ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

All Party Delegation: ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ: ಭಾರತದ ಸಂದೇಶ ಹೊತ್ತು ವಿವಿಧ ದೇಶಗಳಿಗೆ ಸಾಗಲಿದೆ ಸರ್ವಪಕ್ಷ ಸಂಸದರ ನಿಯೋಗ; ಆ 7 ಎಂಪಿಗಳು ಯಾರು?

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನದ ವಿರುದ್ಧ ಬಲವಾದ ರಾಜತಾಂತ್ರಿಕ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರವು ಸಂಸದರಾದ ಶಶಿ ತರೂರ್, ಸಂಜಯ್ ಕುಮಾರ್ ಝಾ, ಕನಿಮೋಳಿ ಕರುಣಾನಿಧಿ, ಸುಪ್ರಿಯಾ ಸುಳೆ ಸೇರಿದಂತೆ ಏಳು ಸರ್ವಪಕ್ಷ ಸಂಸದರ ನಿಯೋಗವನ್ನು (All Party Delegation) ರಚಿಸಿದೆ. ಇವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉನ್ನತ ಮಟ್ಟದ ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಸರ್ವಪಕ್ಷಗಳ ನಿಯೋಗ: ತರೂರ್, ಸುಳೆ ಸೇರಿ  7 ಸಂಸದರ ಆಯ್ಕೆ

ನವದೆಹಲಿ: ಉಗ್ರರ ವಿರುದ್ಧ (terror attack) ನಡೆಸಿದ ಆಪರೇಷನ್ ಸಿಂದೂರ್ ( Operation Sindoor) ಕಾರ್ಯಯೋಜನೆಯ ಕುರಿತು ಹಾಗೂ ಉಗ್ರರ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯನ್ನು ( zero tolerance for terrorism) ವಿಶ್ವ ವೇದಿಕೆಯಲ್ಲಿ ತಿಳಿಸಲು ಹಾಗೂ ಭಾರತದ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಮುಂದಿನ ನಡೆಯ ಕುರಿತು ಪ್ರಸ್ತಾಪಿಸಲು ರಚಿಸಿರುವ ವಿವಿಧ ನಿಯೋಗಗಳಿಗೆ (All Party Delegation) ಶಶಿ ತರೂರ್, ಸುರಪ್ರಿಯಾ ಸುಳೆ ಸೇರಿದಂತೆ 7 ಸಂಸದರನ್ನು ಆಯ್ಕೆ ಮಾಡಲಾಗಿದೆ. ಈ ನಿಯೋಗದಲ್ಲಿ ವಿವಿಧ ಪಕ್ಷಗಳ ಸಂಸತ್ ಸದಸ್ಯರು, ಪ್ರಮುಖ ರಾಜಕೀಯ ವ್ಯಕ್ತಿಗಳು ಮತ್ತು ಗಣ್ಯ ರಾಜತಾಂತ್ರಿಕರು ಇರಲಿದ್ದಾರೆ.

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನದ ವಿರುದ್ಧ ಬಲವಾದ ರಾಜತಾಂತ್ರಿಕ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರವು ಏಳು ಸರ್ವಪಕ್ಷ ಸಂಸದರ ನಿಯೋಗವನ್ನು ರಚಿಸಿದೆ. ಇವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉನ್ನತ ಮಟ್ಟದ ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಕಾರ ಈ ನಿಯೋಗದ ಮುಖ್ಯ ಗುರಿ ಭಯೋತ್ಪಾದನೆಯನ್ನು ಎದುರಿಸಲು ಭಾರತದ ರಾಷ್ಟ್ರೀಯ ಒಮ್ಮತ ಮತ್ತು ದೃಢನಿಶ್ಚಯದ ವಿಧಾನವನ್ನು ಪ್ರದರ್ಶಿಸುವುದಾಗಿದೆ. ನಿಯೋಗದ ಸದಸ್ಯರು ಭಯೋತ್ಪಾದನೆಯ ವಿರುದ್ಧ ದೇಶದ ಶೂನ್ಯ ಸಹಿಷ್ಣುತೆಯ ಬಲವಾದ ಸಂದೇಶವನ್ನು ಜಗತ್ತಿನ ಮುಂದೆ ಇಡಲಿದ್ದಾರೆ ಎನ್ನಲಾಗಿದೆ.

ನಿಯೋಗದಲ್ಲಿರುವ ಸಂಸದರು

ವಿವಿಧ ಪಕ್ಷಗಳ ಸಂಸತ್ ಸದಸ್ಯರು, ಪ್ರಮುಖ ರಾಜಕೀಯ ವ್ಯಕ್ತಿಗಳು ಮತ್ತು ಗಣ್ಯ ರಾಜತಾಂತ್ರಿಕರನ್ನು ಒಳಗೊಂಡಿರುವ ಈ ನಿಯೋಗದಲ್ಲಿ ಸಂಸದರಾದ ಕಾಂಗ್ರೆಸ್ ನ ಶಶಿ ತರೂರ್, ಬಿಜೆಪಿಯ ರವಿಶಂಕರ್ ಪ್ರಸಾದ್, ಜೆಡಿಯುನ ಸಂಜಯ್ ಕುಮಾರ್ ಝಾ, ಬಿಜೆಪಿಯ ಬೈಜಯಂತ್ ಪಾಂಡಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಇದ್ದಾರೆ.

ನಿಯೋಗದ ಕಾರ್ಯವೇನು?

ಸುಮಾರು 40 ಸದಸ್ಯರನ್ನು ಒಳಗೊಂಡಿರುವ ನಿಯೋಗವನ್ನು ಏಳು ಗುಂಪುಗಳಾಗಿ ರಚಿಸಲಾಗುತ್ತದೆ. ಈ ತಂಡಗಳು ವಿಶ್ವದ ವಿವಿಧ ದೇಶಗಳಿಗೆ ತೆರಳಿ ಭಯೋತ್ಪಾದನೆಯ ವಿರುದ್ಧ ದೇಶದ ಶೂನ್ಯ ಸಹಿಷ್ಣುತೆಯನ್ನು ತಿಳಿಸಲಿದ್ದಾರೆ. ಈ ಏಳು ನಿಯೋಗಗಳಲ್ಲಿರುವ ಇತರ ಸದಸ್ಯರ ಹೆಸರುಗಳನ್ನು ಇನ್ನೂ ಘೋಷಿಸಲಾಗಿಲ್ಲ. ಪ್ರತಿ ನಿಯೋಗವು ಏಳರಿಂದ ಎಂಟು ಸದಸ್ಯರನ್ನು ಒಳಗೊಂಡಿದ್ದು, ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡಲಿದೆ.

ನಿಯೋಗದ ಪ್ರವಾಸ ಯಾವಾಗ?

ಮೇ 23ರಿಂದಲೇ ಈ ನಿಯೋಗ ವಿಶ್ವದಾದ್ಯಂತ ಪ್ರವಾಸ ಮಾಡಲಿದೆ. ಸುಮಾರು 10 ದಿನಗಳ ಈ ಪ್ರವಾಸದಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ದಕ್ಷಿಣ ಆಫ್ರಿಕಾ ಮತ್ತು ಜಪಾನ್ ಸೇರಿದಂತೆ ಹಲವಾರು ಪ್ರಮುಖ ದೇಶಗಳ ರಾಜಧಾನಿಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ISIS Terrorist: ಮುಂಬೈ ಏರ್‌ಪೋರ್ಟ್‌ನಲ್ಲಿ ಇಬ್ಬರು ಐಸಿಸ್‌ ಉಗ್ರರು ಅರೆಸ್ಟ್‌

ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಹುಟ್ಟಿಕೊಂಡಿರುವ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಮಂಡಿಸಲು ಇದೇ ಮೊದಲ ಬಾರಿಗೆ ಕೇಂದ್ರವು ಹಲವು ಪಕ್ಷಗಳ ಸಂಸದರನ್ನು ನಿಯೋಜಿಸಿದೆ. ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ನಿಯೋಗದ ಪ್ರವಾಸ ಯೋಜನೆಯನ್ನು ಮುನ್ನಡೆಸುತ್ತಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅತ್ಯಂತ ಮುಖ್ಯವಾದ ಕ್ಷಣದಲ್ಲಿ ಭಾರತ ಒಗ್ಗಟ್ಟಾಗಿದೆ. ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ಭಯೋತ್ಪಾದನೆಗೆ ನಮ್ಮ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಹೊತ್ತುಕೊಂಡು ತೆರಳಲಿದೆ. ರಾಜಕೀಯ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ ಇದು ಎಂದು ಹೇಳಿದ್ದಾರೆ.