ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಟ್ಸ್‌ಆ್ಯಪ್‌ ಮೂಲಕ ರವಾನೆ; 2024ರ ಜೆಎಸ್‌ಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಹೇಗೆ? ಸಿಐಡಿ ವರದಿಯಲ್ಲೇನಿದೆ?

ಜಾರ್ಖಂಡ್ ಸಿಬ್ಬಂದಿ ಆಯ್ಕೆ ಸಮಿತಿ ನಡೆಸುವ ಪದವಿ ಹಂತದ (JSSC-CGL) ಪರೀಕ್ಷೆ 2024ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಅಕ್ರಮಗಳನ್ನು ತಳ್ಳಿ ಹಾಕಿದ್ದರೂ ವಾಟ್ಸ್ ಆಪ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇನ್ನು ಹಲವು ಸ್ಪೋಟಕ ಮಾಹಿತಿಗಳನ್ನು ಸಿಐಡಿ ವರದಿ ಬಹಿರಂಗಪಡಿಸಿದೆ.

ಜೆಎಸ್‌ಎಸ್‌ಸಿ 2024ರ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಐಡಿ ವರದಿಯಲ್ಲೇನಿದೆ?

ಸಂಗ್ರಹ ಚಿತ್ರ -

ರಾಂಚಿ: ನೇಮಕಾತಿ ಪರೀಕ್ಷೆಗಳಲ್ಲಿ (Recruitment exam) ನಡೆಯುವ ಅಕ್ರಮಗಳಿಗೆ (JSSC 2024 question paper leak) ಸಂಬಂಧಿಸಿ ಪ್ರತಿಭಟನೆಗಳು ತೀವ್ರಗೊಂಡಿರುವ ನಡುವೆ ಹಿಂದೆ ಕ್ಲೀನ್ ಚಿಟ್ (clean chit) ನೀಡಿದ್ದ, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಸರ್ಕಾರ ಘೋಷಿಸಿದ್ದ ಪದವಿ ಹಂತದ (JSSC-CGL) ಪರೀಕ್ಷೆ 2024ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಹಲವು ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಪ್ರಶ್ನೆ ಪತ್ರಿಕೆ ಸೋರಿಕೆ ನಡೆದಿರುವುದು ಹೇಗೆ ಎನ್ನುವ ಕುರಿತು ಸಿಐಡಿ (CID) ನೀಡಿರುವ ವರದಿಯನ್ನು ಮಾಧ್ಯಮವೊಂದು ಬಹಿರಂಗಪಡಿಸಿದೆ.

ಜಾರ್ಖಂಡ್ ಸಿಬ್ಬಂದಿ ಆಯ್ಕೆ ಸಮಿತಿ ವತಿಯಿಂದ ನಡೆಯುವ ಪದವಿ ಹಂತದ ಪರೀಕ್ಷೆ 2024ರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಆದರೆ ಈ ವರದಿಯನ್ನು ತಳ್ಳಿ ಹಾಕಿದ ಸರ್ಕಾರ ಪರೀಕ್ಷೆಗೆ ಕ್ಲೀನ್ ಚಿಟ್ ನೀಡಿತ್ತು. ಈ ಕುರಿತು ರಾಜ್ಯ ಸಿಐಡಿ ನಡೆಸಿರುವ ತನಿಖಾ ವರದಿ ಈಗ ಹೊರಬಿದ್ದಿದೆ.

SBI Recruitment 2026: ಎಸ್‌ಬಿಐಯಲ್ಲಿದೆ ಬರೋಬ್ಬರಿ 1,576 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಇಂದೇ ಅಪ್ಲೈ ಮಾಡಿ

ಜೆಎಸ್‌ಎಸ್‌ಸಿ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್ ಆಪ್ ಮೂಲಕ ಹಂಚಿಕೊಳ್ಳಲಾಗಿತ್ತು. ಹಣ ಪಾವತಿಸಿದ ಹಜಾರಿಬಾಗ್, ಜಮ್ಶೆಡ್ಪುರ, ಪಾಟ್ನಾ, ಪಶ್ಚಿಮ ಬಂಗಾಳ ಮತ್ತು ನೇಪಾಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಭ್ಯರ್ಥಿಗಳಿಗೆ ವಿತರಿಸಲು ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲಾಗಿತ್ತು. ಈ ಕುರಿತು ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರವು ತನಿಖೆ ನಡೆಸಿ ತಯಾರಿಸಿದ ವರದಿಯನ್ನು 2025ರಲ್ಲಿ ಮುಚ್ಚಿಹಾಕಿ ಎರಡನೇ ತನಿಖೆಗೆ ಆದೇಶಿಸಿತು. ಇದು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳನ್ನು ತಳ್ಳಿಹಾಕಿದ್ದರಿಂದ ಪರೀಕ್ಷೆಗೆ ಕ್ಲೀನ್ ಚಿಟ್ ದೊರಕಿತ್ತು.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ರದ್ದಾದ ಮೇಲೆ 2024ರ ಸೆಪ್ಟೆಂಬರ್ 21 ಮತ್ತು 22ರಂದು ಜೆಎಸ್‌ಎಸ್‌ಸಿ ಮರು ಪರೀಕ್ಷೆಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕವಿದ್ದುದರಿಂದ ಜಾರ್ಖಂಡ್‌ನಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಆದರೂ ಕೂಡ ಪ್ರಶ್ನೆ ಪತ್ರಿಕೆ ಸೋರಿಕೆ ನಡೆದಿದೆ. ಸ್ಥಿರ ದೂರವಾಣಿ ಫೋನ್‌ಗಳ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೆ ಮಾಡಲಾಗಿದೆ.

ಈ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಉತ್ತರ ಪತ್ರಿಕೆಗಳ ಛಾಯಾಚಿತ್ರಗಳ ದಾಖಲೆಯನ್ನು ಕೂಡ ಸಲ್ಲಿಸಲಾಗಿತ್ತು. ಪರೀಕ್ಷೆಗೆ ಸ್ವಲ್ಪ ಮೊದಲು ತೆಗೆದಿರುವ ಛಾಯಾ ಚಿತ್ರದಲ್ಲಿ 2024ರ ಸೆಪ್ಟೆಂಬರ್ 22 ಬೆಳಗ್ಗೆ 7.23ರ ಸಮಯವನ್ನು ತೋರಿಸಿದೆ. ಈ ಚಿತ್ರವನ್ನು ಬಿಷ್ಣುಪುರ, ಜಮ್ಶೆಡ್ಪುರದಲ್ಲಿ ತೆಗೆಯಲಾಗಿತ್ತು. ಸಿಐಡಿ 2025ರ ಮಾರ್ಚ್ ನಲ್ಲಿ ಸಲ್ಲಿಸಿರುವ ತನಿಖಾ ವರದಿಯಲ್ಲಿ 150 ರಲ್ಲಿ 120 ಪ್ರಶ್ನೆಗಳು ಸೋರಿಕೆಯಾಗಿವೆ ಎಂದು ಹೇಳಿದೆ.

ಆದರೆ ಈ ವರದಿಯನ್ನು ಕೈಬಿಟ್ಟ ರಾಜ್ಯ ಸರ್ಕಾರ ಎರಡನೇ ಬಾರಿಗೆ ಎಸ್‌ಐಟಿಯನ್ನು ರಚಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿ ತನಿಖೆ ನಡೆಸಲು ಸೂಚಿಸಿತ್ತು. ಅಲ್ಲದೇ ಸಿಐಡಿ ನೀಡಿದ ವರದಿಯಲ್ಲಿದ್ದ ಆರೋಪವನ್ನು ತಳ್ಳಿ ಹಾಕಿತ್ತು. ಎರಡನೇ ಬಾರಿಗೆ ನಡೆದ ತನಿಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನುವ ವರದಿ ಸಿದ್ಧಪಡಿಸಲಾಗಿತ್ತು.

“ನಾವು ಸಾಯುತ್ತಿದ್ದೆವು”: ಕಾರಿನ ಮೇಲೆ ಗೂಂಡಾಗಳು ದಾಳಿ ಮಾಡಿದ್ದಾರೆಂದು ಮಮತಾ ಬ್ಯಾನರ್ಜಿ ಆರೋಪ

ಇದೀಗ ಜೆಪಿಎಸ್‌ಸಿ ಪರೀಕ್ಷೆಯ ಸಮಯದಲ್ಲಿ ಈ ಸೋರಿಕೆ ವಿಚಾರ ಬಹಿರಂಗಗೊಂಡಿದ್ದು, ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದೆ. ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹ್ತೊ ನೇತೃತ್ವದಲ್ಲಿ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಭಟನೆ 16 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದೆ. ಆದರೆ ಅಂತಿಮ ನಿರ್ಣಯಕ್ಕೆ ಬರುವಲ್ಲಿ ಮಾತುಕತೆಗಳು ವಿಫಲವಾಗಿವೆ.