ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಂದು ಎಐ ಲವ್‌ ಸ್ಟೋರಿ: ಆನ್‌ಲೈನ್‌ ಪ್ರೇಯಸಿಗಾಗಿ ಆಸ್ತಿ ಮಾರಿ 2,000 ಕಿಲೋ ಮೀಟರ್‌ ಪ್ರಯಾಣಿಸಿದ ವ್ಯಕ್ತಿಗೆ ಕಾದಿತ್ತು ಆಘಾತ; ಕಣ್ಣೀರು ಹಾಕುತ್ತ ಮರಳಿದ್ದೇಕೆ?

Viral News: 49 ವರ್ಷದ ಕಾರ್ಮಿಕನೊಬ್ಬ, ಆನ್‌ಲೈನ್‌ನಲ್ಲಿ ಪರಿಚಯವಾದ ಮಹಿಳೆಯೇ ತನ್ನ ಭವಿಷ್ಯದ ಪತ್ನಿ ಎಂದು ನಂಬಿ 2,000 ಕಿ.ಮೀ. ಪ್ರಯಾಣಿಸಿದ್ದಾನೆ. ಆದರೆ ಅಲ್ಲಿಗೆ ತಲುಪಿದಾಗ, ಆ ಮಹಿಳೆ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟವಳು ಎಂಬ ಸತ್ಯ ಬಯಲಾಗಿದೆ. ಈ ಸಂಬಂಧದ ಮೇಲೆ ಆತನಿಗೆ ಎಷ್ಟೊಂದು ಗಾಢವಾದ ನಂಬಿಕೆ ಇತ್ತೆಂದರೆ, ಆತ ತನ್ನಲ್ಲಿದ್ದ ಎಲ್ಲ ವಸ್ತು ಮಾರಾಟ ಮಾಡಿ, 2,000 ಕಿ.ಮೀಗೂ ಹೆಚ್ಚು ದೂರದ ಪ್ರಯಾಣಿಸಿದ್ದ.

ಎಐ ಸೃಷ್ಟಿತ ಸುಳ್ಳು ಪ್ರೇಮದ ಸುಳಿಗೆ ಸಿಲುಕಿ ಕಣ್ಣೀರು ಹಾಕಿದ ಕಾರ್ಮಿಕ

ಸಾಂದರ್ಭಿಕ ಚಿತ್ರ -

Profile
Pushpa Kumari Oct 19, 2026 7:20 PM

ಬ್ರೆಜಿಲಿಯ, ಅ. 19: ಇಂದು ಡಿಜಿಟಲ್ ವ್ಯವಸ್ಥೆ, ಎಐ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆ ಜನರನ್ನು ಮೋಸಗೊಳಿಸುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಇದೀಗ 49 ವರ್ಷದ ಕಾರ್ಮಿಕನೊಬ್ಬ, ಆನ್‌ಲೈನ್‌ನಲ್ಲಿ ಪರಿಚಯವಾದ ಮಹಿಳೆಯೇ ತನ್ನ ಭವಿಷ್ಯದ ಪತ್ನಿ ಎಂದು ನಂಬಿ 2,000 ಕಿ.ಮೀ. ಪ್ರಯಾಣಿಸಿದ್ದಾನೆ. ಆದರೆ ಅಲ್ಲಿಗೆ ತಲುಪಿದಾಗ, ಆ ಮಹಿಳೆ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟವಳು ಎಂಬ ಸತ್ಯ (Viral News) ಬಯಲಾಗಿದೆ. ಈ ಸಂಬಂಧದ ಬಗ್ಗೆ ಆತನಿಗೆ ಎಷ್ಟೊಂದು ಗಾಢವಾದ ನಂಬಿಕೆ ಇತ್ತೆಂದರೆ, ತನ್ನಲ್ಲಿದ್ದ ವಸ್ತುಗಳೆನ್ನೆಲ್ಲ ಮಾರಾಟ ಮಾಡಿ, 2,000 ಕಿ.ಮೀ.ಗೂ ಹೆಚ್ಚು ದೂರದ ಪ್ರಯಾಣ ಮಾಡಿದ್ದ.

ಮದುವೆಯಾಗಬೇಕೆಂದು ಕನಸು ಕಂಡಿದ್ದ 49 ವರ್ಷದ ಬ್ರೆಸಿಲ್‌ನ ಇಟ್ಟಿಗೆ ಕಾರ್ಮಿಕ ಎಐ ಸೃಷ್ಟಿತ ನಕಲಿ ಆನ್‌ಲೈನ್ ಪ್ರೇಮಿಯ ಸಹವಾಸ ಮಾಡಿ ತನ್ನ ಬಳಿ ಇದ್ದ ವಸ್ತುಗಳನ್ನು ಕಳೆದುಕೊಂಡಿದ್ದಾನೆ.

​ಮಾರನ್‌ಹಾವೊ ರಾಜ್ಯದ ಎಡಿಮಾರ್ ರೋಚಾ ಮಾರ್ಟಿನ್ಸ್ ಎಂಬಾತ ಕೊನೆಗೂ ತನಗೆ ಸಂಗಾತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ. ಬ್ರೆಜಿಲ್‌ನ 49 ವರ್ಷದ ನಿರ್ಮಾಣ ಕಾರ್ಮಿಕರಾದ ಈತ, ಒಟ್ಟಿಗೆ ಬಾಳುವ ಮತ್ತು ತಮ್ಮ ಏಕಾಂಗಿತನವನ್ನು ದೂರ ಮಾಡಬಲ್ಲ ಮಹಿಳೆಯೊಬ್ಬಳು ಸಿಕ್ಕಿದ್ದಾಳೆ ಎಂದು ನಂಬಿದ್ದ. ಇದಕ್ಕಾಗಿ ಸುಮಾರು 2,000 ಕಿ.ಮೀ. ದೂರದ ಬೆಲೋ ಹೊರಿಜೋಂಟೆ ನಗರಕ್ಕೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ. ಅಲ್ಲಿಗೆ ತೆರಳುವ ಮುನ್ನ ತನ್ನ ಬಳಿಯಿದ್ದ ಎಲ್ಲ ದುಬಾರಿ ವಸ್ತುಗಳನ್ನು ಮಾರಿ ಪ್ರಯಾಣಕ್ಕೆ ಹಣ ಸಂಗ್ರಹಿಸಿದ್ದ.

ಸೋಷಿಯಲ್ ಮೀಡಿಯಾದ ಟಿಕ್‌ಟಾಕ್‌ನಲ್ಲಿ 3 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದ 'ಜೆಸ್ಸಿಕಾ ಫಜೆಂಡೈರಾ' ಎಂಬ ಖಾತೆಯಲ್ಲಿ ಫಾರ್ಮ್‌ ಒಂದರಲ್ಲಿ ವಾಸಿಸುವ ಮಹಿಳೆಯೊಬ್ಬಳ ವಿಡಿಯೊಗಳಿದ್ದವು. ಆಕೆಯೊಂದಿಗೆ ಬಂದು ವಾಸಿಸುವವರಿಗೆ ಆರ್ಥಿಕ ಭದ್ರತೆ ನೀಡುವುದಾಗಿ ತಿಳಿಸಲಾಗಿತ್ತು. ಇದನ್ನು ನಂಬಿ ಮಾರ್ಟಿನ್ಸ್ ಆಸೆಯಿಂದ ಅಲ್ಲಿಗೆ ಹೋಗಿದ್ದ.

ಕೇರಳಂ ಮೀರಿಸುವ ಹೊನ್ನಾವರ ಹಿನ್ನೀರು ಸ್ವರ್ಗ; ಭೇಟಿ ನೀಡುವಂತೆ ಆನಂದ್ ಮಹೀಂದ್ರಾ ಕರೆ

ಅಲ್ಲಿಗೆ ತೆರಳಿ ಫೋಟೊ ತೋರಿಸಿ ವಿಚಾರಿಸಿದಾಗ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಆಕೆ ಮಹಿಳೆ ನಿಜವಾದವಳಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ಪಾತ್ರ ಎಂಬ ಕಹಿ ಸತ್ಯ ತಿಳಿಯಿತು. ಈ ಪ್ರಕರಣ ಸುದ್ದಿಯಾಗುತ್ತಿದ್ದಂತೆ, ಆ ಸಾಮಾಜಿಕ ಜಾಲತಾಣದ ಖಾತೆಯ ನಿರ್ವಾಹಕರು ವಿಡಿಯೊವೊಂದನ್ನು ಪ್ರಕಟಿಸಿ, ಆ ಮಹಿಳೆ ಸಂಪೂರ್ಣವಾಗಿ ಎಐಯಿಂದ ಸೃಷ್ಟಿಯಾದವಳು ಎಂದು ಒಪ್ಪಿಕೊಂಡಿದ್ದಾರೆ.

ಮನೆಗೆ ಮರಳಲೂ ಮಾರ್ಟಿನ್ಸ್ ಬಳಿ ಹಣವಿರಲಿಲ್ಲ. ಬೆಲೋ ಹೊರೈಜಾಂಟೆ ನಗರದ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಾಜ ಸೇವಕರಿಂದ ಸಹಾಯ ಕೋರಿದ್ದಾನೆ. ಕೊನೆಗೆ ಸ್ಥಳೀಯ ಸಮಾಜ ಸೇವಕರು ನೆರವು ನೀಡಿದರು. ಅಂತಿಮವಾಗಿ ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮರಳಬೇಕಾಯಿತು.