ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಸ್ತ್ರಾಸ್ತ್ರ ತಪಾಸಣೆ ವೇಳೆ ಏರ್ ಇಂಡಿಯಾ ಪ್ರಯಾಣಿಕನಿಂದ ಗುಂಡಿನ ದಾಳಿ; ಇಬ್ಬರಿಗೆ ಗಾಯ

Air India Express: ಮುಂಬೈಗೆ ತೆರಳುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹತ್ತುವಾಗ ಶಸ್ತ್ರಾಸ್ತ್ರ ತಪಾಸಣೆ ನಡೆಸುವ ವೇಳೆ ಪ್ರಯಾಣಿಕನೊಬ್ಬ ಏಕಾಏಕಿ ಗುಂಡು ಹಾರಿಸಿರುವ ಘಟನೆ ವಾರಣಾಸಿ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಗುಂಡು ಹಾರಿಸಿದ ಪರಿಣಾಮ ಇಬ್ಬರು AAICLAS ಸ್ಕ್ರೀನರ್‌ಗಳು ಗಾಯಗೊಂಡಿದ್ದಾರೆ

ಶಸ್ತ್ರಾಸ್ತ್ರ ತಪಾಸಣೆ ವೇಳೆ ಏರ್ ಇಂಡಿಯಾ ಪ್ರಯಾಣಿಕನಿಂದ ಗುಂಡಿನ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 16, 2026 1:39 PM

ಲಕ್ನೋ: ಮುಂಬೈಗೆ ತೆರಳುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನ ಹತ್ತುವಾಗ ಶಸ್ತ್ರಾಸ್ತ್ರ ತಪಾಸಣೆ ನಡೆಸುವ ವೇಳೆ ಪ್ರಯಾಣಿಕನೊಬ್ಬ ಏಕಾಏಕಿ ಗುಂಡು ಹಾರಿಸಿರುವ ಘಟನೆ ವಾರಣಾಸಿ ಏರ್‌ಪೋರ್ಟ್‌ನಲ್ಲಿ (Varanasi Airport ) ನಡೆದಿದೆ. ಗುಂಡು ಹಾರಿಸಿದ ಪರಿಣಾಮ ಇಬ್ಬರು AAICLAS ಸ್ಕ್ರೀನರ್‌ಗಳು ಗಾಯಗೊಂಡಿದ್ದಾರೆ ಎಂದು ವಾರಣಾಸಿ ವಿಮಾನ ನಿಲ್ದಾಣ ನಿರ್ದೇಶಕರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 16, 2026 ರಂದು ಬೆಳಿಗ್ಗೆ 9.30 ರ ಸುಮಾರಿಗೆ ನಡೆದಿದೆ.

ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಶಸ್ತ್ರಾಸ್ತ್ರ ತಪಾಸಣೆ ವೇಳೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ ತಪಾಸಣೆ ನಡೆಸುತ್ತಿದ್ದ ಇಬ್ಬರು AAICLAS ಸ್ಕ್ರೀನಿಂಗ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಸ್ಕ್ರೀನರ್‌ಗಳಾದ ಒಬ್ಬ ಮಹಿಳೆಯ ಪಾದಕ್ಕೆ ಪೆಟ್ಟು ಬಿದ್ದಿದ್ದು, ಪುರುಷ ಸ್ಕ್ರೀನರ್‌ ಹೆಬ್ಬೆರಳಿಗೆ ಪೆಟ್ಟು ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಘಟನೆಯ ನಂತರ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರಯಾಣಿಕನು ತನ್ನ ಬಳಿ ಶಸ್ತ್ರಾಸ್ತ್ರ ಇರುವುದಾಗಿ ಹೇಳಿಕೊಂಡಿದ್ದಾನೆ. ಬಳಿಕ ಏರ್‌ ಇಂಡಿಯಾ ಸಿಬ್ಬಂದಿ ತಪಾಸಣೆ ನಡೆಸಲು ಶುರು ಮಾಡಿದ್ದಾರೆ. ಈ ವೇಳೆ ಗನ್‌ ತೆಗೆದ ಪ್ರಯಾಣಿಕ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಇಬ್ಬರು AAICLAS ಸ್ಕ್ರೀನಿಂಗ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಿಬ್ಬರನ್ನೂ ಚಿಕಿತ್ಸೆಗಾಗಿ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಮದ್ಯ ಸೇವಿಸಿದ್ರಾ ಏರ್‌ ಇಂಡಿಯಾ ಪೈಲಟ್‌? ದಿಢೀರ್​ 300 ಅಡಿ ಆಳಕ್ಕೆ ಕುಸಿದ ಫುಕೆಟ್-ದೆಹಲಿ ವಿಮಾನ

ವಿಮಾನ ನಿಲ್ದಾಣದ ನಿರ್ದೇಶಕರ ಹೇಳಿಕೆಯು ವಿಮಾನದಲ್ಲಿ ಘೋಷಿಸಲಾದ ಶಸ್ತ್ರಾಸ್ತ್ರಗಳು, ಗುಂಡು ಹಾರಿಸಿದ ಸಂದರ್ಭಗಳು ಅಥವಾ ಗಾಯಗೊಂಡ ಇಬ್ಬರು ಸ್ಕ್ರೀನರ್‌ಗಳ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ.