Viral Video: ಬೈಕ್‌ನಲ್ಲಿ ಜೋಡಿಗಳ ರೊಮ್ಯಾನ್ಸ್; ಹಸಿ-ಬಿಸಿ ವಿಡಿಯೊ ಫುಲ್ ವೈರಲ್
ಹೈದರಾಬಾದ್‌ನ ಅರಾಮ್‌ಘರ್ ಫ್ಲೈಓವರ್‌ನಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಜೋಡಿ ಅಪಾಯಕಾರಿ ಸ್ಟಂಟ್ ಮಾಡುತ್ತಾ ರೊಮ್ಯಾನ್ಸ್ ಮಾಡಿದ್ದು, ಇಡೀ ಘಟನೆಯನ್ನು ಸಹ ಪ್ರಯಾಣಿಕರೊಬ್ಬರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ. ಈ ಕೃತ್ಯದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೈಕಿನಲ್ಲಿ ದಂಪತಿಗಳು ಸ್ಟಂಟ್ ಮಾಡಿದ ಹಲವಾರು ವಿಡಿಯೊಗಳು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನಂತರ ಅವರಿಗೆ ದಂಡವನ್ನು ವಿಧಿಸಲಾಗಿತ್ತು. ಇಷ್ಟಾದರೂ ಇನ್ನು ಕೆಲವರಿಗೆ ಬುದ್ಧಿಬಂದಿಲ್ಲ. ಇದೀಗ ಹೈದರಾಬಾದ್‌ನ ಅರಾಮ್‌ಘರ್ ಫ್ಲೈಓವರ್‌ನಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಾ ಯುವ ಜೋಡಿವೊಂದು ರೊಮ್ಯಾನ್ಸ್(Romance) ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಇಡೀ ಘಟನೆಯನ್ನು ಸಹ ಪ್ರಯಾಣಿಕರೊಬ್ಬರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರ ಮತ್ತು ಸುತ್ತಮುತ್ತಲಿನ ರಸ್ತೆ ಸುರಕ್ಷತೆಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ಈ ಜೋಡಿ ಬೈಕ್‌ನಲ್ಲಿ ಪ್ರಯಾಣಿಸುವಾಗ ಯುವತಿ ಬೈಕಿನ ಟ್ಯಾಂಕ್ ಮೇಲೆ ಕುಳಿತು ಬೈಕ್ ಚಲಾಯಿಸುತ್ತಿದ್ದ ಯುವಕನ ಜೊತೆ ರೊಮ್ಯಾನ್ಸ್ ಮಾಡುವುದನ್ನು ಸೆರೆಹಿಡಿಯಲಾಗಿದೆ. ಆಕೆ ಹಿಂದಕ್ಕೆ ಮುಖ ಮಾಡಿ ಬೈಕ್‌ನಲ್ಲಿದ್ದ ಯುವಕನನ್ನು ತಬ್ಬಿಕೊಂಡಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ಈ ದೃಶ್ಯಗಳನ್ನು ಜೋಡಿಯ ಹಿಂದೆ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕನೊಬ್ಬ ಸೆರೆಹಿಡಿದಿದ್ದಾನೆ. ಮತ್ತು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಎಲ್ಲರ ಗಮನಸೆಳೆದು ವೈರಲ್ ಆಗಿ ನೆಟ್ಟಿಗರು ಈ ಕೃತ್ಯದ ವಿರುದ್ಧ ಕಿಡಿಕಾರಿದ್ದಾರೆ. ನೆಟ್ಟಿಗರೊಬ್ಬರು “ರೇವಂತ್ ರೆಡ್ಡಿ ಫ್ಲಾಟ್‌ಗಳು ಉಚಿತವಾಗಿ ಸಿಗಲಿವೆ. ಅಲ್ಲಿಗೆ ಹೋಗಿ ಆರಾಮವಾಗಿ ರೊಮ್ಯಾನ್ಸ್ ಮಾಡಿ. ನೀವು ಅದನ್ನು ಬೈಕ್‌ನಲ್ಲಿ ಮಾಡಿದರೆ, ನೀವು ನೇರವಾಗಿ ಮೇಲಕ್ಕೆ ಹೋಗಿ ನಂತರ ಅಲ್ಲಿ ರೊಮ್ಯಾನ್ಸ್ ಮಾಡುತ್ತೀರಿ" ಎಂದು ಬರೆದಿದ್ದಾರೆ".
ದಂಪತಿಗಳು ಇಂತಹ ಸಾಹಸದಲ್ಲಿ ತೊಡಗಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ, ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕಿನಲ್ಲಿ ಪುರುಷ ಮತ್ತು ಮಹಿಳೆ ಅಪಾಯಕಾರಿ ಸಾಹಸ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡು ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಂಪತಿಗೆ ದಂಡ ವಿಧಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಸ್ಮಶಾನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಬಿಜೆಪಿ ನಾಯಕನ ರಾಸಲೀಲೆ; ಕ್ಯಾಮರಾ ಕಣ್ಣಲ್ಲಿ ಸೆರೆ
ಜೂನ್ 15 ರಂದು ಸೆರೆಹಿಡಿಯಲಾದ ಈ ದೃಶ್ಯದಲ್ಲಿ, ಮಹಿಳೆಯೊಬ್ಬಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಅದನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಬ್ಬಿಕೊಳ್ಳುತ್ತಿರುವುದನ್ನು ಸೆರೆಹಿಡಿಯಲಾಗಿತ್ತು. ಈ ವಿಡಿಯೊ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದರಲ್ಲಿ ಆಶ್ಚರ್ಯವಿಲ್ಲ. ವರದಿ ಪ್ರಕಾರ, ಈ ವಿಡಿಯೊ ಪೊಲೀಸರ ಗಮನಕ್ಕೆ ಬಂದಿದ್ದು, ರಸ್ತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಥಳೀಯ ಸಂಚಾರ ಪೊಲೀಸರು 55,000 ರೂ. ದಂಡ ವಿಧಿಸಿದ್ದರು ಎನ್ನಲಾಗಿತ್ತು.