ಸಂಕಷ್ಟದಲ್ಲಿದ್ದ ಪ್ರವಾಸಿಗರಿಗೆ ನೆರವು: ಹೋಟೆಲ್ ವಾಸ್ತವ್ಯ ಉಚಿತವಾಗಿ ನೀಡಿದ ಅಬುಧಾಬಿ ಸರ್ಕಾರ
Israel-Iran War: ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಕಾರಣ ಸುರಕ್ಷತೆಯ ದೃಷ್ಟಿಯಿಂದ ವಾಯು ಮಾರ್ಗ ಕೂಡ ಸ್ಥಗಿತ ಗೊಂಡಿದೆ. ಈ ನಿಟ್ಟಿನಲ್ಲಿ ಯುಎಇನಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ಅಬುಧಾಬಿ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ವಿಮಾನಗಳ ರದ್ದತಿಯಿಂದಾಗಿ ತಮ್ಮ ಊರುಗಳಿಗೆ ಮರಳಲಾಗದ ಪ್ರವಾಸಿಗರ ಹೋಟೆಲ್ ವಾಸ್ತವ್ಯದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದೆ.
ಸಂಕಷ್ಟದಲ್ಲಿ ಪ್ರವಾಸಿಗರಿಗೆ ನೆರವು -
ಅಬುಧಾಬಿ, ಮಾ.2: ಇರಾನ್-ಇಸ್ರೇಲ್ ಉದ್ವಿಗ್ನತೆ (Israel-Iran War) ಹೆಚ್ಚುತ್ತಿದೆ. ಈ ನಡುವೆ ಪ್ರಯಾಣಿಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಕಾರಣ ಸುರಕ್ಷತೆಯ ದೃಷ್ಟಿಯಿಂದ ವಾಯುಮಾರ್ಗ ಕೂಡ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಯುಎಇನಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ಅಬುಧಾಬಿ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ವಿಮಾನಗಳ ರದ್ದತಿಯಿಂದಾಗಿ ತಮ್ಮ ಊರುಗಳಿಗೆ ಮರಳಲಾಗದ ಪ್ರವಾಸಿಗರ ಹೋಟೆಲ್ ವಾಸ್ತವ್ಯದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದೆ.
ಇರಾನ್-ಇಸ್ರೇಲ್ ಉಲ್ಬಣಕ್ಕೆ ಸಂಬಂಧಿಸಿದಂತೆ ವಾಯುಪ್ರದೇಶ ನಿರ್ಬಂಧ ಮತ್ತು ವಿಮಾನ ರದ್ದತಿಯಿಂದಾಗಿ ಯುಎಇಯಲ್ಲಿ ಸುಮಾರು 20,000 ಪ್ರವಾಸಿಗರು ಮತ್ತು ಸಾರಿಗೆ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಪ್ರಯಾಣಿಕರಿಗೆ ವಿಮಾನಗಳ ಅಡಚಣೆ ಉಂಟಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಸಿಲುಕಿರುವ ಅತಿಥಿಗಳು ಮತ್ತು ಪ್ರಯಾಣಿಕರಿಗೆ ಪ್ರಮುಖ ಪರಿಹಾರ ವನ್ನು ಘೋಷಣೆ ಮಾಡಿದೆ. ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯೂ ಹೋಟೆಲ್‌ಗಳಲ್ಲಿ ವಾಸ್ತವ್ಯವನ್ನು ವಿಸ್ತರಿಸಲು ಅವಕಾಶ ನೀಡುವಂತೆ ಆದೇಶಿಸಿದೆ.
ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಎಲ್ಲಾ ಹೋಟೆಲ್‌ಗಳಿಗೆ ಸುತ್ತೋಲೆಯನ್ನು ಪ್ರಕಟಿಸಿದೆ.. ಹೋಟೆಲ್ ಮಾಲೀಕರು ಅಥವಾ ಪ್ರವಾಸಿಗರು ಈ ಹೆಚ್ಚುವರಿ ದಿನಗಳ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇದರ ಸಂಪೂರ್ಣ ಬಿಲ್‌ಗಳನ್ನು ಅಬುದಾಬಿ ಸರ್ಕಾರವೇ ಪಾವತಿ ಮಾಡಲಿದೆ ಎಂದು ತಿಳಿಸಿದೆ. ಇಲ್ಲಿನ ಸರಕಾರದ ಈ ನಡೆಯೂ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದೆ, ಅನೇಕರು ಈ ಬಗ್ಗೆ ಶ್ಲಾಘಿಸಿದ್ದಾರೆ.
ಬಳಕೆದಾರರೊಬ್ಬರು ಮನುಷ್ಯರನ್ನು ಮಾನವೀಯವಾಗಿ ನಡೆಸಿಕೊಳ್ಳುವುದನ್ನು ನೋಡಲು ಅದ್ಭುತವಾಗಿದೆ ಎಂದಿದ್ದಾರೆ. ಮತ್ತೊಬ್ಬರು ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಯುಎಇಯನ್ನು ಪ್ರೀತಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇತರ ದೇಶಗ ಳಾಗಿದ್ದರೆ ಇಂತಹ ತುರ್ತು ಪರಿಸ್ಥಿತಿ ಯಲ್ಲಿ ಹೋಟೆಲ್ ದರಗಳನ್ನು ಹೆಚ್ಚು ಮಾಡುತ್ತಿದ್ದವು. ಆದರೆ ಯುಎಇ ಸರ್ಕಾರ ನಿಜಕ್ಕೂ ಗ್ರೇಟ್ ಎಂದು ಹಲವಾರು ಮೆಚ್ಚುಗೆ ನೀಡಿದ್ದಾರೆ.