ. ಹತರಿಂದ ಗಣನೀಯ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಸೇನೆ ತಿಳಿಸಿದೆ. ಮೇ 10 ರಂದು ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕನಿಷ್ಠ 13 ಉಗ್ರರನ್ನು ಬಂಧಿಸಲಾಗಿದೆ.



ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಎರಡು ಗ್ರಾಮಗಳು ಭಸ್ಮ

ಮಣಿಪುರದಾದ್ಯಂತ ಉಗ್ರಗಾಮಿ ಸಂಘಟನೆಗಳ ವಿರುದ್ಧ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಯುತ್ತಿರುವ ನಡುವೆಯೇ ಈ ಎನ್‌ಕೌಂಟರ್‌ ನಡೆದಿದೆ. ಕಳೆದ ವಾರ, ಮೇ 10 ರಂದು ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕನಿಷ್ಠ 13 ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ನಿಷೇಧಿತ ದಂಗೆಕೋರ ಗುಂಪುಗಳ "ಸಕ್ರಿಯ" ಸದಸ್ಯರಾಗಿದ್ದರು ಮತ್ತು ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರುತಿಳಿಸಿದ್ದಾರೆ.

ಮೇ 10 ರಂದು ಬಂಧಿಸಲ್ಪಟ್ಟವರಲ್ಲಿ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ - ಪೀಪಲ್ಸ್ ವಾರ್ ಗ್ರೂಪ್ [ಕೆಸಿಪಿ (ಪಿಡಬ್ಲ್ಯೂಜಿ)] ಬಣದ ಇಬ್ಬರು ಸಕ್ರಿಯ ಸದಸ್ಯರು - ಲೈರೆಂಕಾಬಿ ಮಾಯೈ ಲೈಕೈನ ನಿಂಗ್ತೌಜಮ್ ಕಿರಣ್ ಮೈಟೈ ಅಲಿಯಾಸ್ ಬೊಯಿನಾವೊ (29) ಮತ್ತು ಸಲಾಮ್ ಮಾಮಂಗ್ ಲೈಕೈನ ಸೊರೊಖೈಬಾಮ್ ಇನೋಚಾ ಸಿಂಗ್ (45) ಸೇರಿದ್ದಾರೆ, ಇಬ್ಬರೂ ಇಂಫಾಲ್ ಪಶ್ಚಿಮ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.