ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಬ್ದುಲ್ ಕಲಾಂಗೂ ಮುನ್ನ ರಾಷ್ಟ್ರಪತಿ ಹುದ್ದೆಗೆ ಅಟಲ್ ಬಿಹಾರಿ ವಾಜಪೇಯಿ ಹೆಸರು ಪ್ರಸ್ತಾಪ; ಎಲ್‌ಕೆ ಅಡ್ವಾಣಿಗೆ ಪಿಎಂ ಪಟ್ಟ ಕಟ್ಟಲು ಮುಂದಾಗಿತ್ತು ಬಿಜೆಪಿ: ಅಚ್ಚರಿಯ ವಿವರ ಬಹಿರಂಗ

ಅಬ್ದುಲ್ ಕಲಾಂ ಅವರ ಹೆಸರು ರಾಷ್ಟ್ರಪತಿ ಹುದ್ದೆಗೆ ಪ್ರಸ್ತಾಪವಾಗುವ ಮೊದಲು ಅಟಲ್ ಬಿಹಾರಿ ವಾಜಪೇಯಿ ಹೆಸರನ್ನು ಬಿಜೆಪಿ ಪ್ರಸ್ತಾಪಿಸಿತ್ತು. ಈ ಕುರಿತು ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಅಶೋಕ್ ಟಂಡನ್ ಅವರು ತಮ್ಮ ಪುಸ್ತಕ ಅಟಲ್ ಸ್ಮರಣ್‌ನಲ್ಲಿ ಹೇಳಿದ್ದಾರೆ. ಬಳಿಕ ಯಾಕೆ ಅವರ ಹೆಸರನ್ನು ಕೈಬಿಡಲಾಯಿತು ಎನ್ನುವ ಮಾಹಿತಿ ಇದರಲ್ಲಿದೆ.

ರಾಷ್ಟ್ರಪತಿ ಆಗಬೇಕಿತ್ತು ಅಟಲ್ ಬಿಹಾರಿ ವಾಜಪೇಯಿ

(ಸಂಗ್ರಹ ಚಿತ್ರ) -

ನವದೆಹಲಿ: ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರಿಗೂ ಮೊದಲು ದೇಶದ ಹನ್ನೊಂದನೇ ರಾಷ್ಟ್ರಪತಿ ( President) ಹುದ್ದೆಗೆ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಹೆಸರನ್ನು ಭಾರತೀಯ ಜನತಾ ಪಕ್ಷ (BJP) ಪ್ರಸ್ತಾಪಿಸಿತ್ತು. ಅಲ್ಲದೇ ಪ್ರಧಾನ ಮಂತ್ರಿ ( prime minister) ಹುದ್ದೆಯನ್ನು ಲಾಲ್ ಕೃಷ್ಣ ಅಡ್ವಾಣಿ ( Lal Krishna Advani) ಅವರಿಗೆ ನೀಡುವುದಾಗಿ ಪ್ರಸ್ತಾಪಿಸಲಾಗಿತ್ತು. ಆದರೆ ಆಗಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇದನ್ನು ನಿರಾಕರಿಸಿದರು. ಬಹುಮತದ ಗ್ಯಾರಂಟಿ ಇರುವುದರಿಂದ ತಾನು ರಾಷ್ಟ್ರಪತಿಯಾಗುವುದು ತಪ್ಪು ಎಂದು ಅವರು ಹೇಳಿದ್ದರು ಎಂಬುದಾಗಿ ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಅಶೋಕ್ ಟಂಡನ್ ಅವರು ತಮ್ಮ ಪುಸ್ತಕ 'ಅಟಲ್ ಸ್ಮರಣ್‌'ನಲ್ಲಿ ತಿಳಿಸಿದ್ದಾರೆ.

ಪ್ರಭಾತ್ ಪ್ರಕಾಶನ ಪ್ರಕಟಿಸಿರುವ ಅಶೋಕ್ ಟಂಡನ್ ಅವರು ಬರೆದಿರುವ ಅಟಲ್ ಸ್ಮರಣ್‌ನಲ್ಲಿ ಅವರು, ವಾಜಪೇಯಿ ಅವರ ಕುರಿತಾಗಿ ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 2002ರಲ್ಲಿ ಅಬ್ದುಲ್ ಕಲಾಂ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ವಿರೋಧ ಪಕ್ಷದ ಬೆಂಬಲದೊಂದಿಗೆ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ್ದು, 2007 ರವರೆಗೆ ಈ ಹುದ್ದೆಯಲ್ಲಿದ್ದರು.

A Narayanaswamy: ಸಮರ್ಪಕವಾಗಿ ಒಳಮೀಸಲಾತಿ ಜಾರಿಗೊಳಿಸದಿದ್ರೆ ಸರ್ಕಾರ ಕಿತ್ತೊಗೆಯುವ ಸಂಕಲ್ಪ: ಎ. ನಾರಾಯಣಸ್ವಾಮಿ

ಅಟಲ್ ಬಿಹಾರಿ ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿ ಟಂಡನ್ 1998 ರಿಂದ 2004 ರವರೆಗೆ ಕಾರ್ಯ ನಿರ್ವಹಿಸಿದ್ದರು. 2002ರಲ್ಲಿ ವಾಜಪೇಯಿ ಅವರನ್ನು ರಾಷ್ಟ್ರಪತಿ ಮಾಡುವ ಪ್ರಸ್ತಾಪ ಮಾಡಲಾಗಿತ್ತು. ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಪ್ರಧಾನಿಯಾಗಿ ಮಾಡುವ ಪ್ರಸ್ತಾಪವಾಗಿತ್ತು. ಆದರೆ ಪಕ್ಷದ ಸಲಹೆಯನ್ನು ವಾಜಪೇಯಿ ತಿರಸ್ಕರಿಸಿದ್ದರು.

ಜನಪ್ರಿಯ ಪ್ರಧಾನಿ ಬಹುಮತದ ಬಲದಿಂದ ರಾಷ್ಟ್ರಪತಿಯಾಗುವುದು ಭಾರತೀಯ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದ್ದರು. ಇದು ತಪ್ಪು, ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ ಎಂದು ಅವರು ತಿಳಿಸಿದ್ದರು.

ರಾಷ್ಟ್ರಪತಿ ಹುದ್ದೆಗೆ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಾಜಪೇಯಿ ಅವರು ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದರು. ಈ ವೇಳೆ ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ ಮತ್ತು ಡಾ. ಮನಮೋಹನ್ ಸಿಂಗ್ ಬಂದಿದ್ದರು ಎಂಬುದಾಗಿ ಟಂಡನ್ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ.

ಎನ್‌ಡಿಎ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯಾಗಿ ತಮ್ಮ ಅಭ್ಯರ್ಥಿ ಘೋಷಣೆ ಮಾಡಿದಾಗ ಸಭೆಯಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಇದು ಆಶ್ಚರ್ಯಕರವಾಗಿದ್ದು, ಅವರನ್ನು ಬೆಂಬಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ ಎಂದು ಟಂಡನ್ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ನೀತಿ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಇಬ್ಬರು ನಾಯಕರ ನಡುವಿನ ಸಂಬಂಧವು ಸಾರ್ವಜನಿಕವಾಗಿ ಎಂದಿಗೂ ಹದಗೆಡಲಿಲ್ಲ. ಅಡ್ವಾಣಿ ಯಾವಾಗಲೂ ಅಟಲ್‌ಜಿ ಅವರನ್ನು "ನನ್ನ ನಾಯಕ ಮತ್ತು ಸ್ಫೂರ್ತಿಯ ಮೂಲ" ಎಂದು ಕರೆಯುತ್ತಿದ್ದರು ಎಂದು ತಿಳಿಸಿದ್ದಾರೆ.

Karnataka Winter Session: ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ನಕಲು ಮಾಡಿ ಬೇರೆ ರಾಜ್ಯಗಳಲ್ಲಿ ಗೆಲ್ಲುತ್ತಿದೆ: ಡಿ.ಕೆ.ಶಿವಕುಮಾರ್‌

2001ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ವಾಜಪೇಯಿ ಅವರು ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಫೋನ್ ಮೂಲಕ ಸಂಭಾಷಣೆ ನಡೆಸಿದ್ದರು. ಅವರ ಸುರಕ್ಷತೆ ಬಗ್ಗೆ ಕೇಳಿದ್ದರು. ದಾಳಿಯ ಬಳಿಕ ತಮ್ಮ ನಿವಾಸದಲ್ಲಿ ಕುಳಿತು ವಾಜಪೇಯಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ದೂರದರ್ಶನದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ವೀಕ್ಷಿಸಿದ್ದರು ಎಂದು ಟಂಡನ್ ಹೇಳಿದ್ದಾರೆ.