ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೌದಿಯಲ್ಲಿ ಸಿಲುಕಿರುವ 4,000 ಭಾರತೀಯ ಹಜ್ ಯಾತ್ರಿಕರು: ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಓವೈಸಿ ಮನವಿ

ಪ್ರಾದೇಶಿಕ ಉದ್ವಿಗ್ನತೆಯ ಪರಿಣಾಮ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆಯನ್ನು ರದ್ದುಗೊಳಿಸಿರುವ ಪರಿಣಾಮ ಸುಮಾರು 4,000 ಭಾರತೀಯ ಹಜ್ ಯಾತ್ರಿಕರು ಸೌದಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸೌದಿಯಲ್ಲಿ ಸಿಲುಕಿರುವ ಭಾರತೀಯ ಹಜ್ ಯಾತ್ರಿಕರು

ಸಂಗ್ರಹ ಚಿತ್ರ -

ನವದೆಹಲಿ: ಇರಾನ್ (iran) ಬೆಂಬಲಿತ ಹೌತಿ ಬಂಡುಕೋರರ ದಾಳಿ ಮತ್ತು ಸೌದಿ ಅರೇಬಿಯಾದಲ್ಲಿ (saudi arabia) ಉಂಟಾಗಿರುವ ಉದ್ವಿಗ್ನ ಪರಿಣಾಮಾಡಿದ ಭಾರತೀಯ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ (Indigo), ಆಕಾಶ್ ಏರ್ (akash air) ಮತ್ತು ಏರ್ ಇಂಡಿಯಾವು (air india) ಸೌದಿ ಅರೇಬಿಯಾಕ್ಕೆ ತಮ್ಮ ವಿಮಾನ ಸೇವೆಯನ್ನು (flight cancel) ರದ್ದುಗೊಳಿಸಿವೆ. ಹೀಗಾಗಿ ಹಜ್ ಯಾತ್ರೆಗೆ ತೆರಳಿರುವ 4,000ಕ್ಕೂ ಹೆಚ್ಚು ಭಾರತೀಯ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆ ತರುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸೌದಿ ಅರೇಬಿಯಾಕ್ಕೆ ವಿಮಾನ ರದ್ದುಗೊಂಡಿರುವುದರಿಂದ ಸುಮಾರು 4,000 ಭಾರತೀಯ ಯಾತ್ರಿಕರು ಮಕ್ಕಾ ಮತ್ತು ಮದೀನಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಮರಳಿ ಕರೆತರುವ ನಿಟ್ಟಿನಲ್ಲಿ ಕೆಲಸವಾಗಬೇಕು ಎಂದು ಹೇಳಿದರು.



“ಸಿಜೆಪಿಯನ್ನು ಎಂದಿಗೂ ಬೆಂಬಲಿಸಲ್ಲ”: ಬಿಜೆಪಿ ವಿರುದ್ಧದ ಟೀಕೆಯ ನಡುವೆ ಅಣ್ಣಾಮಲೈ ಸ್ಪಷ್ಟನೆ

ಸುರಕ್ಷಿತವಾಗಿ ಅವರು ಭಾರತಕ್ಕೆ ಮರಳಲು ಅನುಕೂಲವಾಗುವಂತೆ ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ಮತ್ತು ವಾಯುಯಾನ ನಿಯಂತ್ರಕವನ್ನು ಒತ್ತಾಯಿಸಿರುವ ಅವರು, ಇಂಡಿಗೋ, ಆಕಾಶ್ ಏರ್ ಮತ್ತು ಏರ್ ಇಂಡಿಯಾ ವಿಮಾನಗಳಲ್ಲಿ ಭಾರತೀಯ ಯಾತ್ರಿಕರು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದರು. ಆದರೆ ವಿಮಾನಯಾನ ಸಂಸ್ಥೆಗಳು ಈಗ ಸೇವೆಗಳನ್ನು ರದ್ದುಗೊಳಿಸಿದ್ದರಿಂದ ಅವರಿಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವನ್ನು ಒತ್ತಾಯಿಸಿರುವ ಅವರು, ಭಾರತೀಯ ಯಾತ್ರಿಕರನ್ನು ಅವರ ಪ್ರಯಾಣ ಏಜೆಂಟ್‌ಗಳು ಕೈಬಿಟ್ಟಿದ್ದಾರೆ. ಹೀಗಾಗಿ ತುರ್ತಾಗಿ ಸರ್ಕಾರ ಹಸ್ತಕ್ಷೇಪ ಮಾಡಬೇಕು. ತೊಂದರೆಗೊಳಗಾದವರಿಗೆ ಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿದೇಶಾಂಗ ಸಚಿವಾಲಯ ಕಳೆದ ವಾರ ನೀಡಿರುವ ಮಾಹಿತಿ ಪ್ರಕಾರ ಸೌದಿಯಲ್ಲಿ ಸಿಕ್ಕಿಬಿದ್ದಿದ್ದ ಸುಮಾರು 3,000 ಭಾರತೀಯ ಉಮ್ರಾ ಯಾತ್ರಿಕರು ಲಭ್ಯವಿದ್ದ ವಿಮಾನಗಳಲ್ಲಿ ಭಾರತಕ್ಕೆ ಮರಳಿದ್ದಾರೆ. 10,000ಕ್ಕೂ ಹೆಚ್ಚು ಇತರ ಯಾತ್ರಿಕರು ತಮ್ಮ ನಿಗದಿತ ಸೇವೆಗಳಲ್ಲಿ ಹಿಂತಿರುಗಿದ್ದಾರೆ ಎಂದು ತಿಳಿಸಿತ್ತು.

ಸಿಲುಕಿಕೊಂಡಿರುವ ಇನ್ನು ಹಲವು ಯಾತ್ರಿಕರನ್ನು ಕರೆತರಲು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಜನರಲ್ ವಿಮಾನಯಾನ ಸಂಸ್ಥೆಗಳು ಮತ್ತು ಪ್ರವಾಸ ನಿರ್ವಾಹಕರೊಂದಿಗೆ ಸಂವಹನ ನಡೆಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರರಾದ ರಣಧೀರ್ ಜೈಸ್ವಾಲ್ ತಿಳಿಸಿದ್ದರು.



ಸಮುದಾಯ ಸ್ವಯಂಸೇವಕರ ಬೆಂಬಲದೊಂದಿಗೆ ಅಲ್ಲಿರುವವರಿಗೆ ಸಂಪೂರ್ಣ ಸಹಾಯ ಮಾಡಲಾಗುತ್ತಿದೆ. ಅವರ ಪ್ರಶ್ನೆಗಳನ್ನು ಪರಿಹರಿಸಲು ಮತ್ತು ಬೆಂಬಲವನ್ನು ಒದಗಿಸಲು 24/7 ನಿಯಂತ್ರಣ ಕೊಠಡಿಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಸೌದಿ ಅರೇಬಿಯಾದ ಮೂಲಸೌಕರ್ಯಗಳ ಮೇಲಿನ ದಾಳಿಗಳು, ಪ್ರಾದೇಶಿಕ ಉದ್ವಿಗ್ನತೆ ಹಿನ್ನೆಲೆಯಲ್ಲಿ ಭಾರತ ಮತ್ತು ಸೌದಿ ಅರೇಬಿಯಾದ ವಿವಿಧ ನಗರಗಳ ನಡುವಿನ ವಿಮಾನಯಾನ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇಂಡಿಗೋ ಸಂಸ್ಥೆಯು ರಿಯಾದ್, ಜೆಡ್ಡಾ, ದಮ್ಮಾಮ್ ಮತ್ತು ಮದೀನಾಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಅಕ್ಟೋಬರ್ 24 ರವರೆಗೆ ರದ್ದುಗೊಳಿಸಿದೆ. ಆಕಾಶ ಏರ್ ಕೂಡ ರಿಯಾದ್‌ಗೆ ತನ್ನ ವಿಮಾನಯಾನ ಸೇವೆಗಳ ಸ್ಥಗಿತಗೊಳಿಸಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ಸೌದಿ ಅರೇಬಿಯಾದ ಪ್ರಮುಖ ಮಾರ್ಗಗಳಲ್ಲಿ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಿವೆ. ಇದರಿಂದ ಉಮ್ರಾ ಯಾತ್ರಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಯಾಕೆಂದರೆ ಇದು ಅವರ ವಸತಿ ಮತ್ತು ಪ್ರಯಾಣ ವೆಚ್ಚ, ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಲಿದೆ.

ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ರಮಕ್ಕೆ ಕೇಂದ್ರ ಸಚಿವಾಲಯ ನಿರಾಕರಿಸಿರುವುದು ಏಕೆ? ಆರ್‌ಟಿಐ ಮಾಹಿತಿಯಲ್ಲೇನಿದೆ?

ರಿಯಾದ್‌ ಮತ್ತು ಜೆಡ್ಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಯಾಣಿಕರ ವಾಪಸಾತಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಹಾಯದ ಅಗತ್ಯವಿರುವ ರಾಯಭಾರ ಕಚೇರಿಯನ್ನು ನಿಗದಿತ ಸಹಾಯವಾಣಿ ಸಂಖ್ಯೆ ರಿಯಾದ್ ಭಾರತೀಯ ರಾಯಭಾರ ಕಚೇರಿಯ ದೂರವಾಣಿ: +966-5544 12016 ಅಥವಾ +966-5421 26784, ಸೌದಿ ಅರೇಬಿಯಾದೊಳಗೆ ಟೋಲ್-ಫ್ರೀ ಸಂಖ್ಯೆ: 800247 1234, ವಾಟ್ಸಾಪ್ +966-53621 6082, ಜೆಡ್ಡಾ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ದೂರವಾಣಿ: +966-12-261 4093 ಅಥವಾ +966-5561 22301, ವಾಟ್ಸಾಪ್ +966-53620 9704 ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದೆ.